ಶಿವಮೊಗ್ಗ-ಬೆಂಗಳೂರು ರೈಲು ಸಂಚಾರ ಸಮಯ ಬದಲು : ಗಮನಿಸಿ
ಶಿವಮೊಗ್ಗದಿಂದ ಸಂಚಾರ ಮಾಡುವ ರೈಲಿನ ಸಮಯ ಬದಲಾಗಿದೆ. ಯಶವಂತಪುರದಿಂದ - ಶಿವಮೊಗ್ಗ ನಡುವೆ ಸಂಚಾರ ಮಾಡುತ್ತಿದ್ದ ಜನಶತಾಬ್ದಿ ರೈಲು ಸಮಯ ಹಾಗೂ ಹೊರಡುವ ಸ್ಥಳವೂ ಬದಲಾಗಿದೆ.
ಶಿವಮೊಗ್ಗ (ಫೆ.01): ಶಿವಮೊಗ್ಗದಿಂದ - ಬೆಂಗಳೂರಿನ ಯಶವಂತಪುರಕ್ಕೆ ಸಂಚಾರ ಮಾಡುತ್ತಿದ್ದ ಜನಶತಾಬ್ದಿ ರೈಲು ವೇಳಾಪಟ್ಟಿ ಬದಲಾಗಿದೆ. ಬದಲಾದ ವೇಳಾಪಟ್ಟಿಗೆ ಅನುಗುಣವಾಗಿ ಪ್ರಯಾಣ ಆರಂಭವಾಗಿದೆ.
ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುತ್ತಿದ್ದ ಜನಶತಾಬ್ದಿ ರೈಲು ಜ.31ರಿಂದ ಬೆಳಗ್ಗೆ 5.15ಕ್ಕೆ ಹೊರಡುತ್ತಿದೆ.
ಇಷ್ಟು ದಿನ ಶಿವಮೊಗ್ಗದಿಂದ ಯಶವಂತಪುರದವರೆಗೆ ಮಾತ್ರ ಚಲಿಸುತ್ತಿದ್ದ ರೈಲು ಇನ್ನುಮುಂದೆ ಮೆಜೆಸ್ಟಿಕ್ ತಲುಪುತ್ತದೆ.
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ...
ಇನ್ನು ಮುಂದೆ ಯಶವಂತಪುರ ಬದಲಿಗೆ ಮೆಜೆಸ್ಟಿಕ್‌ನಿಂದ ಸಂಜೆ 5.15ಕ್ಕೆ ಹೊರಡುತ್ತದೆ. ಪ್ರಯಾಣಿಕರು ಬದಲಾಗಿರುವ ಸಮಯವನ್ನು ಗಮನಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.