ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: 2 ದಿನಗಳ ಕಾಲ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ!
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾರ್ಯದಿಂದಾಗಿ ಗುರುವಾರ ಮತ್ತು ಶುಕ್ರವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ರವರೆಗೆ ಮತ್ತು ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ವಿದ್ಯುತ್ ಇರುವುದಿಲ್ಲ.
ಬೆಂಗಳೂರು (ಡಿ.18): ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಬೆಳಗ್ಗೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇದರಿಂದ ಈ ಏರಿಯಾಗಳಲ್ಲಿನ ಜನರು ಎಚ್ಚೆತ್ತುಕೊಂಡು ನಿಮ್ಮ ದಿನನಿತ್ಯದ ಕಾರ್ಯಗಳನ್ನು ಬೆಳಗ್ಗೆ 10 ಗಂಟೆಯೊಳಗೆ ಪೂರ್ಣಗೊಳಿಸಿ.
ನಾಳೆ ಬೆಳಗ್ಗೆ 10 ರಿಂದ ಮಧ್ಯಾಹ್ನ 4ಗಂಟೆವರೆಗೆ ಎ.ಕೆ.ಅಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ ೧ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರೀಯ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್ ಭುವನೇಶ್ವರಿನಗರ, ಬಿ.ಇ.ಎಲ್. ಕಾರ್ಪೋರೇಟ್ ಆಫೀಸ್ ಚಾಣಕ್ಯ ಲೇಔಟ್ ನಾಗವಾರ, ಎಂ.ಎಸ್. ರಾಮಯ್ಯ ಉತ್ತರ ಸಿಟಿ, ಥಣಿಸಂದ್ರ ಮುಖ್ಯ ರಸ್ತೆ, ಆಶಿರ್ವಾದ್ ನಗರ, ಅಮರಜ್ಯೋತಿ ಲೇಔಟ್ ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್‌ಕ್ಲೇವ್, ಶ್ರೀರಾಂಪುರ ವಿಲೇಜ್, ವಿ.ಹೆಚ್.ಬಿ.ಸಿ.ಎಸ್ ಲೇಔಟ್ ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, 17 ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳು ಇದರಲ್ಲಿ ಇರಲಿವೆ.
ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ ಟ್ಯಾಕ್ಸಿ: ಊಬರ್ ಆ್ಯಪ್ ಹೆಸರಲ್ಲಿ ವಂಚನೆ
ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶುಕ್ರವಾರದಂದು ಮಾನ್ಯತಾ ಕಾಫಿ ಬೋರ್ಡ್ ಲೇಔಟ್, ಮರಿಯನಪಾಳ್ಯ, ಮಾನ್ಯತಾ ನಿವಾಸ, ಶ್ರೀ ಭಾಗ್ಯ ಶ್ರೀ ಲೇಔಟ್ ಮತ್ತು ರಾಚೇನಹಳ್ಳಿ ಐಬ್ರೋಕ್ಸ್ ಅಮರಜ್ಯೋತಿ ಲೇಔಟ್, ಫಾತಿಮಾ ಲೇಔಟ್, ಅಂಜನಾದ್ರಿ ಲೇಔಟ್ ಮಂತ್ರಿ ಲಿಥೋಸ್ ಮತ್ತು ಶೋಭಾ ಸಿಟಿ, ಚೊಕ್ಕನಹಳ್ಳಿ ಡೊಮಿನೊ ಪಿಜ್ಜಾ, ದೇವ್ ನಗರ್, ವೆಂಕಟ್ ಪ್ಯಾರಡೈಸ್, ಶೋಭಾ ಸಿಟಿ ಎಕ್ಸ್ ರ‍್ವಿಸ್ ಮೆನ್ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಆರ್ ಕೆ ಹೆಗಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿವೈಎಂ, ಸ್ಲಂ ಬೋರ್ಡ್ ಮತ್ತು ಬೆಂಚ್ ರಾಯಲ್ ವುಡ್ ನಗರ, ಶೋಭಾನಗರ, ಶೋಭಾನಗರ ಲೇಔಟ್, ಥಣಿಸಂದ್ರ, ಆರ್ ಕೆ ಹೆಗ್ಡೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.