ಮದ್ದೂ​ರು: ಎಕ್ಸ್‌ಪ್ರೆಸ್‌ ವೇನಿಂದ ಆರ್ಥಿಕ ಅಭಿ​ವೃ​ದ್ಧಿಗೂ ವೇಗ, ಪ್ರಧಾನಿ ಮೋದಿ

ಬಹು ವರ್ಷಗಳಿಂದ ಎರಡು ನಗ​ರ​ಗಳಲ್ಲಿ ಪ್ರಯಾಣಿಕರಿಗೆ ವಾಹ​ನ​ಗಳ ದಟ್ಟಣೆ ಕಾರ​ಣಕ್ಕೆ ದೂರು​ತ್ತಿ​ದ್ದರು. ಆದ​ರೀಗ ಬೆಂಗ​ಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ ಕಾರ​ಣ​ದಿಂದ ಪ್ರಯಾ​ಣದ ದೂರ​ವನ್ನು ಒಂದೂವರೆ ಗಂಟೆಯಲ್ಲಿ ಪೂರ್ಣ​ಗೊ​ಳಿ​ಸಲು ಸಾಧ್ಯ​ವಾ​ಗು​ತ್ತದೆ. ಇದ​ರಿಂದ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯೂ ವೇಗ ಪಡೆಯಲು ಸಹ​ಕಾ​ರಿ​ಯಾ​ಗ​ಲಿದೆ ಎಂದ ಪ್ರಧಾನ ಮಂತ್ರಿ​ ನರೇಂದ್ರ ಮೋದಿ.

Bengaluru Mysuru Expressway also Speeds up Economic Development Says PM Narendra Modi grg

ಎಂ. ಅಪ್ರೋಜ್‌ಖಾನ್‌

ಮದ್ದೂ​ರು/​ಮಂಡ್ಯ(ಮಾ.13): ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರು ಮಹ​ತ್ವ ​ಪೂರ್ಣ ನಗ​ರ​ ಪ್ರದೇ​ಶಗಳಾಗಿವೆ. ಬೆಂಗ​ಳೂರು ಟೆಕ್ನಾಲಜಿಗೆ ಪ್ರಸಿ​ದ್ಧಿ​ಯಾ​ದರೆ, ಮೈಸೂರು ಸಾಂಸ್ಕೃತಿಕ ಪರಂಪ​ರೆಗೆ ಹೆಸರು ವಾಸಿಯಾಗಿದೆ. ಎರಡು ನಗರಗಳು ಎಕ್ಸ್‌ಪ್ರೇಸ್‌ ವೇ ಆಧುನಿಕ ಸಂಪರ್ಕದಿಂದಾಗಿ ಈ ಭಾಗದ ಸುತ್ತ​ಮು​ತ್ತಲ ಪ್ರದೇಶದ ಆರ್ಥಿಕ ಅಭಿ​ವೃ​ದ್ಧಿಯೂ ವೇಗ ಪಡೆ​ಯ​ಲಿದೆ ಎಂದು ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿಯಲ್ಲಿ 8480 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 117 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ- 275ರ ಪ್ಯಾಕೇಜ್‌ ಸಮರ್ಪಣೆ ಹಾಗೂ 4130 ಕೋಟಿ ವೆಚ್ಚದಲ್ಲಿ 93 ಕಿ.ಮೀ ಉದ್ದದ ಮೈಸೂರು - ಕುಶಾಲನಗರ ವಿಭಾಗ ರಾಷ್ಟ್ರೀಯ ಹೆದ್ದಾರಿ -275ರ 4 ಪ್ಯಾಕೇಜ್‌ಗಳು ಸೇರಿ ಒಟ್ಟು 12 ಸಾವಿರ ಕೊಟಿಗೂ ಅಧಿಕ ಮೌಲ್ಯದ 210 ಕಿ.ಮೀ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮರ್ಪಣೆ ಮತ್ತು ಶಿಲಾನ್ಯಾಸ ನೆರ​ವೇ​ರಿಸಿದ ಮೋದಿ​, ಬೆಂಗ​ಳೂರು - ಮೈಸೂರು ನಗ​ರ​ಗಳು ಆಧು​ನಿಕವಾಗಿ ಸಂಪ​ರ್ಕ ಸಾಧಿ​ಸು​ವಂತೆ ಮಾಡು​ವುದು ಬೇರೆ ಬೇರೆ ದೃಷ್ಟಿ​ಕೋ​ನ​ಗ​ಳಿಂದ ಮಹತ್ವ ಪೂರ್ಣ​ವಾ​ಗಿತ್ತು. ಆ ಕನಸು ನನ​ಸಾ​ಗಿದೆ ಎಂದ​ರು.
ಬಹು ವರ್ಷಗಳಿಂದ ಎರಡು ನಗ​ರ​ಗಳಲ್ಲಿ ಪ್ರಯಾಣಿಕರಿಗೆ ವಾಹ​ನ​ಗಳ ದಟ್ಟಣೆ ಕಾರ​ಣಕ್ಕೆ ದೂರು​ತ್ತಿ​ದ್ದರು. ಆದ​ರೀಗ ಬೆಂಗ​ಳೂರು- ಮೈಸೂರು ಎಕ್ಸ್‌ ಪ್ರೆಸ್‌ ವೇ ಕಾರ​ಣ​ದಿಂದ ಪ್ರಯಾ​ಣದ ದೂರ​ವನ್ನು ಒಂದೂವರೆ ಗಂಟೆಯಲ್ಲಿ ಪೂರ್ಣ​ಗೊ​ಳಿ​ಸಲು ಸಾಧ್ಯ​ವಾ​ಗು​ತ್ತದೆ. ಇದ​ರಿಂದ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯೂ ವೇಗ ಪಡೆಯಲು ಸಹ​ಕಾ​ರಿ​ಯಾ​ಗ​ಲಿದೆ ಎಂದರು.

