Bengaluru: ಖಾಸಗೀಕರಣದತ್ತ ಬಿಎಂಟಿಸಿ ಸಾರಿಗೆ?: ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ
ನಷ್ಟದ ಸುಳಿಯಲ್ಲಿರುವ ಸಿಲುಕಿರುವ ಬಿಎಂಟಿಸಿ ಸಾರಿಗೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಬಿಎಂಟಿಸಿ ಮಂಡಳಿಯ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಜೂ.08): ನಷ್ಟದ ಸುಳಿಯಲ್ಲಿರುವ ಸಿಲುಕಿರುವ ಬಿಎಂಟಿಸಿ ಸಾರಿಗೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಬಿಎಂಟಿಸಿ ಮಂಡಳಿಯ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 2 ಸಾವಿರ ಕೋಟಿಯಷ್ಟು ಸಾಲದಲ್ಲಿ ಬಿಎಂಟಿಸಿ ಇದೆ. ಅಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣ ಇಲ್ಲ. ಹೀಗಾಗಿ ಇದನ್ನ ನಿರ್ವಹಣೆ ಮಾಡೋದು ಬಿಎಂಟಿಸಿ ಸಾರಿಗೆ ಸಂಸ್ಥೆಗೆ ದೊಡ್ಡ ಸವಾಲಾಗಿದೆ.
ಆಲ್ಲದೆ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರನ್ನ ವಜಾ ಮಾಡಲಾಗಿದೆ. ಇದುವರೆಗೂ ಸರ್ಕಾರ ಅವರನ್ನ ಮರು ನೇಮಕ ಮಾಡಿಲ್ಲ. ಹೀಗಾಗಿ ಅವರ ಜಾಗಕ್ಕೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ಚಾಲಕರನ್ನ ಔಟ್ ಸೋರ್ಸ್ ಆಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಖಾಸಗಿ ಏಜೆನ್ಸಿ ಮೂಲಕ ಚಾಲಕರನ್ನ ನೇಮಕ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಇನ್ನೊಂದು ಕಡೆ ಖಾಸಗಿ ಚಾಲಕರ ನೇಮಕದಿಂದ ಬಿಎಂಟಿಸಿ ಹಣ ಉಳಿತಾಯದ ಪ್ಲ್ಯಾನ್ ಕೂಡ ಮಾಡಿಕೊಂಡಿದೆ. ಆದ್ರೆ ಈಗಾಗಲೇ ಕೆಲಸ ಕಳೆದುಕೊಂಡಿರುವ ಕಾರ್ಮಿಕರ ಆಸೆಗೆ ಶಾಶ್ವತ ತಣ್ಣೀರು ಎರೆಚಲು ಬಿಎಂಟಿಸಿ ಮುಂದಾಗಿದ್ದೀಯಾ ಅನ್ನೋ ಅನುಮಾನ ಮೂಡಿದೆ.
ಬೆಂಗಳೂರು ವಾಹನ ಸವಾರರ ಟ್ರಾಫಿಕ್, ರಸ್ತೆ ಚಿಹ್ನೆ ಜ್ಞಾನ ಎಷ್ಟಿದೆ? ಅಚ್ಚರಿ ನೀಡಿದ NBF ಸಮೀಕ್ಷೆ!
