ಬೆಂಗಳೂರು[ಡಿ.21] ಬಿರುಕು ಕಾಣಿಸಿಕೊಂಡಿರುವ ಮೆಟ್ರೋ ಪಿಲ್ಲರ್ ದುರಸ್ತಿ ಮಾಡಬೇಕಾಗಿರುವುದರಿಂದ ಟ್ರಿನಿಟಿ ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇರುವುದಿಲ್ಲ.  ಬಿಎಂಆರ್ ಸಿಎಲ್ ದುರಸ್ತಿ ಕಾರ್ಯದ ಹಿನ್ನೆಲೆ ರೈಲು ಸಂಚಾರ ಸ್ಥಗಿತ ಮಾಡಲಾಗುತ್ತಿದೆ.  ಡಿಸೆಂಬರ್ 28 ರಿಂದ 30ರವರೆಗೆ ಮೆಟ್ರೋ ಸಂಚಾರ ಬಂದ್‌ ಆಗಲಿದೆ.

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದಿದೆ

ಮೈಸೂರು ರಸ್ತೆಯಿಂದ ಎಂಜಿ ರಸ್ತೆ, ಇಂದಿರಾನಗರದಿಂದ ಬೈಯ್ಯಪ್ಪನಹಳ್ಳಿ ವರೆಗೆ ರೈಲು ಸೇವೆ 6 ರಿಂದ 15 ನಿಮಿಷಗಳ ಅಂತರದಲ್ಲಿ ಮುಂದುವರೆಯಲಿದೆ. ದಿನಾಂಕ 28 ರಂದು ರಾತ್ರಿ ಎಂಟರಿಂದ 11ಘಂಟೆ ಹಾಗೂ ದಿನಾಂಕ 29, 30 ರಂದು ಮೆಟ್ರೋ ಪ್ರಯಾಣಿಕರಿಗೆ ಉಚಿತ ಬಸ್ ಸೇವೆಯನ್ನ‌ ಬಿಎಂಆರ್ ಸಿಎಲ್ ಕಲ್ಪಿಸಿದೆ. 

ಟ್ರಿನಿಟಿ ಮೆಟ್ರೋ ನಿಲ್ದಾಣದ ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ‌ ದಿನಾಂಕ 31 ರಂದು ಎಂದಿನಂತೆ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ- ಬಿಎಂಆರ್ ಸಿಎಲ್ ನಿಂದ ಮಾಹಿತಿ ನೀಡಿದೆ.