ಬೆಂಗಳೂರಿನಲ್ಲಿ ಈದ್-ಮಿಲಾದ್ ಹಬ್ಬಕ್ಕೆ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ನಿಷೇಧ!
ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಈದ್-ಮಿಲಾದ್ ಹಬ್ಬದ ನಿಮಿತ್ತ ಮೆರವಣಿಗೆ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಂಚಾರ ಮಾರ್ಪಾಡು ಮಾಡಲಾಗಿದೆ. ಮೆರವಣಿಗೆಯು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಲಿದ್ದು, ಜೆ.ಸಿ ನಗರ, ಯಲಹಂಕ, ಮಜೀದ್ ಲೇಔಟ್, ಸೌತ್ ಎಂಡ್ ಸರ್ಕಲ್ ಸೇರಿದಂತೆ ಹಲವು ಪ್ರದೇಶಗಳ ಮೂಲಕ ಹಾದು ಹೋಗಲಿದೆ.
ಬೆಂಗಳೂರು (ಸೆ.13): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೆ.16ರಂದು ಮುಸ್ಲಿಂ ಬಾಂಧವರು 'ಈದ್-ಮಿಲಾದ್ ಹಬ್ಬ ಆಚರಣೆ ಮಾಡಲಿದ್ದು, ನೃಪತುಂಗ ರಸ್ತೆಯ ವೈಎಂಸಿಎ (Y.M.C.A.) ಮೈದಾನಕ್ಕೆ ನಗರ ವಿವಿಧ ಭಾಗಗಳಿಂದ ಸಾವಿರಾರು ಜನರು ಅಲಂಕೃತ ವಾಹನ ಹಾಗೂ ಮೆರವಣಿಗೆ ಮೂಲಕ ಬಂದು ಸೇರಲಿದ್ದಾರೆ. ಈ ವೇಳೆ ಸುಗಮ ಸಂಚಾರಕ್ಕೆ ಅನುಕೂಲ ಆಗುವಂತೆ ಸಂಚಾರ ಮಾರ್ಪಾಡು ಮಾಡಲಾಗಿದೆ.
ಈದ್-ಮಿಲಾದ್ ಮೆರವಣಿಗೆ ಹೋಗುವ ಮಾರ್ಗಗಳು:
1. ಜೆ.ಸಿ ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ ಮೆಂಟ್ ಕಡೆಗೆ ಸಾಗುವುದು.
2. ಯಲಹಂಕ ಓಲ್ಡ್ ಟೌನ್ ಮಸೀದಿಯಿಂದ ಯಲಹಂಕ ಓಲ್ಡ್ ಟೌನ್ ಮಸೀದಿಯವರೆಗೆ
3. ಹಳೇ ಬಸ್ ನಿಲ್ದಾಣದಿಂದ ಸಣ್ಣ ಅಮಾನಿಕೆರೆಯವರೆಗೆ
4. ಬೆಳ್ಳಳ್ಳಿ ಕ್ರಾಸ್ ನಿಂದ ನಾಗವಾರ ಸಿಗ್ನಲ್ ವರೆಗೆ
5. ರಾಜಗೋಪಾಲನಗರ ಮುಖ್ಯರಸ್ತೆಯಿಂದ ಪೀಣ್ಯ 2ನೇ ಹಂತದವರೆಗೆ
6. ಸೌತ್ ಎಂಡ್ ಸರ್ಕಲ್ ನಿಂದ ಆರ್.ವಿ ರಸ್ತೆಯಲ್ಲಿ ಲಾಲ್‌ಭಾಗ್ ವೆಸ್ಟ್ ಗೇಟ್ ಸರ್ಕಲ್‌ವರೆಗೆ
7. ಗೀತಾ ಜಂಕ್ಷನ್ (ಕೂಲ್ ಜಾಯಿಂಟ್ ಜಂಕ್ಷನ್) ನಿಂದ ಸೌತ್ ಎಂಡ್ ಸರ್ಕಲ್
8. ಬೇಂದ್ರೆ ಜಂಕ್ಷನ್‌ನಿಂದ ಓಬಳಪ್ಪ ಗಾರ್ಡನ್ ಜಂಕ್ಷನ್
9. ಮಹಾಲಿಂಗೇಶ್ವರ ಬಡಾವಣೆ ನಿಂದ ಆಡುಗೋಡಿ.
