Asianet Suvarna News Asianet Suvarna News

Bengaluru: ಮದುಮಗನನ್ನು ತಾಳಿ ಕಟ್ಟೋಕೆ ಹೋಗಲು ಬಿಡದ ಪೊಲೀಸರು! ಮೋದಿ ಬರ್ತಾರೆಂದು ರಸ್ತೆ ಕ್ಲೋಸ್‌!

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನರೇಂದ್ರ ಮೋದಿ ರೋಡ್‌ ಶೋಗೆ ಆಗಮಿಸಲಿದ್ದಾರೆ ಎಂದು ರಸ್ತೆಯನ್ನು ಬಂದ್‌ ಮಾಡಲಾಗಿದ್ದು, ತಾಳಿ ಕಟ್ಟಲು ಹೋಗುತ್ತಿದ್ದ ಮದುಮಗನ್ನು ಕಲ್ಯಾಣ ಮಂಟಪಕ್ಕೆ ಹೋಗಲು ಬಿಡದೇ ಪೊಲೀಸರು ಅಡ್ಡಗಟ್ಟಿದ ಘಟನೆ ಶನಿವಾರ ನಡೆದಿದೆ.

Bengaluru Modi road show Police did not allow groom to go to wedding sat
Author
First Published Apr 29, 2023, 3:33 PM IST

ಬೆಂಗಳೂರು (ಏ.29): ಸಿಲಿಕಾನ್‌ ಸಿಟಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನರೇಂದ್ರ ಮೋದಿ ರೋಡ್‌ ಶೋಗೆ ಆಗಮಿಸಲಿದ್ದಾರೆ ಎಂದು ರಸ್ತೆಯನ್ನು ಬಂದ್‌ ಮಾಡಲಾಗಿದ್ದು, ತಾಳಿ ಕಟ್ಟಲು ಹೋಗುತ್ತಿದ್ದ ಮದುಮಗನ್ನು ಕಲ್ಯಾಣ ಮಂಟಪಕ್ಕೆ ಹೋಗಲು ಬಿಡದೇ ಪೊಲೀಸರು ಅಡ್ಡಗಟ್ಟಿದ ಘಟನೆ ಶನಿವಾರ ನಡೆದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ರಸ್ತೆಯಲ್ಲಿ ಬಹಿರಂಗ ಪ್ರಚಾರ (Road Show) ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಸಂಚಾರ ಮಾಡುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಆದರೆ, ಈ ರಸ್ತೆಯಲ್ಲಿ ಹೋಗುತ್ತಿದ್ದ ಮದುಮಗ ಸರ್‌ ತನ್ನ ಮದುವೆಯಿದ್ದು, ಚೌಟ್ರಿ ಹೋಗಬೇಕು ಬ್ಯಾರಿಕೇಡ್‌ ತೆರೆದು ನನ್ನನ್ನು ಹೋಗಲು ಬಿಡಿ ಎಂದರೂ ಬಿಡದೇ ಮದುಮಗನನ್ನು ಅಡ್ಡಗಟ್ಟಿದ ಪೊಲೀಸರು ಆತನನ್ನು ಸತಾಯಿಸುತ್ತಿರುವುದು ಕಂಡುಬಂದಿದೆ.

ಬೆಂಗಳೂರು: ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯ ಭೀಕರ ಕೊಲೆ!

ರಿಷಪ್ಷನ್‌ಗೆ ತಡವಾಗಿದೆ ಎಂದರೂ ಬಿಡದ ಪೊಲೀಸರು: ಇನ್ನು ಈ ಘಟನೆ ನಡೆದಿರುವುದು ಸುಂಕದಕಟ್ಟೆ ರಸ್ತೆಯಲ್ಲಿರುವ ಅಕ್ಷಯ್ ಚೌಟ್ರಿಯ ಬಳಿ ನಡೆದಿದೆ. ಇಂದು ಮತ್ತು ನಾಳೆ ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ ರಿಷಪ್ಷನ್‌ ಇದ್ದು, ಭಾನುವಾರ ತಾಳಿ ಮುಹೂರ್ತವಿದೆ. ಹೀಗಾಗಿ, ಮದುಮಗ ಕಾರಿನಲ್ಲಿ ಬಂದು ಕಲ್ಯಾಣ ಮಂಟಪಕ್ಕೆ ಹೋಗಲು ಮುಂದಾಗಿದ್ದಾನೆ. ಆದರೆ, ಮದುಮಗನಿಗೆ ಸ್ವಲ್ಪ ದೂರದಲ್ಲಿರುವ ಚೌಟ್ರಿಗೆ ಹೋಗಲು ಬಿಡದೇ ಸಂಚಾರಿ ಪೊಲೀಸರು ಅಡ್ಡಗಟ್ಟಿರುವ ಘಟನೆ ಸುಂಕದಕಟ್ಟೆ ರಸ್ತೆಯ ನೈಸ್ ರೋಡ್ ಜಂಕ್ಷನ್‌ ಬಳಿ ನಡೆದಿದೆ. 

