ಬೆಂಗಳೂರು (ಜ.  12)   ಬೆಂಗಳೂರು ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದ ಅವರು ವಿಧಿವಶರಾಗಿದ್ದಾರೆ. 91 ವರ್ಷ ವಯಸ್ಸಿನ ಹರ್ಷಾನಂದ  ಅವರಿಗೆ ಮಧ್ಯಾಹ್ನ 1.05ರ ಸುಮಾರಿಗೆ ಹೃದಯಾಘಾತವಾಗಿದೆ. 

ಹರ್ಷಾನಂದ ಅವರ ನಿಧನಕ್ಕೆ ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದನಾಥ ಅವರು ಸಂತಾಪ ಸೂಚಿಸಿದ್ದಾರೆ.  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ....

ಆಗಲೇ ಆತ್ಮ ನಿರ್ಭರ ಭಾರತ ಕನಸು ಕಂಡಿದ್ದ  ವೀರ ಸನ್ಯಾಸಿ

ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರು ಅವರು. ಉತ್ತಮ ವಾಗ್ಮಿಗಳೂ ಆಗಿದ್ದರು ಹರ್ಷಾನಂದ ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ.

ಭಗವಂತನು ಅವರಿಗೆ ಮೋಕ್ಷವನ್ನು ಕರುಣಿಸಲಿ. ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸ್ವಾಮಿ ಹರ್ಷಾನಂದರು ವಿಧಿವಶರಾದ ಸುದ್ದಿ ತೀವ್ರ ಆಘಾತ ಉಂಟಾಯಿತು. ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಪ್ರಚಾರಕ್ಕೆ ಹಾಗೂ ಶ್ರೀ ರಾಮಕೃಷ್ಣ ಮಠದ ಶ್ರೇಯೋವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ಹರ್ಷಾನಂದರು ತಮ್ಮ ಸರಳತೆ ಹಾಗೂ ಸನ್ಯಾಸತ್ವದ ಪರಿಪೂರ್ಣತೆಯಿಂದಲೇ ಎಲ್ಲರಿಗೂ ಪೂಜನೀಯರಾಗಿದ್ದರು.

ಅಂತಹ ಮಹಾನ್‌ ಚೇತನ ಅಗಲಿರುವುದು ನನಗೆ ತೀವ್ರ ದುಃಖವುಂಟು ಮಾಡಿದೆ. ನಮ್ಮೆಲ್ಲರನ್ನು ಸದಾ ಎಚ್ಚರಿಸುತ್ತಿದ್ದ ಚೇತನ, ಅರಿವಿನ ಬೆಳಕು ಇಲ್ಲವಾಗಿರುವುದು ನೋವುಂಟು ಮಾಡಿದೆ. ಆ ಮಹಾನ್‌ ಚೇತನಕ್ಕೆ ಚಿರಶಾಂತಿ ಸಿಗಲಿ ಭಕ್ತಿಯಿಂದ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂತಾಪ ತಿಳಿಸಿದ್ದಾರೆ.