Asianet Suvarna News Asianet Suvarna News

ಮೆಟ್ರೋ ಪ್ರಯಾಣಿಕರೇ ಗಮನಿಸಿ: ನಾಳೆ ಕೆ.ಆರ್.ಪುರ- ಗರುಡಾಚಾರ್‌ಪಾಳ್ಯ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ. ನಾಳೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಕೆ.ಆರ್.ಪುರಂ ಹಾಗೂ ಗರುಡಾಚಾರ್‌ಪಾಳ್ಯದ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. 

Bengaluru metro passengers attention KR Pura Garudacharpalya metro service suspended tomorrow sat
Author
First Published Sep 28, 2023, 2:46 PM IST

ಬೆಂಗಳೂರು (ಸೆ.28): ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿಯಿಂದ ಚಲ್ಲಘಟ್ಟ ಮಟ್ರೋ ನಿಲ್ದಾಣಗಳ ನಡುವೆ ರೈಲ್ವೆ ಸುರಕ್ಷತಾ ಪರಿಶೀಲನೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಸೆ.29 ಶುಕ್ರವಾರ ಕೆಂಗೇರಿಯಿಂದ ಮೈಸೂರು ರಸ್ತೆವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಈಗಾಗಲೇ ತಿಳಿಸಿದೆ. ಆದರೆ, ಇದೇ ನೇರಳೆ ಮಾರ್ಗದ ಉತ್ತರ ತುದಿಯಲ್ಲಿ ಕೆ.ಆರ್. ಪುರದಿಂದ ಗರುಡಾಚಾರ್‌ಪಾಳ್ಯದವರೆಗೂ ಮೆಟ್ರೋ ಸಂಚಾರ ಸ್ಥಗಿತ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇನ್ನು ನೇರಳೆ ಮಾರ್ಗದ ಮುಂದುವರೆದ ಭಾಗವಾದ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಹಾಗೂ ಗರುಡಾಚಾರ್‌ ಪಾಳ್ಯದಿಂದ ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆ ಪೂರ್ಣ ದಿನದಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಸಾಮಾನ್ಯ ದಿನಗಳಂತೆ ಬೆಳಗ್ಗೆಯಿಂದ ರಾತ್ರಿವರೆಗೆ ಮೆಟ್ರೋ ಸೇವೆ ಲಭ್ಯವಿರುತ್ತದೆ. ಉಳಿದಂತೆ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಬೇಕೆಂದು ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿರುವ ಬೆಂಗಳೂರು ಮೆಟ್ರೋ ಅಧಿಕಾರಿಗಳು ಪ್ರಯಾಣಿಕರು ಮೆಟ್ರೋ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಮೆಟ್ರೋ ಸೇವೆ ವ್ಯತ್ಯಯ: ನೇರಳೆ ಮಾರ್ಗದ ದಕ್ಷಿಣ ಭಾಗದಲ್ಲಿ ಶುಕ್ರವಾರ ಮೆಟ್ರೋ ಸಂಚಾರ ಸ್ಥಗಿತ

ಕರ್ನಾಟಕ ಬಂದ್‌ಗೆ ಮೆಟ್ರೋ ಸಂಚಾರ ಸ್ಥಗಿತವಿಲ್ಲ: ಇನ್ನು ಕರ್ನಾಟಕ ಬಂದ್‌ ಅಥವಾ ಇನ್ಯಾವುದೇ ಕಾರಣದಿಂದ ಮೆಟ್ರೋ ಸಂಚಾರವನ್ನು ಸ್ಥಗಿತ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳಿಂದ ಮಾತ್ರ ಕರೆ ನೀಡಲಾಗಿದ್ದು, ಸರ್ಕಾರದಿಂದ ಬಂದ್‌ಗೆ ಅನುಮತಿ ನೀಡಿರುವುದಿಲ್ಲ. ಜೊತೆಗೆ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಬಂದ್‌ ಮಾಡಲಾಗುತ್ತಿದ್ದು, ಮೆಟ್ರೋ ಸಂಚಾರ ಸಾಮಾನ್ಯ ದಿನಗಳಂತೆ ಮೆಟ್ರೋ ಸೇವೆ ಲಭ್ಯವಿರುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 

Bengaluru metro passengers attention KR Pura Garudacharpalya metro service suspended tomorrow sat

Follow Us:
Download App:
  • android
  • ios