ಬೆಂಗಳೂರಿನಲ್ಲಿ ಯುವಕನೊಬ್ಬ 6x3 ಅಡಿ ಜಾಗದಲ್ಲಿ ನಿರ್ಮಿಸಿದ ಕೋಣೆಗೆ 25,000 ರೂ. ಬಾಡಿಗೆ ಪಾವತಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ದರಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಫೆ.10): ಭಾರತದಲ್ಲಿ ವಾಸಯೋಗ್ಯಕ್ಕೆ ನಂ:1 ನಗರ ಎಂಬು ಖ್ಯಾತಿಯಾಗುತ್ತಿರುವ ಬೆಂಗಳೂರು ನಗರದಲ್ಲಿ ಮನೆಗಳು ಹಾಗೂ ಫ್ಲಾಟ್‌ಗಳ ಬಾಡಿಗ ದರಗಳನ್ನು ಕೇಳಿದರೆ ಬೆಂಗಳೂರು ಸಹವಾಸವೇ ಬೇಡ ಎನ್ನಿಸುತ್ತದೆ. ಕಾರಣ, ಇಲ್ಲೊಬ್ಬ ಯುವಕ 6x3 ಅಡಿ ಜಾಗದಲ್ಲಿ ಒಂದು ಕೋಣೆಗೆ ಬರೋಬ್ಬರಿ 25,000 ರೂ. ಪಾವತಿ ಮಾಡುತ್ತಿರುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.

ಭಾರತದ ಹಲವು ನಗರಗಳಲ್ಲಿ ಬಾಡಿಗೆ ಏರುತ್ತಲೇ ಇದೆ. ಸಾಮಾನ್ಯ ಜನರಿಗೆ ಭರಿಸಲಾಗದ ಬಾಡಿಗೆಗಳು ಹಲವು ಕಡೆಗಳಲ್ಲಿವೆ. ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ಒಂದು ಸಣ್ಣ ಕೋಣೆಗೂ ಸಹ ಹೆಚ್ಚಿನ ಬಾಡಿಗೆ ವಿಧಿಸಲಾಗುತ್ತದೆ. ಇದನ್ನು ಸಾಬೀತುಪಡಿಸುವ ಹಲವಾರು ಪೋಸ್ಟ್‌ಗಳು ಈ ಹಿಂದೆಯೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈಗ ಅಂತಹದ್ದೇ ಒಂದು ಪೋಸ್ಟ್ ಗಮನ ಸೆಳೆಯುತ್ತಿದೆ. ಒಬ್ಬ ಯುವಕ ತನ್ನ ಕೋಣೆಯ ದೃಶ್ಯಗಳನ್ನು ವೀಡಿಯೊದಲ್ಲಿ ತೋರಿಸುತ್ತಿದ್ದಾನೆ. ಅದರ ಬಾಡಿಗೆ ತಿಂಗಳಿಗೆ 25,000 ರೂಪಾಯಿ ಎಂದು ತಿಳಿದಾಗ ನಾವು ನಿಜಕ್ಕೂ ದಂಗಾಗುತ್ತೇವೆ. ಬೆಂಗಳೂರಿನಲ್ಲಿರುವ ತನ್ನ ಕೋಣೆಯಿಂದ ಯುವಕ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ.

