ಬೆಂಗಳೂರಿನ ವಿವಿಧೆಡೆ ಆ.26ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು ಜಲಮಂಡಳಿ ವತಿಯಿಂದ ಕಾವೇರಿ ಕುಡಿಯುವ ನೀರು ಪೂರೈಕೆ 4ನೇ ಹಂತದಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಆ.26ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು (ಆ.24): ಬೆಂಗಳೂರು ಜಲಮಂಡಳಿ ವತಿಯಿಂದ ಕಾವೇರಿ ಕುಡಿಯುವ ನೀರು ಪೂರೈಕೆ 4ನೇ ಹಂತದಲ್ಲಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಆ.26ರಂದು (ಶನಿವಾರ) ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 4ನೇ ಹಂತ 1ನೇ ಘಟ್ಟದ ವ್ಯಾಪ್ತಿಗೆ ಒಳಪಡುವ ಜೆ.ಪಿ.ನಗರ 4ನೇ ಹಂತ ಮೆಟ್ರೋ ನಿಲ್ದಾಣ, ಬನ್ನೇರುಘಟ್ಟ, ರಸ್ತೆ ಸಮೀಪ ಬಿ.ಎಂ.ಆರ್.ಸಿ.ಎಲ್ ರವರ ಅಡಿಯಲ್ಲಿ ಹೊಸದಾಗಿ 900 ಮಿ.ಮೀ. ವ್ಯಾಸದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗದ ಕಾಮಗಾರಿಯು ಪೂರ್ಣಗೊಂಡಿದೆ. ಈ ಕೊಳವೆ ಮಾರ್ಗವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಕೊಳವೆ ಮಾರ್ಗಗಳಿಗೆ, ಜೋಡಣೆ ಮಾಡುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನಾಂಕ: 26-08- 2023 (ಶನಿವಾರ) ರಂದು ಈ ಕೆಳಕಂಡ ಬೆಂಗಳೂರಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವರಮಹಾಲಕ್ಷ್ಮಿ ಪೂಜಿಸುವ ಹೂವು, ಹಣ್ಣಿನ ಮೇಲೆ ವಕ್ರದೃಷ್ಟಿ ಬೀರಿದಳೇ ಧನಲಕ್ಷ್ಮಿ: ಗಗನಕ್ಕೇರಿದ ಬೆಲೆಗಳು
ಜೆ.ಪಿನಗರ 3ರಿಂದ 7ನೇ ಘಟ್ಟ ಅರಕೆರೆ ಮೈಕೋ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ಹುಳಿ ಮಾವು, ಬಿಳೇಕಳ್ಳಿ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕೋಣನಕುಂಟೆ, ಚುಂಚಘಟ್ಟ, ಜರಗನಹಳ್ಳಿ, ರಂಗಾಕಾಲೋನಿ, ಜಯನಗರ 4ನೇ ಟಿ ಬ್ಲಾಕ್, ತಿಲಕ್ ನಗರ, ಎಸ್.ಆರ್.ಕೃಷ್ಣಪ್ಪ ಗಾರ್ಡನ್, ಬಿ.ಟಿ.ಎಂ 2ನೇ ಹಂತ, ಮಡಿವಾಳ, ಡಾಲರ್ಸ್ ಕಾಲೋನಿ, ಗುರಪ್ಪನಪಾಳ್ಯ, ತಾವರೆಕರ, ಬಿಸ್ಮಿಲ್ಲಾ ನಗರ, ಹೆಚ್.ಎಸ್.ಆರ್. ಲೇಔಟ್ 1ನೇ ಸೆಕ್ಸರ್ ನಿಂದ 7ನೇ ಸಕ್ಕರ್, ಮಂಗಮ್ಮನಪಾಳ್ಯ, ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ 1ನೇ ಬ್ಲಾಕ್ ನಿಂದ 4ನೇ ಬ್ಲಾಕ್, ಬೆಳ್ಳಂದೂರು, ಎಸ್.ಟಿ.ಬೆಡ್, ಜಕ್ಕಸಂದ್ರ ವೆಂಕಟಾಪುರ, ಶಾಂತಿನಗರ ಕೋ-ಅಪರೇಟಿವ್ ಸೊಸೈಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಮನವಿ ಮಾಡಿದೆ.