Asianet Suvarna News Asianet Suvarna News

ಬೆಂಗಳೂರು: ಸುಸ್ತು ಅಂತ ಆಸ್ಪತ್ರೆ ಸೇರಿದ ಮಹಿಳೆಯ ಪ್ರಾಣ ತೆಗೆದು ಮಸಣಕ್ಕೆ ಕಳಿಸಿದ್ರು!

ಸುಸ್ತಾಗುತ್ತಿದೆ ಎಂದು ರಾತ್ರಿ ವೇಳೆ ಆಸ್ಪತ್ರೆಗೆ ಹೋದ ಮಹಿಳೆಯ ಪ್ರಾಣವನ್ನು ತೆಗೆದ ಆಸ್ಪತ್ರೆ ಸಿಬ್ಬಂದಿ ಮಸಣಕ್ಕೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

Bengaluru Kalyan Nagar Hospital admit women patient death from wrong medicine sat
Author
First Published Dec 7, 2023, 6:06 PM IST

ಬೆಂಗಳೂರು (ಡಿ.07): ರಾಜ್ಯದಲ್ಲಿ ರೋಗಿಗಳ ಜೀವದ ಜೊತೆಗೆ ಚೆಲ್ಲಾಡುವಾಡುತ್ತಿರುವ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ತೀವ್ರ ಸುಸ್ತಾಗುತ್ತಿದೆ ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಪ್ರಯೋಗಾತ್ಮಕಾಗಿ ಯಾವ್ಯಾವುದೋ ಇಂಜೆಕ್ಷನ್ ನೀಡಿ ಸಾಯಿಸಿದ್ದಾರೆ. ನಂತರ ನೀವು ಹಣ ಕಟ್ಟುವುದು ಬೇಡವೆಂದು ತಿಳಿಸಿ ಮೃತದೇಹವನ್ನು ಮನೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಆಸ್ಪತ್ರೆಗಳ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ವೈದ್ಯರ ಬೇಜವಾಬ್ದಾರಿಯಿಂದ ಜನರ ಪ್ರಾಣವೇ ಹೋಗುತ್ತಿದೆ. ಸುಸ್ತು ಅಂತ ಆಸ್ಪತ್ರೆ ಸೇರಿದ ಮಹಿಳೆಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಸೂಕ್ತವಾದ ಚಿಕಿತ್ಸೆಯನ್ನು ನೀಡದೇ ತಪ್ಪಾದ ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣವನ್ನೇ ತೆಗೆದಿದ್ದಾರೆ. ಮಹಿಳೆ ಆಸ್ಪತ್ರೆಗೆ ದಾಖಲಾದಾಗ ವಿವಿಧ ಪರೀಕ್ಷೆಗಳನ್ನು ಮಾಡಿದ ಆಸ್ಪತ್ರೆ ಸಿಬ್ಬಂದಿ ಪ್ಲೇಟ್ಲೆಟ್ಸ್ ಕಡಿಮೆ ಇದೆ ಎಂದು ಚಿಕಿತ್ಸೆ ಆರಂಭಿಸಿದ್ದಾರೆ. ಈ ವೇಳೆ ರೋಗಿಗೆ ಐರನ್ ಇಂಜೆಕ್ಷನ್ ನೀಡಲಾಗಿದ್ದು ಅದನ್ನು ತಡೆದುಕೊಳ್ಳಲಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.