ದಳಪತಿಗಳ ಕೋಟೆಯಲ್ಲಿ ಮೋದಿ ರೋಡ್‌ ಶೋ... ಪ್ರಧಾನಿ ಕೊಂಡಾಡಿದ ಸಿಎಂ

ಎಕ್ಸ್‌ ಪ್ರೆಸ್‌ ವೇ ರಾಮನಗರ ಮತ್ತು ಮಂಡ್ಯ ಜಿಲ್ಲೆ​ಗಳ ಮೂಲಕ ಹಾದು ಹೋಗುತ್ತಿದೆ. ಇವು​ಗಳೂ ಐತಿ​ಹಾ​ಸಿಕ ಕಾರ​ಣಕ್ಕೆ ಹೆಚ್ಚು ಪ್ರಸಿ​ದ್ಧಿ​ಯಾ​ಗಿವೆ. ಇಲ್ಲಿನ ಪ್ರವಾ​ಸೋ​ದ್ಯ​ಮವೂ ಬೆಳ​ವ​ಣಿ​ಗೆ ಹೊಂದ​ಲಿವೆ. ಮೈಸೂ​ರು​ವ​ರೆಗೆ ತೆರ​ಳ​ವು​ದು ಎಕ್ಸ್‌ ಪ್ರೆಸ್‌ ವೇನಿಂದ ಸುಲ​ಭ​ವಾ​ಗ​ಲಿದೆ. ಜೊತೆಗೆ ಕಾವೇರಿ ಮಾತೆಯ ಉಗಮ ಸ್ಥಾನಕ್ಕೆ ಹೋಗುವ ವ್ಯವಸ್ಥೆಯೂ ಸರ​ಳ​ವಾ​ಗ​ಲಿದೆ ಎಂ​ದರು.

ಕೆಲ ದಿನ​ಗ​ಳಿಂದ ದೇಶ​ದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅದ​ರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಎಕ್ಸ್‌ ಪ್ರೆಸ್‌ ವೇಯ ಫೋಟೋ​ಗಳು ಹೆಚ್ಚು ವೈರಲ್‌ ಆಗಿ ಚರ್ಚೆಗಳು ಆಗು​ತ್ತಿವೆ. ಈ ಹೆದ್ದಾರಿ ನೋಡಿ ದೇಶದ ನಿವಾ​ಸಿ​ಗಳು ಹಾಗೂ ಯುವ​ಜನರಲ್ಲಿ ಹೆಮ್ಮೆ ಮತ್ತು ಗರ್ವ ಮೂಡಿ ಬಂದಿದೆ. ಇಂತಹ ಉತ್ತಮ ಮತ್ತು ಆಧು​ನಿಕ ಎಕ್ಸ್‌ ಪ್ರೆಸ್‌ ವೇಗಳು ಎಲ್ಲೆಡೆ ಆಗ​ಬೇಕೆಂದು ಇಚ್ಛೇ ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ ಎಂದರು.
ಈಗಷ್ಟೇ ಮೈಸೂರು- ಕುಶಾಲನಗರ ಚತು​ಷ್ಪಥ ಹೆದ್ದಾರಿಗೂ ಶಿಲಾನ್ಯಾಸ ನೆರವೇರಿಸಿದ್ದೇನೆ. ಈ ಯೋಜನೆಯೂ ಕ್ಷೇತ್ರ​ದ ವಿಕಾಸಕ್ಕೆ ವೇಗದ ಗತಿ ನೀಡುವ ಜೊತೆಗೆ ಸಮೃದ್ಧಿಯ ರಹದಾರಿ ತೆರೆಯಲಿದೆ. ಚತು​ಷ್ಪಥ ಹಾಗೂ ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟುಅನುಕೂಲಗಳಾ​ಗ​ಲಿವೆ ಎಂದರು.

