ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಎಚ್ಚರ. 4 ದಿನಗಳ ಕಾಲ ಮೆಟ್ರೋ ಸೇವೆಯನ್ನು ವ್ಯತ್ಯವ ಉಂಟಾಗಲಿದ್ದು, ನೀವು ತುರ್ತಾಗಿ ಎಲ್ಲಿಗೇ ಹೋಗಬೇಕಿದ್ದರೂ ರಸ್ತೆ ಮೂಲಕವೇ ಟ್ರಾಫಿಕ್‌ ದಾಟಿಕೊಂಡು ಹೋಗಬೇಕಾಗಲಿದೆ.

ಬೆಂಗಳೂರು (ಜ.24): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಎಚ್ಚರ. 4 ದಿನಗಳ ಕಾಲ ಮೆಟ್ರೋ ಸೇವೆಯನ್ನು ವ್ಯತ್ಯವ ಉಂಟಾಗಲಿದ್ದು, ನೀವು ತುರ್ತಾಗಿ ಎಲ್ಲಿಗೇ ಹೋಗಬೇಕಿದ್ದರೂ ರಸ್ತೆ ಮೂಲಕವೇ ಟ್ರಾಫಿಕ್‌ ದಾಟಿಕೊಂಡು ಹೋಗಬೇಕಾಗಲಿದೆ. ಮೈಸೂರು ಮತ್ತು ಕೆಂಗೇರಿ ನಡುವಿನ ರಸ್ತೆಯನ್ನು ನಾಲ್ಕು ದಿನ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿ. (ಬಿಎಂಆರ್‌ಎಇಎಲ್‌) ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಈ ಕುರಿತು ಸಾರ್ವಜನಿಕ ಪ್ರಟಕಣೆ ಹೊರಡಿಸಿದ ಬಿಎಂಆರ್‌ಸಿಎಲ್‌ ಸಂಸ್ಥೆಯು ಕಂಗೇರಿಯಿಂದ ಚಲ್ಲಘಟ್ಟದವರೆಗಿನ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದ ನಿಯೋಜಿತ ಕಾಮಗಾರಿಗಳಿಗಾಗಿ, ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ನೇರಳ ಮಾರ್ಗದ ಮೆಟ್ರೋ ರೈಲು ಸೇವೆಗಳನ್ನು ದಿನಾಂಕ ಜ.27 (ಶುಕ್ರವಾರ) ದಿಂದ ಜ.30 (ಸೋಮವಾರ) ದವರೆಗೆ ಒಟ್ಟು 4 ದಿನಗಳ ಅವಧಿಗೆ ತಾತ್ಕಾಲಿಕವಾಗಿ ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

ಮೆಟ್ರೋದಲ್ಲಿ ಪ್ರತ್ಯಕ್ಷಳಾದ ನಾಗವಲ್ಲಿಯಿಂದ ಪ್ರಯಾಣಿಕರಿಗೆ ಕಿರುಕುಳ : ವಿಡಿಯೋ ವೈರಲ್

ಜ. 31 ರಿಂದ ಯಥಾಪ್ರಕಾರ ಮೆಟ್ರೋ ರೈಲು ಓಡಾಟ: ಆದರೆ, ಈ ಸದರಿ ದಿನಗಳಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತದೆ. ಬೈಯಪ್ಪನಹಳ್ಳಿಯಿಂದ ಕಂಗೇರಿವರೆಗಿನ ಮಾರ್ಗದಲ್ಲಿ ರೈಲು ಸೇವೆಗಳು 31ನೇ ಜನವರಿ 2023 ರಿಂದ ಬೆಳಗ್ಗೆ 5.00 ಗಂಟೆಯಿಂದ ವೇಳಾಪಟ್ಟಿಯ ಪ್ರಕಾರ ಮೆಟ್ರೋ ರೈಲು ಸೇವೆಯು ಪುನರಾರಂಭಿಸಲಾಗುತ್ತದೆ. ಜೊತೆಗೆ, ಹಸಿರು ಮಾರ್ಗದ, ನಾಗಸಂದ್ರ ಮತ್ತು ರೇಷ್ಮೆ, ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರೈಲುಗಳು ವೇಳಾಪಟ್ಟಿಯ ಯಥಾಪ್ರಕಾರ ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದೆ.

ಕೆಂಗೇರಿ-ಚಲ್ಲಘಟ್ಟ ಕಾಮಗಾರಿಗೆ ವೇಗ: ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ನಿಲ್ದಾಣದವರೆಗೆ ಆಗುತ್ತಿರುವ ಮೆಟ್ರೋ ರೈಲು ವ್ಯತ್ಯಯದಿಂದ ಪ್ರಯಾಣಿಕರಿಗೆ ಆಗುವ ಅನಾನುಕೂಲಕ್ಕಾಗಿ ವಿಷಾಧಿಸುತ್ತೇವೆ. ಕೆಂಗೇರಿಯಿಂದ ಚೆಲಘಟ್ಟದವರೆಗಿನ ವಿಸ್ತರಣಾ ಮಾರ್ಗದ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿಕೊಂಡಿದೆ. 

ಕೆಆರ್ ಪುರಂ -ವೈಟ್‌ಫೀಲ್ಡ್ ನಡುವಿನ ಮೆಟ್ರೋ ಸೇವೆ ಮಾರ್ಚ್ ನಲ್ಲಿ ಆರಂಭ

ಕೆಆರ್ ಪುರಂ -ವೈಟ್‌ಫೀಲ್ಡ್ ಮೆಟ್ರೋ ಸೇವೆ ಮಾರ್ಚ್‌ಗೆ ಆರಂಭ: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಮೆಟ್ರೋ ಕಾಮಗಾರಿಯನ್ನು ಪರಿಶೀಲಿಸಲು ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರನ್ನು ಆಹ್ವಾನಿಸಿದೆ, ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಮೆಟ್ರೋ ಮಾರ್ಗವು ಮಾರ್ಚ್‌ನಲ್ಲಿ ತೆರೆಯುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ತಿಳಿಸಿದ್ದರು. 

ತಪಾಸಣೆಗೆ ಕೇಂದ್ರದ ತಂಡ ಆಗಮನ: ತಪಾಸಣೆ ಕಾರ್ಯವು ಟ್ರ್ಯಾಕ್‌ಗಳ ಪರಿಶೀಲನೆ, ನಿಲ್ದಾಣದ ಸುರಕ್ಷತೆ, ಸಿಗ್ನಲಿಂಗ್, ವಿಸ್ತರಣೆಯಲ್ಲಿ ವಿದ್ಯುತ್ ಸ್ಥಾಪನೆಯನ್ನು ಒಳಗೊಂಡಿರುತ್ತದೆ. "ನಾವು ಮೆಟ್ರೋ ರೈಲು ಸುರಕ್ಷತಾ ಆಯೋಗಕ್ಕೆ ಈ ಮಾರ್ಗದಲ್ಲಿ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆಯುಕ್ತರು ಫೆ.16ರಂದು ಪರಿಶೀಲನೆ ಕಾರ್ಯ ಆರಂಭಿಸಿ ನಾಲ್ಕೈದು ದಿನಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಅದರ ನಂತರ ನಾವು ನಮ್ಮ ಪ್ರಾಯೋಗಿಕ ರನ್‌ಗಳನ್ನು ಪ್ರಾರಂಭಿಸುತ್ತೇವೆ. ಈ ವರ್ಷದ ಮಾರ್ಚ್‌ನಿಂದ ವಿಸ್ತರಣೆಯು ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಪರ್ವೇಜ್ ಹೇಳಿದರು.