Asianet Suvarna News Asianet Suvarna News

ಬೆಂಗಳೂರು : ರೀಲ್ಸ್ ಮಾಡೋ ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಮಿಷನರ್

ಪೊಲೀಸ್ ಸಮವಸ್ತ್ರ ಧರಿಸಿ ಎಲ್ಲೆಂದರಲ್ಲಿ ರೀಲ್ಸ್ ಮಾಡುತ್ತಿದ್ದ ಪೊಲೀಸರಿಗೆ ಪೊಲೀಸ್ ಆಯುಕ್ತ ಬಿ. ದಯಾನಂದ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Bengaluru police commissioner gave stern warning to police for making reels sat
Author
First Published Jul 23, 2024, 8:31 PM IST | Last Updated Jul 23, 2024, 8:31 PM IST

ಬೆಂಗಳೂರು (ಜು.23): ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಎಲ್ಲೆಂದರಲ್ಲಿ ರೀಲ್ಸ್ ಮಾಡುತ್ತಿದ್ದ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಇನ್ನುಮುಂದೆ ಯಾವುದೇ ಕಾರಣಕ್ಕೂ ಪೊಲಿಸರು ಸಮವಸ್ತ್ರ ಧರಿಸಿ ರೀಲ್ಸ್ ಮಾಡುವಂತಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. 

ಹೌದು, ಪೊಲೀಸ್ ರೀಲ್ಸ್ ಸ್ಟಾರ್‌ಗಳಿಗೆ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಪೊಲೀಸರು ಸಮವಸ್ತ್ರ ಧರಿಸಿ ರೀಲ್ಸ್ ಮಾಡೋಹಾಗಿಲ್ಲ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬಿಸಿ ಮುಟ್ಟಿಸಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇಲಾಖೆಗೆ ಸಂಬಂಧಪಡದ ವಿಷಯದಲ್ಲಿ ಸಮವಸ್ತ್ರದಲ್ಲಿ ಅಶಿಸ್ತು ತೋರಿಸುವ ಸಿಬ್ಬಂಧಿಗಳ ಮೇಲೆ ನಿಗಾವಹಿಸಲಾಗುತ್ತಿದೆ. ಪೊಲೀಸ್ ಕರ್ತವ್ಯಗಳಿಗೆ ಸಂಬಂಧಿಸದ ವಿಷಯಗಳಲ್ಲಿ ಪೊಟೋ, ರೀಲ್ಸ್ ಅಪ್ಲೋಡ್ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

2024ರಲ್ಲಿ ರಿಲೀಸ್ ಆಗಿ ಕನ್ನಡ ಚಿತ್ರರಂಗದ ಮರ್ಯಾದೆ ಉಳಿಸಲಿವೆಯೇ ಈ ಪ್ಯಾನ್‌ ಇಂಡಿಯಾ ಸಿನಿಮಾಗಳು?

ಪೊಲೀಸ್ ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಆದರೆ, ಡಿಜಿಟಲ್ ವೇದಕೆಯಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಹಾಗಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು, ಸಮವಸ್ತ್ರ ಧರಿಸಿ ಕೆಲ ಅಧಿಕಾರಿ ಸಿಬ್ಬಂದಿ ರೀಲ್ಸ್ ಮಾಡ್ತಿದ್ದಾರೆ. ಸಮವಸ್ತ್ರ ಧರಿಸಿ ರೀಲ್ಸ್ ಮಾಡ್ತಿದ್ದಾರೆ. ಸಮವಸ್ತ್ರಕ್ಕೆ ಅದರದ್ದೇ ಆದಂತಹ ಗೌರವ ಇದೆ. ಹೀಗಾಗಿ ಇನ್ಮುಂದೆ ಯಾವುದೇ ರೀತಿಯಾದಂತಹ ರೀಲ್ಸ್ ಮಾಡದಂತೆ ಆದೇಶ ನೀಡಲಾಗಿದೆ. ಹಳೆ ವಿಡಿಯೋಗಳು ಡಿಲೀಟ್ ಮಾಡುವುದ್ರ ಬಗ್ಗೆ ಮುಂದೆ ನಿರ್ಧಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

Latest Videos
Follow Us:
Download App:
  • android
  • ios