ಬೆಂಗಳೂರು [ನ.30]: ಹೈದರಾಬಾದ್ ನಲ್ಲಿ ಪಶುವೈದ್ಯೆಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಗಳ ಸಭೆ ನಡೆಸಿದ್ದು, ಈ ವೇಳೆ ಪ್ರಮುಖ ರಸ್ತೆ, ಅಂಡರ್ ಪಾಸ್ ಬಿಡ್ಜ್ ಗಳು, ಮೇಲು ಸೇತುವೆಗಳು, ಮೇಲು ಸೇತುವೆಗಳ ಸ್ಥಳಗಳಲ್ಲಿ ಪೊಲೀಸ್ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. 

ವೈದ್ಯೆಯ ಮೇಲೆ ರೇಪ್, ಕೊಲೆ: ಪೊಲೀಸರಿಗೇಕೆ ಸಂತ್ರಸ್ತೆ ಕರೆ ಮಾಡಲಿಲ್ಲ? ಮಂತ್ರಿ ವಿವಾದ!...

ಸ್ಥಳೀಯ ಠಾಣೆ ಪೊಲೀಸರ ಬಳಿ ತಮ್ಮ ವ್ಯಾಪ್ತಿಗೆ ಬರುವ ಬ್ರಿಡ್ಜ್ ಗಳು, ಮೇಲು ಸೇತುವೆಗಳ ಬಗ್ಗೆ ಮಾಹಿತಿ ಇರಬೇಕು. ಮಹಿಳೆಯರ ಸುರಕ್ಷತೆಗೆ ಸುರಕ್ಷತಾ ಆ್ಯಪ್ ಇದ್ದು, ಅದನ್ನು ಮಹಿಳೆಯರು ಹೆಚ್ಚು ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದರು. 

ಪ್ರಿಯಾಂಕ ರೆಡ್ಡಿ ಹತ್ಯೆ: ಸಿನಿ ಸೆಲಬ್ರಿಟಿಗಳಿಂದ ಆಕ್ರೋಶ...

ಹೆಣ್ಣುಮಕ್ಳಳಿಗೆ ಸಮಸ್ಯೆ ಆದರೆ ಸುರಕ್ಷ ಆ್ಯಪ್  ಆನ್ ಮಾಡಿದರೆ ಅದರ ಮೂಲಕ ಮಾಹಿತಿ ತಿಳಿಯುತ್ತದೆ. ನಮ್ಮ ಡಯಲ್ 100 ನಿಂದ ಸ್ಥಳೀಯ ಪೊಲೀಸರು 7 ರಿಂದ 9 ನಿಮಿಷಗಳಲ್ಲಿ ಸ್ಥಳ ತಲುಪುತ್ತಾರೆ ಎಂದು ಈ ವೇಳೆ ಭಾಸ್ಕರ್ ರಾವ್ ತಿಳಿಸಿದರು.

ನಮ್ಮ ಗುರಿ ನಗರದ ಜನರು 24 ಗಂಟೆ ಸುರಕ್ಷತೆ ಯಿಂದ‌ ಇರಬೇಕು ಎನ್ನುವುದಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.