ಪಶ್ಚಿಮ ಘಟ್ಟ​ಗ​ಳಲ್ಲಿ ಮಳೆಗಾಲದ ವೇಳೆ ಭೂ ಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ಹೆದ್ದಾರಿ ಆಗಾಗ ಬಂದ್‌ ಆಗುತ್ತದೆ. ಈ ಕಾರ​ಣಕ್ಕೆ ಬಂದ​ರಿನ ಸಂಪ​ರ್ಕ ಪ್ರಭಾವಕ್ಕೆ ಒಳ​ಗಾ​ಗು​ತ್ತದೆ. ಆದ​ರೀಗ ಮೈಸೂರು ಕುಶಾಲನಗರ ಹೆದ್ದಾ​ರಿ​ಯ ಅಗ​ಲೀ​ಕ​ರಣ ಈ ಸಮ​ಸ್ಯೆಯನ್ನು ಬಗೆ​ಹ​ರಿಸ​ಲಿದೆ. ಉತ್ತಮ ರಸ್ತೆ ಸಂಪರ್ಕದಿಂದ ಆ ಪ್ರದೇ​ಶ​ದಲ್ಲಿ ಕೈಗಾರಿಕಾ ಪ್ರದೇ​ಶದ ವಿಸ್ತಾ​ರವೂ ವೇಗ ಪಡೆ​ಯ​ಲಿದೆ ಎಂದು ಮೋದಿ ತಿಳಿ​ಸಿ​ದ​ರು.

ದೇಶ​ದಲ್ಲಿ ದಶಕಗಳಿಂದಲೂ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿದ್ದವು. ಇದಕ್ಕೆ ವೇಗ ನೀಡಲು ಈ ಬಾರಿಯ ಬಜೆಟ್‌ ನಲ್ಲಿ ಆ​ದ್ಯತೆ ನೀಡ​ಲಾ​ಗಿದೆ. ಭದ್ರ ಮೇಲ್ದಂಡ ಯೋಜನೆಗಾಗಿ 5300 ಕೋಟಿ ನೀಡುವ ಘೋಷಣೆ ಮಾಡಲಾ​ಗಿದೆ. ಇದ​ರಿಂದ ನೀರಾ​ವರಿ ಸಮ​ಸ್ಯೆಗೆ ಶಾಶ್ವತ ಪರಿ​ಹಾರ ಸಿಗ​ಲಿ​ದೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಕೊಡುಗೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ನಾಲ್ವಡಿ- ವಿಶ್ವೇ​ಶ್ವ​ರಯ್ಯ ಅವ​ರಿಗೆ ನಿತ್ಯವೂ ಗೌರವ ಸಲ್ಲ​ಬೇಕು:

ದೇಶದಲ್ಲಿ ಮೂಲ ಸೌಲಭ್ಯ ಕುರಿತು ಚರ್ಚೆಗಳಾ​ದಾಗ ನಾಲ್ವಡಿ ಕೃಷ್ಣ​ರಾಜ ಒಡೆ​ಯರ್‌ ಹಾಗೂ ಸರ್‌ ಎಂ.ವಿ​ಶ್ವೇ​ಶ್ವ​ರಯ್ಯರವರು ಹೆಸರು ಅಗ್ರ​ಗ​ಣ್ಯ​ದಲ್ಲಿ ಇರು​ತ್ತದೆ. ಇದೇ ಪುಣ್ಯ​ಭೂ​ಮಿಯ ಸುಪು​ತ್ರ​ರಾದ ಈ ಮಹಾನ್‌ ಪುರು​ಷ​ರು ದೇಶಕ್ಕೆ ಹೊಸ ದೃಷ್ಟಿಮತ್ತು ಶಕ್ತಿ ನೀಡಿ​ದ​ವರು. ಇಂತಹ ಪೂರ್ವ​ಜರ ತಪ​ಸ್ಸಿನ ಫಲದ ಲಾಭ​ವನ್ನು ಇಂದಿನ ಪೀಳಿಗೆ ಪಡೆ​ಯು​ತ್ತಿದೆ. ಇಂತಹ ಮಹಾನ್‌ ವೀರ​ರಿಗೆ ನಿತ್ಯವೂ ನಮನ ಸಲ್ಲಿ​ಸ​ಬೇಕು ಎಂದು ಬಣ್ಣಿ​ಸಿ​ದ​ರು.

