Asianet Suvarna News Asianet Suvarna News

ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ ನೀರು ವ್ಯತ್ಯಯ

*  ಬೆಂಗಳೂರಿನ ಹಲವೆಡೆ ನೀರು ವ್ಯತ್ಯಯ
* ಪ್ರಕಟಣೆಯಲ್ಲಿ ವಿವರ ತಿಳಿಸಿದ ಬೆಂಗಳೂರು ಜಲಮಂಡಳಿ
* ಗಾಂಧಿನಗರ, ಕುಮಾರಪಾರ್ಕ್, ವಸಂತನಗರ, ಹೈಗ್ರೌಂಡ್ಸ್, ಸಂಪಂಗಿರಾಮನಗರದಲ್ಲಿ ವ್ಯತ್ಯಯ
* ಓವರ್ ಲೋಡ್ ಟ್ಯಾಂಕ್ ಗಳನ್ನು ಒಂದೇ ಲೈನ್ ಗೆ ತರಲಾಗುವುದು

Bengaluru Water supply to be disrupted on September 12 and 13 mah
Author
Bengaluru, First Published Sep 12, 2021, 5:47 PM IST
  • Facebook
  • Twitter
  • Whatsapp

ಬೆಂಗಳೂರು(ಸೆ. 12)  ಬೆಂಗಳೂರಿನ ಕೆಲವು ಪ್ರದೇಶದ  ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ಭಾನುವಾರ ಮತ್ತು ಸೋಮವಾರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  ಕಾವೇರಿ ಮೂರನೇ ಹಂತದ ಟಿಕೆ ಹಳ್ಳಿ ಪ್ರದೇಶದ ಪಂಪಿಂಗ್ ಸ್ಟೇಶನ್ ಸುತ್ತ ಮುತ್ತ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. 

ಗಾಂಧಿನಗರ, ಕುಮಾರಪಾರ್ಕ್, ವಸಂತನಗರ, ಹೈಗ್ರೌಂಡ್ಸ್, ಸಂಪಂಗಿರಾಮನಗರ, ಸಿಕೆಸಿ ಗಾರ್ಡರ್, ಕೆಎಸ್ ಗಾರ್ಡನ್, ಟೌನ್ ಹಾಲ್, ಲಾಲ್ ಬಾಗ್ ರಸ್ತೆ 1ರಿಂದ  4ನೇ ಕ್ರಾಸ್, ಧರ್ಮರಾಯ ಸ್ವಾಮಿ  ಟೆಂಪಲ್ ರಸ್ತೆ, ಕಬ್ಬನ್ ಪೇಟೆ, ನಾಗರ್ತಪೇಟೆ, ಕುಂಬಾರಪೇಟೆ, ಕಾಟನ್  ಪೇಟೆ,  ಚಿಕ್ಕಪೇಟೆ, ಬಕ್ಷಿಗಾರ್ಡನ್, ಭಾರತಿನಗರ, ಸೆಂಟ್ ಜಾನ್ಸ್ ರಸ್ತೆ, ಹೈನೀಸ್ ರಸ್ತೆಯಲ್ಲಿ ನೀರು ವ್ಯತ್ಯಯವಾಗಲಿದೆ.

ಬೆಂಗಳೂರಿಗೂ ಡೆಲ್ಟಾ ಕಾಟ.. ಏನಿದೆ ಅಪ್ ಡೇಟ್

ಪೀಳ್ಳಣ್ಣ ಗಾರ್ಡನ್, ಖುಷಿನಗರ, ಪಿ ಆಂಡ್ ಟಿ ಕಾಲೋನಿ, ಮುನೇಶ್ವರ ನಗರ ಡಿಜೆ ಹಳ್ಳಿ, ಪಿಳ್ಳಣ್ಣ ಗಾರ್ಡನ್, ಕೆಜಿ ಹಳ್ಳಿ, ನಾಗವಾರ, ಸರನಾದಾ ನಗರ, ನ್ಯೂ ಬೇಗೂರು, ಹಳೆ ಬೇಗೂರು, ಲಿಂಗರಾಜಪುರ, ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ ಸುತ್ತ ಮುತ್ತ ನೀರು ವ್ಯತ್ಯಯವಾಗಲಿದೆ.

ಓವರ್ ಲೋಡ್ ಟ್ಯಾಂಕ್ ಗಳನ್ನು ನಾಶ ಮಾಡಿ ಎಲ್ಲವನ್ನು ಒಂದೇ ಲೈನಿಗೆ ತರುತ್ತೇನೆ ಎಂದು ಬೆಂಗಳೂರು ಜಲಮಂಡಳಿ ಹೇಳಿದ್ದು ಒಂದು ಕಡೆಯಿಂದ ಕೆಲಸ ಆರಂಭಿಸಿಕೊಂಡು ಬಂದಿದೆ. 

ಇಂಗ್ಲಿಷ್ ನಲ್ಲಿಯೋ ಓದಿ

Follow Us:
Download App:
  • android
  • ios