Asianet Suvarna News Asianet Suvarna News

ನಾಳೆ ಗಡ್ಕರಿಯಿಂದ ಬೆಂಗ​ಳೂರು-ಮೈಸೂರು ಹೆದ್ದಾರಿ ವೀಕ್ಷಣೆ

ಕೇಂದ್ರ ಸಚಿ​ವ ಗಡ್ಕರಿರವರು ವೈಮಾ​ನಿಕ ಸಮೀಕ್ಷೆ ಜೊತೆಗೆ ಟೆಸ್ಟ್‌ ಡ್ರೈವ್‌ ಸಹ ಮಾಡ​ಲಿದ್ದು, ಸಚಿ​ವ​ರೊಂದಿಗೆ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರದ ಅಧಿ​ಕಾ​ರಿ​ಗಳು ಇರ​ಲಿ​ದ್ದಾ​ರೆ.

Bengaluru Mysuru Highway View From Union Minister Nitin Gadkari grg
Author
First Published Jan 4, 2023, 3:30 AM IST

ರಾಮನಗರ(ಜ.04):  ಬೆಂಗ​ಳೂರು-ಮೈಸೂರು ದಶ​ಪಥ ರಾಷ್ಟ್ರೀಯ ಹೆದ್ದಾ​ರಿ​ಯ ಕಾಮ​ಗಾ​ರಿ​ಯನ್ನು ಖುದ್ದಾಗಿ ಪರಿ​ವೀಕ್ಷಣೆ ಮಾಡಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಜ.5ರಂದು ರಾಮ​ನ​ಗರ ಸೇರಿ​ದಂತೆ ಹಲ​ವೆಡೆ ಭೇಟಿ ನೀಡ​ಲಿ​ದ್ದಾರೆ. ಕೇಂದ್ರ ಸಚಿ​ವ ಗಡ್ಕರಿರವರು ವೈಮಾ​ನಿಕ ಸಮೀಕ್ಷೆ ಜೊತೆಗೆ ಟೆಸ್ಟ್‌ ಡ್ರೈವ್‌ ಸಹ ಮಾಡ​ಲಿದ್ದು, ಸಚಿ​ವ​ರೊಂದಿಗೆ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಜಿಲ್ಲಾ ಉಸ್ತು​ವಾರಿ ಸಚಿವ ಡಾ.ಸಿ.​ಎನ್‌.ಅ​ಶ್ವತ್ಥ ನಾರಾ​ಯಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾರದ ಅಧಿ​ಕಾ​ರಿ​ಗಳು ಇರ​ಲಿ​ದ್ದಾ​ರೆ.

ನಿತಿನ್‌ ಗಡ್ಕರಿ ವೈಮಾನಿಕ ಸಮೀಕ್ಷೆ ನಡೆಸಲಿರುವ ಕಾರಣ ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿಯಲ್ಲಿ ಬಳಿ ಹೆಲಿ ಪ್ಯಾಡ್‌ ನಿರ್ಮಾಣ ಮಾಡಲಾಗಿದೆ. ಮೊದಲಿಗೆ ರಾಷ್ಟ್ರೀಯ ಹೆದ್ದಾರಿ ಕಚೇರಿಗೆ ಭೇಟಿ ನೀಡಲಿರುವ ಸಚಿ​ವರು, ಆನಂತರ ಮಾಧ್ಯಮದವರನ್ನು ಉದ್ದೇಶಿಸಿ ಸುದ್ದಿಗೋಷ್ಠಿ ನಡೆ​ಸುವರು. ಇದಾದ ಬಳಿಕ ಹೆದ್ದಾರಿಯನ್ನು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ. ನಂತರ ಕಾರಿನಲ್ಲಿ ಸ್ವತಃ ಟೆಸ್ವ್‌ ಡ್ರೈವ್‌ ಮಾಡಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾ​ರಿ​ ಕಾಮ​ಗಾರಿ ಎರಡು ಪ್ಯಾಕೇಜ್‌ ಗಳಲ್ಲಿ ನಡೆ​ಯು​ತ್ತಿದ್ದು, ಮೊದಲ ಹಂತ​ದಲ್ಲಿ ಕೆಂಗೇ​ರಿ​ - ನಿಡ​ಘಟ್ಟಹಾಗೂ ಎರ​ಡನೇ ಹಂತ​ದಲ್ಲಿ ನಿಡ​ಘಟ್ಟ - ಮೈಸೂರುವರೆಗೆ ಕಾಮ​ಗಾರಿ ನಡೆ​ಯು​ತ್ತಿದೆ. ಈಗಾಗಲೇ ಮೊದಲ ಹಂತದ ನಿರ್ಮಾಣ ಕಾಮಗಾರಿಯು ಮುಕ್ತಾಯವಾಗಿದೆ.

ಉದ್ಯಮಿ ಆತ್ಮಹತ್ಯೆ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್‌ ಪ್ರಶ್ನಿಸಿ ಪೊಲೀಸರಿಗೆ ಪ್ರಭಾವಿಗಳ ಕರೆ

ಮಾರ್ಚ್‌ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಹೆದ್ದಾರಿಯನ್ನು ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ಕಳೆದ ಹಲವು ತಿಂಗಳ ಹಿಂದೆ ಸುರಿದ ಮಳೆ​ಯಿಂದಾಗಿ ಬೆಂಗಳೂರು - ಮೈಸೂರು ನೂತನ ಹೆದ್ದಾರಿಯೂ ಸಾಕಷ್ಟುಸುದ್ದಿಯಾಗಿತ್ತು. ಮಳೆ ನೀರು ಸರಾ​ಗ​ವಾಗಿ ಹರಿದು ಹೋಗದೆ ಹೆದ್ದಾ​ರಿಯೇ ಆವೃ​ತ​ವಾ​ಗಿತ್ತು. ಸಮಸ್ಯೆ ಪರಿಹಾರದ ದೃಷ್ಟಿಯಿಂದಾಗಿ ಜಿಲ್ಲಾ ಪೊಲೀಸರು ವಾಹನ ಸಂಚಾರ ಮಾರ್ಗ​ವನ್ನು ಬದ​ಲಾ​ಯಿ​ಸಿ​ದ್ದರು. ಜೊತೆಗೆ ಹೆದ್ದಾ​ರಿ​ಯಲ್ಲಿ ವಾಹ​ನ​ಗಳ ವೇಗಕ್ಕೆ ಮಿತಿ ಇಲ್ಲ​ದಿ​ರುವ ಕಾರಣ ಸಾಕಷ್ಟು ಅಪ​ಘಾ​ತ​ಗಳು ಕೂಡ ಸಂಭ​ವಿ​ಸು​ತ್ತಿ​ವೆ. ಇದೆ​ಲ್ಲವುದರ ಬಗ್ಗೆಯೂ ಸಚಿ​ವರು ಗಮನ ಹರಿ​ಸಲಿದ್ದಾ​ರೆ.

Follow Us:
Download App:
  • android
  • ios