ಬಿಎಂಟಿಸಿ ಆಡಳಿತ ಮಂಡಳಿ ನಿರ್ಧಾರಕ್ಕೆ ಸಾರಿಗೆ ನೌಕರರ ಸಂಘ ಕೆಂಡಾಮಂಡಲ: ಕೊರೋನಾ ಸಮಯದಲ್ಲಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರನ್ನ ಸರ್ಕಾರ ವಜಾ ಮಾಡಿದೆ. ಆದ್ರೆ ಇದುವರೆಗೂ ಸರ್ಕಾರ ವಜಾಗೊಂಡ ಸಾರಿಗೆ ನೌಕರರನ್ನ ಮರು ನೇಮಕ ಮಾಡಿಕೊಳ್ಳಲೇ ಇಲ್ಲ. ಇದರ ಮಧ್ಯೆ ಬಿಎಂಟಿಸಿ ಸಾರಿಗೆ ಸಂಸ್ಥೆಯನ್ನ ಖಾಸಗೀಕರಣ ಮಾಡಲು ಹೊರಟಿರೋದು ಎಷ್ಟರ ಮಟ್ಟಿಗೆ ಸರಿ. ಕೊರೋನಾ ಸಮಯದಲ್ಲಿ ನಷ್ಟದಲ್ಲಿದ್ದ ಸಾರಿಗೆ ಇದೀಗ ಲಾಭದ ಟ್ರ್ಯಾಕ್ ನತ್ತ ಬರ್ತಾ ಇದೆ. ಆಲ್ಲದೆ ವಜಾಗೊಂಡ ನೌಕರರನ್ನ ನೇಮಕ ಮಾಡಿಕೊಳ್ಳಿ ಎಂದಿದ್ದಾರೆ. ಆಲ್ಲದೆ ಸರ್ಕಾರ ಸಾರಿಗೆ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸಾರಿಗೆ ನೌಕರರ ಸಂಘದ ಆನಂದ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬಿಎಂಟಿಸಿ ಉಚಿತ ಪಾಸ್ ಸೇವೆ ದಿಢೀರ್ ರದ್ದು: ಹಗಲು ರಾತ್ರಿ ಎನ್ನದೆ ಕಷ್ಟ ಪಡೋ ಕಟ್ಟಡ ಕಾರ್ಮಿಕರ ಗೋಳು ಕೇಳೋರ್ಯಾರು? ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಕೂಲಿ ಕಾರ್ಮಿಕರು ದಿನದ ಸಂಬಳ ನಂಬಿ ಜೀವನ ನಡೆಸ್ತಾರೆ. ಹೀಗಾಗಿ ಬಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ಉಚಿತ ಬಸ್ ಪಾಸ್ ನೀಡಿತ್ತು. ಆದರೆ ಇದೀಗ ನಷ್ಟದ ನೆಪವೊಡ್ಡಿ ಕಟ್ಟಡ ಕಾರ್ಮಿಕರ ಸೌಲಭ್ಯವನ್ನೇ ಬಿಎಂಟಿಸಿ ಕಸಿದುಕೊಂಡಿದೆ. ಹೌದು! ಗಗನಚುಂಬಿ ಕಟ್ಟಡಗಳು, ಸಾವಿರಾರು ದೊಡ್ಡ ದೊಡ್ಡ ಕಟ್ಟಡಗಳು ಬೆಂಗಳೂರಿನಲ್ಲಿ ತಲೆ ಎತ್ತಿವೆ.
Tummoc App: ಬಿಎಂಟಿಸಿ ಡೈಲಿ, ವೀಕ್ಲಿ, ಮಂಥ್ಲಿ ಪಾಸ್ ಇನ್ಮುಂದೆ ಡಿಜಿಟಲೈಸ್ಡ್: ಡೌನ್‌ಲೋಡ್ ಮಾಡೋದು ಹೇಗೆ?
ಇದಕ್ಕೆ ಕಾರಣ ಈ ಕಾರ್ಮಿಕರೇ. ಆದರೆ ಇವರ ಕಷ್ಟ ಕೇಳೊರು ಇಲ್ಲದಂತಾಗಿದೆ. ವಾರಕ್ಕೊಮ್ಮೆ ಸಂಬಳ ಕೊಡ್ತಾರೆ, ಕೊಡುವ ಹಣವೆಲ್ಲ ಮಾರನೇ ದಿನವೇ ಜೇಬಲ್ಲಿ ಖಾಲಿ ಖಾಲಿ. ತಿಂಗಳಪೂರ್ತಿ ಬಸ್‌ನಲ್ಲಿ ಓಡಾಡಲು ತೊಂದರೆಯಾಗ್ತಿತ್ತು. ಅದಕ್ಕೆ ಕಟ್ಟಡ ಕಾರ್ಮಿಕ ಇಲಾಖೆ ಬಿಎಂಟಿಸಿ ಸೇರಿ ಕಾರ್ಮಿಕರಿಗೆ ಒಂದು ವರ್ಷಕ್ಕೆ ಫ್ರೀ ಬಸ್ ನೀಡಲು ನೀಡಿತ್ತು. ಆದರೆ ಇದೀಗ ಈ ಫ್ರೀ ಪಾಸ್ ಸೌಲಭ್ಯವನ್ನು ಬಿಎಂಟಿಸಿ ಕಸಿದುಕೊಂಡಿದೆ. ಕಾರಣ ಕಾರ್ಮಿಕ ಇಲಾಖೆ ಇದುವರೆಗೂ ಬಾಕಿ ಹಣ ಪಾವತಿಸಿಲ್ಲ.