ವೈಎಂಸಿಎ ಮೈದಾನದ ಸುತ್ತಲೂ ಸಂಚಾರ ನಿರ್ಬಂಧಿಸಿದ ಸ್ಥಳಗಳು :
1. ನೇತಾಜಿ ಜಂಕ್ಷನ್ ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರ ನಿರ್ಬಂಧ
2. ಮಾಸ್ಕ್ ಜಂಕ್ಷನ್ ನಿಂದ ಎಂ.ಎಂ ರಸ್ತೆ ಮೂಲಕ ನೇತಾಜಿ ಜಂಕ್ಷನ್ ವರೆಗೆ ಎಂ.ಎಂ.ರಸ್ತೆ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬದಲಾಗಿ ಏಕ ಮುಖ ಸಂಚಾರ ಮಾಡಲಾಗುತ್ತದೆ. ನೇತಾಜಿ ಜಂಕ್ಷನ್‌ನಿಂದ ಮಾಸ್ಕ್ ಜಂಕ್ಷನ್ ಕಡೆಗೆ ವಾಹನ ಸಂಚಾರಕ್ಕೆ ಅವಕಾಶ.
3. ನೇತಾಜಿ ಜಂಕ್ಷನ್ ನಿಂದ ಹೇನ್ಸ್ ಜಂಕ್ಷನ್ ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. 4. ನಾಗವಾರ ಜಂಕ್ಷನ್ ನಿಂದ ಪಾಟರಿ ಸರ್ಕಲ್ ರಸ್ತೆಯ ವರೆಗೆ ಭಾಗಶಃ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ಬೆಂಗಳೂರಿನ ನಾಗರಿಕರ ಜಲಮಾರ್ಗ 'ಕೆ-100' ಪ್ರಗತಿ ನೋಟ ಬಿಡುಗಡೆ ಮಾಡಿದ ಬಿಬಿಎಂಪಿ!
ನಿರ್ಬಂಧಿಸಿರುವ ಸ್ಥಳಗಳಿಗೆ ಪರ್ಯಾಯ ಮಾರ್ಗಗಳು:
1. ಕೆ.ಆರ್ ಸರ್ಕಲ್‌ನಿಂದ ನೃಪತುಂಗ ರಸ್ತೆಯನ್ನು ಬಳಸಿ ಹಾದು ಹೋಗುವ ವಾಹನ ಚಾಲಕರು/ಸವಾರರು ಕೆ.ಆರ್ ವೃತ್ತದಲ್ಲಿ ಕಬ್ಬನ್ ಉದ್ಯಾನವನವನ್ನು ಪ್ರವೇಶಿಸಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಅಥವಾ ಸೆಂಟ್ರಲ್ ಲೈಬ್ರರಿ ವೃತ್ತದ ಬಳಿ ಬಲ ತಿರುವು ಪಡೆದು ಏಕಮುಖ ಸಂಚಾರದ ವಿರುದ್ಧವಾಗಿ ಹಡ್ಲನ್ ವೃತ್ತಕ್ಕೆ ಬಂದು ಮುಂದೆ ಹೋಗಬಹುದಾಗಿದೆ.
2. ಸಿಟಿಮಾರ್ಕೆಟ್ ವೃತ್ತ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣ ಕಡೆಗೆ ಸಂಚಾರಿಸುವ ಎಲ್ಲಾ ಮಾದರಿಯ ವಾಹನಗಳು ಜೆ.ಸಿ. ರಸ್ತೆ ಮೂಲಕ ಟೌನ್ ಹಾಲ್ ವೃತ್ತ - ಎನ್.ಆರ್. ವೃತ್ತ ಮಾರ್ಗವಾಗಿ ಕೆ.ಜಿ.ರಸ್ತೆಯಲ್ಲಿ ಚಲಿಸಿ ಕೆಂಪೇಗೌಡ ಬಸ್ ನಿಲ್ದಾಣ ತಲುಪಬಹುದು ಹಾಗೂ ರಿಚ್ ಮಂಡ್ ರಸ್ತೆ ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವವರು ಪಿ.ಕೆ.ಲೇನ್ ಮತ್ತು ಓ.ಟಿ.ಸಿ. ರಸ್ತೆಯಲ್ಲಿ ಚಲಿಸಿ ಎನ್.ಆರ್.ವೃತ್ತದ ಮೂಲಕ ದೇವಾಂಗ ವೃತ್ತ, ಮಿಷನ್ ರಸ್ತೆ ಮಾರ್ಗವಾಗಿ ಹೋಗಬಹುದಾಗಿದೆ.