ಉತ್ತರ ಭಾರತದಿಂದ ಬೆಂಗಳೂರಿಗೆ ಕೆಲಸ ಮಾಡಲು ಬಂದಿರುವ ಯುವಕ ವಾಸವಾಗಿರುವ ಕೋಣೆಯನ್ನು ಆತನ ಸ್ನೇಹಿತ ಬಂದು ವಿಡಿಯೋ ಮಾಡಿದ್ದಾನೆ. ಹಿಂದಿ ಭಾಷೆಯಲ್ಲಿಯೇ ಮಾತನ್ನು ಆರಂಭಿಸುವ ಈ ಯುವಕ ವೀಡಿಯೊ ಆರಂಭವಾದಾಗ ಕೋಣೆಯ ಮಧ್ಯದಲ್ಲಿ ನಿಂತಿರುವುದು ಕಾಣುತ್ತದೆ. ತನ್ನ ಎರಡೂ ಕೈಗಳನ್ನು ಅವನು ಚಾಚಿ ಹಿಡಿದಿದ್ದಾನೆ. ಆತನ ಕೈಗಳಿಗೆ ಎರಡೂ ಬದಿಯ ಹಗೋಡೆಗಳು ತಾಕುತ್ತವೆ. ಜೊತೆಗೆ ರೂಮಿನ ಉದ್ದವನ್ನು ನೋಡಿದರೆ ಆತ ಒಂದು ಗೋಡೆಗೆ ಕೈಕೊಟ್ಟು ನಿಂತು ಇನ್ನೊಂದು ಗೋಡೆಯ ಬದಿಗೆ ಕಾಲು ಚಾಚುವುದಕ್ಕೂ ಸಾಧ್ಯವಿಲ್ಲ. ಹೀಗೆ ಅಳತೆಯ ಮೂಲಕ ಈ ಕೋಣೆಯ ಗಾತ್ರ ಎಷ್ಟಿದೆ ಎಂದು ಯುವ ತೋರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಬಹಿಷ್ಕರಿಸಿದ ಪ್ರಯಾಣಿಕರು, ಆಟೋನೇ ಚೀಪರ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ!

ಇನ್ನು ಈ ರೂಮಿನ ಬಾಡಿಗೆ ನೀಡುವಾಗ ಒಂದು ಬಿಆರ್‌ ಎಂದು ಜಾಹೀರಾತು ಹಾಕಿದ್ದಾರೆ. ಒಂದು ಬಿಆರ್ ಎಂದರೆ ಒಂದು ಬಾಲ್ಕನಿ ರೂಮ್ ಎಂದರ್ಥ. ಇನ್ನು ಬಾಲ್ಕನಿ ನೋಡಿದರೆ ರೂಮಿನ ಶೇ.25ಕ್ಕಿಂತ ಕಡಿಮೆಯಿದೆ. ಅಲ್ಲಿ ಒಬ್ಬರು ನಿಂತುಕೊಳ್ಳಬಹುದು ಅಷ್ಟೇ? ಇಬ್ಬರು ಕುಳಿತು ಮಾತನಾಡುವುದಕ್ಕೂ ಆಗುವುದಿಲ್ಲ. ಇಷ್ಟು ಚಿಕ್ಕ ವಾಸಸ್ಥಳವಾದ್ದರಿಂದ ಏನು ಪ್ರಯೋಜನ ಎಂದು ಯುವಕ ತಮಾಷೆಯಾಗಿ ಹೇಳುತ್ತಿದ್ದಾನೆ.

View post on Instagram

ಇಲ್ಲಿ ಹೆಚ್ಚಿನ ವಸ್ತುಗಳನ್ನು ಇಡಲು ಸ್ಥಳವಿಲ್ಲದ ಕಾರಣ ಹೆಚ್ಚಿನದೇನನ್ನೂ ಖರೀದಿಸಬೇಕಾಗಿಲ್ಲ. ಇದರಿಂದ ಹಣ ಉಳಿಸಬಹುದು ಎಂದು ಯುವಕ ಹೇಳುತ್ತಿದ್ದಾನೆ. ಹಲವಾರು ಜನರು ವೀಡಿಯೊಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಮುಂಬೈ ನಗರದ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಇಷ್ಟು ದೊಡ್ಡ ಮೊತ್ತದ (25,000 ರೂ.) ಬಾಡಿಗೆ ಕೊಟ್ಟು ಒಬ್ಬ ವ್ಯಕ್ತಿ ಇಷ್ಟು ಚಿಕ್ಕ ಕೋಣೆಯಲ್ಲಿ ಹೇಗೆ ವಾಸಿಸುತ್ತಾನೆ ಎಂಬುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಶ್ರೀಮಂತರಿಗೆ ಮಾತ್ರವೇ ಇನ್ನು ಮೆಟ್ರೋ, ಬಡವ, ಮಧ್ಯಮವರ್ಗಕ್ಕೆ ಸರ್ಕಾರಗಳೇ ಶತ್ರು!