ಇಂತಹ ಮಹಾನ್‌ ವ್ಯಕ್ತಿ​ಗ​ಳ ಪ್ರೇರ​ಣೆ​ಯಿಂದಾಗಿ ಆಧು​ನಿಕ ಮೂಲ ​ಸೌ​ಕ​ರ್ಯ​ಗಳ ಮೇಲೆ ಕೆಲಸಗಳು ನಡೆ​ಯು​ತ್ತಿವೆ. ಭಾರತ್‌ ಮಾಲಾ ಮತ್ತು ಸಾಗರ್‌ ಮಾಲಾ ಯೋಜನೆಯಿಂದ ಕರ್ನಾಟಕ ಜೊತೆಗೆ ದೇಶವೂ ಬದಲಾಗುತ್ತಿದೆ. ಪ್ರಪಂಚ ಕೊರೋನಾ ಸಂಕಷ್ಟಕಾಲದಲ್ಲಿ ಹೋರಾ​ಡು​ವಾಗಲೂ ಭಾರ​ತ​ದಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೇವು. ಈ ಬಾರಿ ಬಜೆಟ್‌ನಲ್ಲಿ 10 ಲಕ್ಷ ಕೋಟಿಯನ್ನು ಮೂಲಸೌಕರ್ಯಕ್ಕಾಗಿ ಮೀಸಲಿಟ್ಟಿದ್ದೇವೆ.
ಮೂಲ ಸೌಲಭ್ಯಗಳು ತನ್ನೊಂದಿಗೆ ಸೌಕರ್ಯ ಮಾತ್ರ ತರು​ವು​ದಿಲ್ಲ. ಉದ್ಯೋಗ, ಆದಾಯ, ಹೂಡಿಕೆಯ ಸಾಧ​ನ​ಗ​ಳನ್ನು ತರುತ್ತದೆ. ಕರ್ನಾ​ಟ​ಕ​ದಲ್ಲಿ ಕೆಲ ವರ್ಷ​ಗ​ಳಲ್ಲಿ 1 ಲಕ್ಷ ಕೋಟಿಗೂ ಅಧಿಕ ಹಣ​ವನ್ನು ಹೆದ್ದಾರಿ ಸಂಬಂಧಿತ ಯೋಜ​ನೆ​ಗ​ಳಿ​ಗಾಗಿ ವಿನಿ​ಯೋಗ ಮಾಡ​ಲಾ​ಗಿದೆ ಎಂ​ದರು.

ಬಿಜೆ​ಪಿಯ ಡಬಲ್‌ ಎಂಜಿನ್‌ ಸರ್ಕಾರದ ನಿರಂತರ ಪ್ರಯತ್ನ ನಿಮ್ಮ ಪ್ರೀತಿ​ಯ ಋುಣ​ವನ್ನು ಹಿಂದಿ​ರು​ಗಿ​ಸು​ವು​ದಾ​ಗಿದೆ. ವೇಗದ ಅಭಿ​ವೃದ್ಧಿ ಮೂಲಕ ಅದನ್ನು ಈಡೇ​ರಿ​ಸು​ತ್ತೇವೆ. ಸಾವಿರಾರು ಕೋಟಿಯ ಅಭಿವೃದ್ಧಿಗೆ ಶಂಕು​ಸ್ಥಾ​ಪನೆ ಹಾಗೂ ಶಿಲಾನ್ಯಾಸ ನೆರ​ವೇ​ರಿ​ಸು​ತ್ತಿ​ರು​ವುದು ಅದರ ಭಾಗ​ವಾ​ಗಿದೆ. ತಾಯಿ ಭುವನೇಶ್ವರಿ, ಮೇಲುಕೋಟೆ ಚಲುವನಾರಾಯಣ ಸ್ವಾಮಿ ಹಾಗೂ ಆದಿ ಚುಂಚನಗಿರಿ ವಂದನೆ ಸಲ್ಲಿಸಿ ಆಶೀ​ರ್ವಾದ ಬೇಡು​ತ್ತೇ​ನೆ. ಕೆಲ ದಿನ​ಗ​ಳಿಂದ ಕರ್ನಾಟಕದ ಬೇರೆ ಪ್ರದೇಶಗಳ ಜನರ ದರ್ಶನದ ಅವ​ಕಾಶ ಸಿಗುತ್ತಿದೆ. ಎಲ್ಲೆಡೆ ನಾಡಿನ ಜನರು ಅಭೂತಪೂರ್ವ ಆಶೀರ್ವಾದ ಮಾಡುತ್ತಿದ್ದಾರೆ. ಮಂಡ್ಯ ಜನರ ಪ್ರೀತಿಯೂ ಸಿಹಿ ಮಾಧು​ರ್ಯ​ದಿಂದ ಕೂಡಿದೆ. ಸಕ್ಕರೆ ನಗರ ಮಧುರ ಮಂಡ್ಯಕ್ಕೆ ಶಿರ ಭಾಗಿ ನಮಸ್ಕಾರ ಮಾಡುತ್ತೇನೆ ಅಂತ ಪ್ರಧಾನ ಮಂತ್ರಿ​ ನರೇಂದ್ರ ಮೋದಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios