ಬೆಂಗಳೂರು[ಡಿ.12]  ನಗರದಲ್ಲಿ ಮತ್ತೆ ಸದ್ದು ಮಾಡಿದ ಖಾಕಿ ತುಫಾಕಿ ಸದ್ದು ಮಾಡಿದೆ. ಬಾಂಗ್ಲಾದೇಶ ಮೂಲದ ಕುಖ್ಯಾತ ಡಕಾಯಿತನ ಕಾಲಿಗೆ ಗುಂಡು ಹಾರಿಸಲಾಗಿದೆ.  ಮುನೀರ್ ಹಾಗೂ ಮಿಲನ್ ಎಂಬಿಬ್ಬರು ಪೊಲೀಸರಿಂದ  ಗುಂಡೇಟು ತಿಂದಿದ್ದಾರೆ.

ಕೆ.ಆರ್.ಪುರಂ ಠಾಣೆ ಇನ್ಸ್ಪೆಕ್ಟರ್ ಜಯರಾಜ್ ಫೈರಿಂಗ್ ಮಾಡಿದ್ದಾರೆ. ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿ- ಅಜಗೊಂಡನಹಳ್ಳಿ ರಸ್ತೆಯಲ್ಲಿ ಫೈರಿಂಗ್ ನಡೆದಿದ್ದು  ಉತ್ತರಪ್ರದೇಶ ಹಾಗೂ ಗೋವಾಗಳಲ್ಲಿ ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ.

ಬುಧವಾರ ಮುಂಜಾನೆ ಮುನೀರ್ ಹಾಗೂ ಮಿಲನ್ ಇಬ್ಬರು ಬಾಂಗ್ಲಾ ಮೂಲದ ಡಕಾಯಿತರು ಬರುವ ಮಾಹಿತಿ ಹೊಂದಿದ್ದ ಪೊಲೀಸರು ದಾಳಿ ಮಾಡಿದ್ದಾರೆ.  ದಾಳಿ ಸಂದರ್ಭ ಕೆ.ಆರ್.ಪುರ ಠಾಣೆ ಸಿಬ್ಬಂದಿ ‌ಮಂಜುನಾಥ್ ಭುಜಕ್ಕೆ ಡ್ರಾಗರ್ ನಿಂದ  ಓರ್ವ ಡಕಾಯಿತ ದಾಳಿ ಮಾಡಿದ್ದಾನೆ.  ಈ ವೇಳೆ ಪೊಲೀಸರು ಪ್ರತಿದಾಳಿ ಮಾಡಿ ಬಂಧಿಸಿದ್ದಾರೆ.