3. ರಿಚ್ ಮಂಡ್ ರಸ್ತೆ ಕಡೆಯಿಂದ ಬರುವ ವಾಹನಗಳು ಆರ್.ಆರ್.ಎಂ.ಆರ್. ರಸ್ತೆ - ಹಕ್ಸನ್ ವೃತ್ತ ಮೂಲಕ
ಕೆ.ಜಿ.ರಸ್ತೆ ಕಡೆಗೆ ಹಾಗೂ ಎನ್.ಆರ್.ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಸಂಚರಿಸಬಹುದು. 4. ಪೊಲೀಸ್ ಕಾರ್ನರ್ ಕಡೆಯಿಂದ ಬರುವ ವಾಹನಗಳು ಹಡ್ಲನ್ ವೃತ್ತದ ಮೂಲಕ ಕಬ್ಬನ್‌ಪಾರ್ಕ್ ಒಳಭಾಗ
ಸಂಚರಿಸುವುದನ್ನು ನಿಷೇಧಿಸಿದ್ದು. ಸದರಿ ವಾಹನಗಳು ಕಸ್ತೂರಿಬಾ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಸಂಚರಿಸಬಹುದಾಗಿದೆ. - -
5. ಮೈಸೂರು ರಸ್ತೆ ಸಿರ್ಸಿ ವೃತ್ತ ಸಿರ್ಸಿ ರಸ್ತೆ ಚಾಮರಾಜಪೇಟೆ 7ನೇ ಅಡ್ಡರಸ್ತೆ ಬಲ ತಿರುವು - ಚಾಮರಾಜಪೇಟೆ 2, 3, 4 & 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿಮಾರುಕಟ್ಟೆ ಹಾಗು ಇತರೆ ಕಡೆಗೆ ಸಂಚರಿಸಬಹುದಾಗಿದೆ.
6. ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ನೇತಾಜಿ ಜಂಕ್ಷನ್ ಇಂದ ಬಲತಿರುವು-ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕ್ಲಾರೆನ್ಸ್ ರೈಲ್ವೆ ಮೇಲ್ಸ್ತುವೆಯಲ್ಲಿ ಪಾಟರಿ ರಸ್ತೆಗೆ ಬಲ ತಿರುವು ಪಡೆದು ಪಾಟರಿ ರಸ್ತೆ ಮತ್ತು ಹೆಣ್ಣೂರು ರಸ್ತೆ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರಂ ಪ್ರೈಓವರ್ ಮುಖೇನ ಹೆಣ್ಣೂರು, ಬಾಣಸವಾಡಿ ಹಾಗೂ ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ.
7. ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ ರಸ್ತೆಯಲ್ಲಿ ನೇತಾಜಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ಬಲ ತಿರುವು ಪಡೆದು ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಲು ಅವಕಾಶ ಮಾಡಿಕೊಡಲಾಗಿರುತ್ತದೆ.
8. ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ರಸ್ತೆಯಲ್ಲಿ ಹೇನ್ಸ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ನೇತಾಜಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಎಂ.ಎಂ ರಸ್ತೆ ಮೂಲಕ ಮಾಸ್ಕ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ಬಲ ತಿರುವು ಪಡೆದು ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಲು ಅವಕಾಶ ಮಾಡಿಕೊಡಲಾಗಿರುತ್ತದೆ.
9. ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನಾಗವಾರ ಜಂಕ್ಷನ್‌ನಿಂದ - ಎಡತಿರುವು - ಹೆಣ್ಣೂರು ಜಂಕ್ಷನ್ - ಬಲತಿರುವು - ಸಿದ್ದಪ್ಪ ರೆಡ್ಡಿ ಜಂಕ್ಷನ್ ಅಯೋದ್ಯ ಜಂಕ್ಷನ್ ಲಿಂಗರಾಜಪುರಂ ಪ್ರೈ ಓವರ್‌ನಿಂದ – ಪುಲಕೇಶಿನಗರ ಸಂಚಾರ ಠಾಣೆ ಕಡೆಯಿಂದ ಮಾರ್ಗ ಬದಲಾವಣೆ ಮಾಡಿ ರಾಬರ್ಟ್‌ನ್ ರಸ್ತೆ ಜಂಕ್ಷನ್ ನಲ್ಲಿ ಬಲತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು. ಹಾಗೂ ನಾಗವಾರ ಜಂಕ್ಷನ್ ನಿಂದ ಬಲತಿರುವು ಪಡೆದು ಹೆಬ್ಬಾಳ ಮುಖೇನ ನಗರಕ್ಕೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ.
