ಬೆಂಗಳೂರಿನ ಕೆಆರ್ ಸರ್ಕಲ್‌ನಲ್ಲಿ ಹೆಲ್ಮೆಟ್ ಇಲ್ಲದೆ ಐವರು ಒಂದೇ ಬೈಕ್‌ನಲ್ಲಿ ಸಂಚರಿಸುತ್ತಿರುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರು (ಮಾ.10): ಹೆಲ್ಮೆಟ್‌ ಇಲ್ಲದೆ ಸಣ್ಣ ಸಂದಿ-ಗೊಂದಿಯಲ್ಲಿ ಹೊಕ್ಕಿದರೂ ಬೆಂಗಳೂರು ಸಂಚಾರಿ ಪೊಲೀಸರು ಬಿಡೋದಿಲ್ಲ. ಕೆಲವೊಂದು ಸಿಗ್ನಲ್‌ಗಳಲ್ಲಿ ಸಿಗ್ನಲ್‌ ಜಂಪ್‌ ಮಾಡಿದರಂತೂ ದಂಡ ಫಿಕ್ಸ್‌. ಇನ್ನೂ ಕೆಲವು ಜಂಕ್ಷನ್‌ಗಳಿಗೆ ಆ ಜಂಕ್ಷನ್‌ಗಳು ಬರುವ ಮುನ್ನವೇ ಸಂಚಾರಿ ಪೊಲೀಸರು ಇದು ಜೀರೋ ವಯೋಲೇಷನ್‌ ಜಂಕ್ಷನ್‌ (ಅಂದ್ರೆ ಟ್ರಾಫಿಕ್‌ ಉಲ್ಲಂಘನೆ ಮಾಡಿದರೆ ದಂಡ ಖಂಡಿತವಾಗಿ ಬರುವ ಜಂಕ್ಷನ್‌) ಬೋರ್ಡ್‌ ಹಾಕಿರುತ್ತಾರೆ. ಅದರಲ್ಲಿ ಪ್ರಮುಖವಾಗಿರುವುದು ಕೆಆರ್‌ ಸರ್ಕಲ್‌. ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದಲೂ ವಾಹನ ಬರುವ ಕೆಲವೇ ಕೆಲವು ಜಂಕ್ಷನ್‌ಗಳಲ್ಲಿ ಇದೂ ಒಂದು. ಆದರೆ, ಈ ಟ್ರಾಫಿಕ್‌ ಜಂಕ್ಷನ್‌ನಲ್ಲಿಯೇ ರಾಜಾರೋಷವಾಗಿ ಟ್ರಾಫಿಕ್‌ ಉಲ್ಲಂಘನೆ ಮಾಡುವ ಪ್ರಕರಣ ವರದಿಯಾಗಿದೆ.

ಇಲ್ಲಿ ಹೇಳೋರೋ, ಕೇಳೋರು ಯಾರೂ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಟ್ರಾಫಿಕ್‌ ರೂಲ್ಸ್‌ ಎಲ್ಲಾ ಗೊತ್ತೇ ಇಲ್ಲ. ಬೈಕ್‌ನಲ್ಲಿ ಒಬ್ಬಿಬ್ಬರಲ್ಲ, ಒಂದೇ ಬೈಕ್‌ನಲ್ಲಿ ಐದು ಮಂದಿ ಪ್ರಯಾಣ ಮಾಡಿದ್ದಾರೆ. ಹೆಲ್ಮೆಟ್ ಇಲ್ಲ .. ಸೇಫ್ಟಿ ಅಂತೂ ಕೇಳೋ ಹಾಗೇ ಇಲ್ಲ. ಒಂದೊಂದು ಬೈಕ್ ಅಲ್ಲಿ 4/5 ಜನರ ಟ್ರಾವೆಲ್ ಇತರ ವಾಹನ ಸವಾರರಿಗೂ ಸಮಸ್ಯೆ ಉಂಟಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್ಚಿದ ಸಾರ್ವಜನಿಕರ ಆಗ್ರಹ ವ್ಯಕ್ತವಾಗಿದೆ.

Bengaluru: 'ಏ ಗಂಗೂ ಬೈಕು ಕಲಿಸಿಕೊಡೋ ನಂಗು..' ಎಂದು Fuel Tank ಮೇಲೆ ಕುಂತ ಹುಡುಗಿ, ಪೊಲೀಸರಿಗೆ ಇನ್ನೂ ಸಿಗದ ಲವರ್ಸ್!

ನಗರದ ಕೆಆರ್‌ ಸರ್ಕಲ್ ಅಲ್ಲಿ ಕಂಡು ಬಂದ ದೃಶ್ಯವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. KA 02 JX 7502 ನಂಬರ್‌ ಪ್ಲೇಟ್‌ನ ಆಕ್ಟೀವಾ ಸ್ಕೂಟರ್‌ನಲ್ಲಿ ಐದು ಮಂದಿ ಪ್ರಯಾಣ ಮಾಡಿದ ಚಿತ್ರವನ್ನು ಪೊಲೀಸರಿಗೆ ಮಾರ್ಚ್‌ 8 ರಂದೇ ಟ್ಯಾಗ್‌ ಮಾಡಲಿದೆ. ಈ ಫೋಟೋ ಹಂಚಿಕೊಂಡು ಎರಡು ದಿನ ಕಳೆದರೂ ಸ್ಕೂಟರ್‌ಅನ್ನು ಪತ್ತೆ ಹಚ್ಚಿ ಮಾಲೀಕನಿಗೆ ಕನಿಷ್ಠ ದಂಡ ಹಾಕುವ ಪ್ರಯತ್ನ ಕೂಡ ಆಗಿಲ್ಲ.

ಪೊಲೀಸರಿಗೆ ಸಿಕ್ರು ಬೈಕ್‌ನಲ್ಲಿ ಪೋಲಿ ರೈಡ್‌ ಮಾಡಿದ್ದ ಲವರ್ಸ್‌, ಇಬ್ಬರ ಮೇಲೂ ಬಿತ್ತು ಕೇಸ್‌!

Scroll to load tweet…