* ದುರಸ್ತಿ ಕಾರಣಕ್ಕೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ* ಕಚನಾಯಕನಹಳ್ಳಿ, ಜಿಗಣಿ ಲಿಂಕ್ ರೋಡ್, ಬೊಮ್ಮಸಂದ್ರ, ಬೊಮ್ಮಸಂದ್ರ* ಕಳೆದ ವಾರ ಜಯನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು

ಬೆಂಗಳೂರು(ಆ. 16) ಆಗಸ್ಟ್ 17 ಮಂಗಳವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಳಗ್ಗೆ 9 ರಿಂದ ಸಂಜೆ 5 ರ ತನಕ ವ್ಯತ್ಯಯವಾಗಲಿದೆ. 

ಕಚನಾಯಕನಹಳ್ಳಿ, ಜಿಗಣಿ ಲಿಂಕ್ ರೋಡ್, ಬೊಮ್ಮಸಂದ್ರ, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ, ಬೊಮ್ಮಸಂದ್ರ ಎಸಿಸಿ ರಸ್ತೆ, ಸರ್ಫರಾಜ್ ರಸ್ತೆ, ಇನ್ಪೋಸಿಸ್ ಕಾಲೋನಿ, ಶ್ರೀರಾಮಪುರ ವಿಲೇಜ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ದುರಸ್ತಿ ಕೆಲಸ ನಡೆಯಲಿರುವ ಕಾರಣ ಯರಂದಹಳ್ಳಿಯಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರಿಗೆ ಬೆಸ್ಕಾಂ ಡಬಲ್ ಶಾಕ್ 

ದುರಸ್ತಿ ಕಾರಣಕ್ಕೆ ಕೆಲವು ದಿನ ಜಯನಗರ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಬೆಸ್ಕಾಂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿತ್ತು.