ಬೆಂಗಳೂರು [ಡಿ.22]: ಸಿಲಿಕಾನ್ ಸಿಟಿಯಲ್ಲಿ 8 ಕೋಟಿ ಮೌಲ್ಯದ ನಾಯಿಯೊಂದು ಕಳುವಾಗಿದ್ದು, ನಾಯಿ ಹುಡುಕಿಕೊಟ್ಟವರಿಗೆ ಮಾಲೀಕರು ಬಹುಮಾನ ಘೋಷಿಸಿದ್ದಾರೆ. 

ಬೆಂಗಳೂರಿನ ಸೆಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಎಂಬುವವರಿಗೆ ಸೇರಿದ ಅಲಸ್ಕನ್ ಮಲಮುಟೆ ತಳಿಗೆ ಸೇರಿದ ನಾಯಿಯು ಶ್ರೀನಗರದಿಂದ ಕಳುವಾಗಿದೆ.  

ಕಳೆದ ಎರಡು ವರ್ಷಗಳ ಹಿಂದೆ ಚೀನಾದಿಂದ 8 ಕೋಟಿ ರು. ಪಾವತಿಸಿ ತರಲಾಗಿದ್ದ ಮೂರು ವರ್ಷ ವಯಸ್ಸಿನ ನಾಯಿಯು ಡಿಸೆಂಬರ್ 5 ರಂದು ಕಳುವಾಗಿದೆ. 

ಸಾವಿರ ಕತೆ ಹೇಳುತ್ತೆ ಈ ಚಿತ್ರ: ನಂಬಿಕಸ್ಥ, ನಿಸ್ವಾರ್ಥ ಶ್ವಾನಕ್ಕೆ ಸೇನಾಧಿಕಾರಿಯ ಸೆಲ್ಯೂಟ್..

ಕೆಂಬಣ್ಣ ಹಾಗೂ ಬಿಳಿ ಮಿಶ್ರಿತವಾದ ಬಣ್ಣ ಹೊಂದಿರುವ ನಾಯಿಯನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ಮಾಲೀಕ ಸತೀಶ್ ಅವರು ಘೋಷಿಸಿದ್ದಾರೆ. 
  
ಸದ್ಯ ನಾಯಿ ಕಳುವಾಗಿರುವ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.