ಸುಂಕದಕಟ್ಟೆ ನೈಸ್‌ ರೋಡ್‌ ಜಂಕ್ಷನ್‌ ಬಳಿ ಘಟನೆ: ನೈಸ್ ರೋಡ್ ಜಂಕ್ಷನ್ ಬಳಿ ಕಲ್ಯಾಣ ಮಂಟಪಕ್ಕೆ ತೆರಳು ಬಂದ ಮದು ಮಗನ ಕಾರಿಗೆ ಪೊಲೀಸರು ತಡೆಯೊಡ್ಡಿದ್ದಾರೆ. ಪೊಲೀಸರು ತಡೆ ನೀಡಿದ ಹಿನ್ನೆಲೆಯಲ್ಲಿ ತಾನೇ ಖುದ್ದು ಕಾರಿನಿಂದ ಇಳಿದು, ಇದೇ ರಸ್ತೆಯಲ್ಲೇ ಚೌಟ್ರಿ ಇದೆ ಸರ್. ನಮ್ಮನ್ನು ಮದುವೆ ಕಾರ್ಯಕ್ರಮಕ್ಕೆ ಹೋಗಲು ಬಿಡುವಂತೆಮದುಮಗ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಹಿನ್ನೆಲೆಯಲ್ಲಿ ನೈಸ್ ರೋಡ್ ಜಂಕ್ಷನ್ ಬಳಿ ರಸ್ತೆ ಬ್ಲಾಕ್ ಮಾಡಲಾಗಿದೆ ಎಂದು ಮದುಮಗನನ್ನು ಅಲ್ಲಿಯೇ ನಿಲ್ಲಿಸಿದ್ದಾರೆ.

ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಸಿದ್ದರಾಮಯ್ಯ: ವೈದ್ಯರಿಂದ ತಪಾಸಣೆ

ಚೌಟ್ರಿಯಿಂದ ಆಗಮಿಸಿದ ಕುಟುಂಬಸ್ಥರು: ಇದರಿಂದ ಆತಂಕಗೊಂಡ ಮದುಮಗ ಚೌಟ್ರಿಯಲ್ಲಿದ್ದ ತನ್ನ ಕುಟುಂಬಸ್ಥರನ್ನು ಕರೆಸಿಕೊಂಡಿದ್ದಾರೆ. ನಂತರ, ಎಲ್ಲರೂ ಬಂದು ಮದುವೆ ಚೌಟ್ರಿಯಲ್ಲಿ ಎಲ್ಲ ಸಿದ್ಧತೆಯನ್ನು ಮಾಡಲಾಗಿದ್ದು, ಮದುಮಗನ ಕಾರು ಹೋಗಲು ಅವಕಾಶ ಮಾಡಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಎಲ್ಲವನ್ನು ಪರಿಶೀಲನೆ ಮಾಡಿದ ಪೊಲೀಸರು ಕೊನೆಗೆ ಸಾರ್ವಜನಿಕರಿಂದ ಗಲಾಟೆ ಎದುರಾಗಬಹುದು ಎಂದು ಅರಿತು, ಮದುಮಗನನ್ನು ಚೌಟ್ರಿಯತ್ತ ತೆರಳಲು ಅನುಕೂಲ ಆಗುವಂತೆ ಬ್ಯಾರಿಕೇಡ್‌ ಅನ್ನು ತೆರೆದು ಅವಕಾಶ ಮಾಡಿಕೊಟ್ಟರು. ನಂತರ, ಈ ರಸ್ತೆಯನ್ನು ಬಂದ್‌ ಮಾಡಲಾಗಿದ್ದು, ರೋಡ್‌ ಶೋ ಮುಕ್ತಾಯದವರೆಗೆ ಈ ರಸ್ತೆಯಲ್ಲಿ ಓಡಾಡದಂತೆ ಸೂಚನೆ ನೀಡಿ ಕಳುಹಿಸಿದರು.

ಪೊಲೀಸರ ಮೇಲೆ ಆಕ್ರೋಶ: ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಮದುಮಗನನ್ನು ರುದ್ರೇಶ್‌ ಎಂದು ಗುರುತಿಸಲಾಗಿದೆ. ಆದರೆ, ಮದುವೆ ಮಾಡಿಕೊಳ್ಳಲು ಹೋಗುತ್ತಿದ್ದ ವರನನ್ನು ತಡೆದು ನಿಲ್ಲಿಸಿದ ಹಿನ್ನೆಲೆಯಲ್ಲಿ ಮದುಮಗ ಹಾಗೂ ಅವರ ಕುಟುಂಬಸ್ಥರು ಆರಂಭದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ, ಚೌಟ್ರಿಯ ಬಳಿ ಹೋಗಲು ಬದಲಿ ರಸ್ತೆ ಇಲ್ಲದಿರುವ ಬಗ್ಗೆ ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟ ನಂತರ ರಸ್ತೆಗಳ ಬಗ್ಗೆ ಮಾಹಿತಿ ಪಡೆದು, ಮದುಮಗನ ಕಾರನ್ನು ಮಾತ್ರ ಚೌಟ್ರಿಯ ಬಳಿ ಹೋಗಲು ಅವಕಾಶ ಮಾಡಿಕೊಟ್ಟರು. 

Latest Videos
Follow Us:
Download App:
  • android
  • ios