ನನಗೆ ಅವಕಾಶ ಕೊಟ್ರೆ ಸಾವರ್ಕರ್ ಫೋಟೋವನ್ನು ಇವತ್ತೇ ತೆಗೀತೀನಿ: ಪ್ರಿಯಾಂಕ ಖರ್ಗೆ

ಇನ್ನು ಮಹಿಳೆಗೆ ತಪ್ಪಾದ ಚಿಕಿತ್ಸೆ ನೀಡಿ ಸಾವನ್ನಪ್ಪಿದ ಕೂಡಲೇ ಬೆಳಗಾಗುತ್ತಿದಂತೆ ಆಸ್ಪತ್ರೆಯಲ್ಲಿ ಮಹಿಳೆಯ ಕುಟುಂಬಸ್ಥರಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ 'ಐ ಆಮ್ ಸಾರಿ.. ಅವರನ್ನು ಉಳಿಸಲಾಗಲಿಲ್ಲ' ಎಂದು ಹೇಳಿದ ವೈದ್ಯರು ಮೃತದೇಹವನ್ನ ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇನ್ನು ದೇಹವನ್ನ ಮನೆಗೆ ತಂದಾಗ ಮನೆಗೆ ಬಂದಿದ್ದ ಇತರೆ ಕುಟುಂಬಸ್ಥರ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಾಗ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಹೊರಗೆ ಬಂದಿದೆ. ಆಸ್ಪತ್ರೆಯವರ ಅವೈಜ್ಞಾನಿಕ ಚಿಕಿತ್ಸೆಯಿಂದ ಮಹಿಳೆ ಕಲ್ಪನಾ ಜೀವ ಹೋಗಿರುವುದು ಗೊತ್ತಾಗಿದೆ.

ಬೆಂಗಳೂರಿನ ಕಲ್ಯಾಣ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಅವಘಡ ಸಂಭವಿಸಿದೆ. ಆಸ್ಪತ್ರೆಯ ಟ್ರೈನಿಗಳು ನನ್ನ ಹೆಂಡ್ತಿಗೆ ಚಿಕಿತ್ಸೆ ಕೊಟ್ಟು ಸಾಯಿಸಿ ಬಿಟ್ರು ಎಂದು ಪತಿ ಗೋಳಾಡುತ್ತಿದ್ದಾರೆ. ಈ ವಿಷಯ ತಿಳಿದು ರೊಚ್ಚಿಗೆದ್ದ ಆಕೆಯ ಸಂಬಂಧಿಕರು, ಸದ್ಯ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ. ನಂತರ, ವೈದ್ಯೋ ನಾರಾಯಣೋ ಹರಿ ಎಂಬಂತೆ ನಂಬಿಕೊಂಡು ಆಸ್ಪತ್ರೆಗೆ ಹೋಗಿದ್ದಕ್ಕೆ ಗೃಹಿಣಿಯ ಪ್ರಾಣವನ್ನೇ ತೆಗೆದಿದ್ದಾರೆ ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ.

ಚಿನ್ನ, ಜಮೀನು, BMW ಕಾರು; ಪ್ರಿಯಕರನ ವರದಕ್ಷಿಣೆ ಬೇಡಿಕೆಗೆ ಮದ್ವೆ ರದ್ದು, ವೈದ್ಯೆ ಬದುಕು ಅಂತ್ಯ!

ಮಹಿಳೆಗೆ ಅವೈಜ್ಞಾನಿಕ ಚಿಕಿತ್ಸೆ ನೀಡಿ ಪ್ರಾಣ ತೆಗೆದ ಸಿಬ್ಬಂದಿ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸುವಂತೆ ಸೂಚಿಸಿದ್ದಾರೆ. ಹೀಗಾಗಿ, ಖಾಸಗಿ ಆಸ್ಪತ್ರೆ ಸಿಬ್ಬಂದಿ ಯಾವ ಚಿಕಿತ್ಸೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮನೆಗೆ ತಂದಿದ್ದ ಮಹಿಳೆಯ ಮೃತದೇಹವನ್ನು ಪುನಃ ಬೇರೊಂದು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸುವುದಕ್ಕೆ ಕೊಂಡೊಯ್ದಿದ್ದಾರೆ. ಇನ್ನು ಪೊಲೀಸರ ಕಣ್ಗಾವಲಿನಲ್ಲಿ ನಡೆಯುತ್ತಿದೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ಆಸ್ಪತ್ರೆ ಮಾನ್ಯತೆ ಅಥವಾ ವೈದ್ಯರ ಮಾನ್ಯತೆ ರದ್ದುಗೊಳಿಸುವ ಸಾಧ್ಯತೆಯಿದೆ.

Follow Us:
Download App:
  • android
  • ios