ಬೆಂಗಳೂರು(ಸೆ.23)  ಕುಲಪತಿ ನೇಮಕಾತಿ ಪ್ರಕ್ರಿಯೆ ಮುಗಿದಿದ್ದರೂ ಘೋಷಣೆ ಹೊರಬಿದ್ದಿಲ್ಲ ಎಂದು ಬೆಂಗಳೂರಿನ ಲಾ ಸ್ಕೂಲ್ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ.

"

ವಿದ್ಯಾರ್ಥಿಗಳ ಬೇಡಿಕೆಗಳಿಗೆ‌ ಮಣಿದ ನ್ಯಾಷನಲ್ ಲಾ ಸ್ಕೂಲ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮಣಿದಿದೆ. ಕುಲಪತಿಗಳ ನೇಮಕ ಮಾಡುವಂತೆ ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.

ಬಹಿಷ್ಕಾರ ಹಾಕಿ ಪ್ರತಿಭಟನೆಗೆ ಕುಳಿತ ಕಾನೂನು ವಿದ್ಯಾರ್ಥಿಗಳು

ಸೋಮವಾರ ಪರೀಕ್ಷೆ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿದ್ದರು. ಸ್ಟೂಡೆಂಟ್ ಬಾರ್ ಅಸೋಸಿಯೇಷನ್ ನಿಂದ ಪ್ರತಿಭಟನೆ ವಾಪಸ್ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ನಾಳೆಯಿಂದ ಎಂದಿನಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.