ಚಿಕ್ಕಮಗಳೂರು: ಹೆಬ್ಬೆ ಜಲಪಾತದಲ್ಲಿ ಈಜಲು ಹೋದ ಬೆಂಗಳೂರು ಟೆಕ್ಕಿ ಸಾವು

ಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೃತ ಅಮಿತ್ ಮೂಲತಃ ಛತ್ತೀಸ್‌ಘಡದವನಾಗಿದ್ದಾನೆ. ಮೃತ ಅಮಿತ್ ಸಲಾಂ ಕರೀಂ ಎಂಬ ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದ, ಸಲಾಂ ಕರೀಂ ಮೂಲತಃ ತಮಿಳು‌ನಾಡಿನ ಸ್ನೇಹಿತ

Bengaluru techie dies after going for a swim in Hebbe Falls in Chikkamagaluru grg

ಚಿಕ್ಕಮಗಳೂರು(ನ.03):  ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಟೆಕ್ಕಿ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು(ಭಾನುವಾರ) ನಡೆದಿದೆ. ಅಮಿತ್ ಕುಮಾರ್ (30) ಮೃತ‌ ದುರ್ದೈವಿ. 

ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೃತ ಅಮಿತ್ ಮೂಲತಃ ಛತ್ತೀಸ್‌ಘಡದವನಾಗಿದ್ದಾನೆ. ಮೃತ ಅಮಿತ್ ಸಲಾಂ ಕರೀಂ ಎಂಬ ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದ, ಸಲಾಂ ಕರೀಂ ಮೂಲತಃ ತಮಿಳು‌ನಾಡಿನ ಸ್ನೇಹಿತ. 

ಕರ್ನಾಟಕದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ರೆ ಕಂಟ್ರಾಕ್ಟರ್‌ಗಳನ್ನ ಏಕೆ ಬೀದಿ ಪಾಲು ಮಾಡ್ತೀರಾ?: ಡಿಕೆಶಿಗೆ ಸಿ.ಟಿ. ರವಿ ತಿರುಗೇಟು

ಬೆಂಗಳೂರಿನಲ್ಲಿ ಇಬ್ಬರು ಒಂದೇ ರೂಂನಲ್ಲಿದ್ದು, ಬೇರೆ-ಬೇರೆ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. 3 ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರು. ಇಂದು ಹೆಬ್ಬೆ ಜಲಪಾತದಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ  ಅಮಿತ್ ಕುಮಾರ್ ಸಾವನ್ನಪ್ಪಿದ್ದಾನೆ. 

ಫಾರೆಸ್ಟ್ ಗಾರ್ಡ್ ಆಳ ಇದೆ ಬೇಡ ಎಂದರೂ ಅಮಿತ್ ಕುಮಾರ್ ಈಜಲು ಹೋಗಿದ್ದನಂತೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios