ಬೆಂಗಳೂರು(ಜೂ.  06)  ಸಂಸದ ಡಿ.ಕೆ.ಸುರೇಶ್ ಮಾನವೀಯತೆ ಮೆರೆದಿದ್ದಾರೆ. ಅಪಘಾತಕ್ಕೀಡಾದ ಅಂಗವಿಕಲನಿಗೆ ಡಿ.ಕೆ.ಸುರೇಶ್ ನೆರವು  ನೀಡಿದ್ದಾರೆ.

ಬೆಂಗಳೂರು - ಕನಕಪುರ ಮಾರ್ಗ ಮಧ್ಯೆ ಕಗ್ಗಲಿಪುರ ರಸ್ತೆಯಲ್ಲಿ ಅಪಘಾತ  ಸಂಭವಿಸಿತ್ತು. ಎರಡು ಬೈಕ್ ಗಳ ನಡುವೆ ಡಿಕ್ಕಿ, ಅಂಗವಿಕಲ ಗಾಯಗೊಂಡಿದ್ದರು. ಕನಕಪುರದ ಕೋಟೆ ನಿವಾಸಿ ಜಯರಾಮು ಗಾಯಗೊಂಡಿದ್ದರು. 

ಕಣ್ಣೇದುರೆ ಅಪಘಾತವಾದರೂ ಕಾರಿಂದ ಇಳಿಯದ ಶಾಸಕ

ತಕ್ಷಣವೇ ಅಂಗವಿಕಲನ ನೆರವಿಗೆ ನಿಂತ ಡಿ.ಕೆ.ಸುರೇಶ ಬೆಸ್ಕಾಂ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಜಯರಾಮು ಕೈ, ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿ.ಕೆ.ಸುರೇಶ್ ಗೆ ನಾಗರಿಕರು ಧನ್ಯವಾದ ತಿಳಿಸಿದ್ದಾರೆ.