ಬೆಂಗಳೂರು ನಿವಾಸಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಬಿಬಿಎಂಪಿ: ಬೆಳಗ್ಗೆ 5 ರಿಂದ ರಾತ್ರಿ 8ರವರೆಗೆ ಉದ್ಯಾನಗಳಿಗೆ ಮುಕ್ತ ಪ್ರವೇಶ

ಬೆಂಗಳೂರಿನಲ್ಲಿರುವ ಎಲ್ಲ ಉದ್ಯಾನಗಳು ಹಾಗೂ ಪಾರ್ಕ್‌ಗಳಲ್ಲಿ ಇನ್ನು ಮುಂದೆ ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಬಿಬಿಎಂಪಿ ಅವಕಾಶ ನೀಡಿದೆ.

Bengaluru parks and Gardens Open From 5 AM To 8 PM Good News for walkers sat

ಬೆಂಗಳೂರು (ಜೂ.06): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯು ವಿಹಾರ ಮಾಡುವವರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಹಿ ಸುದ್ದಿಯನ್ನು ನೀಡಿದೆ. ಈವರೆಗೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಉದ್ಯಾನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದ ಬಿಬಿಎಂಪಿ ಈಗ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉದ್ಯಾನದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನವನಗಳ ವಾಯುವಿಹಾರ ಸಮಯ ಸಡಿಲಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ. ಇನ್ನುಮುಂದೆ ದಿನದ 15 ಗಂಟೆಗಳ ಕಾಲ ಉದ್ಯಾನವನಗಳು ಸಾರ್ವಜನಿಕರಿಗೆ ಪ್ರವೇಶಾವಕಾಶಕ್ಕೆ ಮುಕ್ತವಾಗಿರುತ್ತವೆ. ಈವರೆಗೆ ಬೆಳಿಗ್ಗೆ 5 ರಿಂದ 8 ಮತ್ತು ಸಂಜೆ 4ರಿಂದ 8ರವರೆಗೆ ಓಪನ್ ಮಾಡಲಾಗ್ತಿತ್ತು. ಆದರೆ, ಪಾಲಿಕೆಯ ಹೊಸ ಸುತ್ತೋಲೆ ಅನ್ವಯ ಬೆಳಿಗ್ಗೆ 5ರಿಂದ ರಾತ್ರಿ 8 ಗಂಟೆಗಳವರಗೆ  ಉದ್ಯಾನವನಗಳು ಓಪನ್​ ಆಗಿರುತ್ತವೆ. 

ಬೆಂಗಳೂರು ಉಪನಗರ ರೈಲು ಯೋಜನೆ ಮೈಸೂರು, ಕೋಲಾರಕ್ಕೂ ವಿಸ್ತರಣೆ

ಕೋವಿಡ್‌ ನಂತರ ಉದ್ಯಾನಗಳಿಗೆ ಮುಕ್ತ ಅವಕಾಶ: ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಉದ್ಯಾನಗಳು, ಪಾರ್ಕ್‌ಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ಸೋಂಕು ಇಳಿಕೆ ಆಗುತ್ತಿದ್ದಂತೆ ಉದ್ಯಾನಗಳ ಪ್ರವೇಶಕ್ಕೂ ಅವಕಾಶ ನೀಡುತ್ತಾ ಬಂದಿದೆ. ಆದರೆ. ಕೋವಿಡ್‌ ಬರುವುದಕ್ಕೂ ಮುಂಚೆ ಇದ್ದ ಅವಧಿಯನ್ನು ಮರು ಜಾರಿಗೆ ತರುವಲ್ಲಿ ಬಿಬಿಎಂಪಿ ಹಿಂದೇಟು ಹಾಕಿತ್ತು. ಆದರೆ, ಈಗ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​​ ಅವರು ಸುತ್ತೋಲೆ ಹೊರಡಿಸಿದ್ದಾರೆ. 

ಸಾರ್ವಜನಿಕರಿಂದ ನಿರಂತರ ಮನವಿ ಸಲ್ಲಿಕೆ: ಈ ಹಿಂದೆ ಬೆಂಗಳೂರಿನ ಅನೇಕ ಸಾರ್ವಜನಿಕರು ಹಾಗೂ ನಡಿಗೆದಾರ ಸಂಘಗಳಿಂದ ಉದ್ಯಾನಗಳಿಗೆ ಜನರ ಪ್ರವೇಶದ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಆದರೆ, ಉದ್ಯಾನಗಳ ನಿರ್ವಹಣೆ, ಸ್ವಚ್ಛತೆ ಹಾಗೂ ಇತರೆ ಕಾರಣಗಳ ಹಿನ್ನೆಲೆಯಲ್ಲಿ ಉದ್ಯಾನಗಳ ಪ್ರವೇಶ ಅವಧಿಯನ್ನು ವಿಸ್ತರಣೆ ಮಾಡುವುದಕ್ಕೆ ನಿರಾಕರಣೆ ಮಾಡಲಾಗಿತ್ತು. ಇನ್ನು ರಾತ್ರಿ ವೇಳೆ 8 ಗಂಟೆಗೆ ಬದಲಾಗಿ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಮನವಿಗಳು ಬಂದಿದ್ದವು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ರಾತ್ರಿ ಸಮಯವನ್ನು ವಿಸ್ತಣೆ ಮಾಡದಂತೆ ಪೊಲೀಸ್‌ ಇಲಾಖೆಯು ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. 

Bengaluru parks and Gardens Open From 5 AM To 8 PM Good News for walkers sat

Latest Videos
Follow Us:
Download App:
  • android
  • ios