10. ಶಿವಾಜಿ ನಗರದ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ಪುಲಕೇಶಿನಗರ ಸಂಚಾರ
ಪೊಲೀಸ್ ಠಾಣೆಯವರು ಮಾರ್ಗ ಬದಲಾವಣೆ ಮಾಡಿ ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು
ಪಡೆದುಕೊಂಡು ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ವೀಲರ್ಸ್ ರಸ್ತೆ ಮೂಲಕ ಹೆಣ್ಣೂರು,
ಬಾಣಸವಾಡಿ, ಹಲಸೂರು ಕಡೆ ಹೋಗಬಹುದಾಗಿರುತ್ತದೆ.
11. ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳನ್ನು ಪುಷ್ಪಾಂಜಲಿ ಟಾಕೀಸ್ ಎಡ ತಿರುವು ಪಡೆದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಗೆ ತಲುಪಬಹುದಾಗಿರುತ್ತದೆ..
ಬೆಂಗಳೂರು: ಕೀಟಲೆಗೆ ತುರ್ತು ಬಟನ್ ಒತ್ತಿ ಮೆಟ್ರೋ ನಿಲ್ಲಿಸಿದವಗೆ ಬಿತ್ತು ದಂಡ..!
ವಾಹನಗಳ ಪಾರ್ಕಿಂಗ್ ನಿಷೇಧಿಸಿದ ರಸ್ತೆಗಳು
1. ನೃಪತುಂಗ ರಸ್ತೆ, ಕೆ.ಆರ್ ವೃತ್ತದಿಂದ ಪೊಲೀಸ್ ಕಾರ್ನರ್ ವರೆಗೆ 2. ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್ ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ
3. ಎನ್.ಆರ್.ರಸ್ತೆ, ಟೌನ್ ಹಾಲ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್ ವರೆಗೆ
4. ಪಿ.ಕಾಳಿಂಗರಾವ್ ರಸ್ತೆ, ಎನ್.ಆರ್ ಜಂಕ್ಷನ್ ನಿಂದ ಸುಬ್ಬಯ್ಯ ವೃತ್ತದ ವರೆಗೆ
5. ಕಸ್ತೂರಿಬಾ ರಸ್ತೆ, ಹಡ್ಗನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ
6. ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್ ವರೆಗೆ
7. ಆರ್.ಆರ್.ಎಂ.ಆರ್ ರಸ್ತೆ, ರಿಚ್ಮಂಡ್ ವೃತ್ತದಿಂದ ಹಡ್ಲನ್ ವೃತ್ತದ ವರೆಗೆ
8. ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ
9. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್.ವಿ ಜಂಕ್ಷನ್ ವರೆಗೆ.
10. ಕ್ಲೀನ್ಸ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ
11. ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ, ಕೆ.ಆರ್.ವೃತ್ತದಿಂದ ಬಾಳೇಕುಂದ್ರಿ ವೃತ್ತದ ವರೆಗೆ
12. ಶೇಷಾದ್ರಿ ರಸ್ತೆ, ಮಹಾರಾಣಿ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ
13. ಹಳೇ ಅಂಚೆ ಕಛೇರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ
14. ಕಬ್ಬನ್ ಉದ್ಯಾನವನದ ಒಳ ಆವರಣ
15. ನೇತಾಜಿ ರಸ್ತೆ, ಹೇನ್ಸ್ ರಸ್ತೆ, ಎಂ.ಎಂ ರಸ್ತೆ, ಮಾಸ್ಕ್ ರಸ್ತೆ, ಕೋಲ್ಸ್ ರಸ್ತೆ, ಸೌಂಡರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಮಿಲ್ಲರ್ಸ್ ರಸ್ತೆ ಎಕ್ಸ್‌ಟೆಂಕ್ಷನ್ ನಲ್ಲಿ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
16. ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್ ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿರುತ್ತದೆ.
17. ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ. & ಸು. ಪೊಲೀಸ್ ಠಾಣೆಯ ವರೆಗೆ ಎರಡು ಬದಿಯಲ್ಲಿ ಪಾರ್ಕಿಂಗ್ ನಿಷೇದ ಮಾಡಲಾಗಿರುತ್ತದೆ.
18. ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್ ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ಪಾರ್ಕಿಂಗ್ ನಿಷೇದ ಮಾಡಿಲಾಗಿರುತ್ತದೆ.
ಈ ಮೇಲ್ಕಂಡಂತೆ ಮಾಡಲಾದ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಟ್ರಾಫಿಕ್ ಪೊಲೀಸ್ ಇಲಾಖೆ ಮನವಿ ಮಾಡಿದೆ.