ಬೆಂಗಳೂರು [ನ.28] : ಕುಡಿದು ಕಾರು ಚಾಲನೆ ಮಾಡಿದ್ದಲ್ಲದೇ ಇದನ್ನ ಪ್ರಶ್ನೆ ಮಾಡಿದ ವ್ಯಕ್ತಿಗೆ ಪ್ರಸಿದ್ಧ ಆಂಗ್ಲ ದಿನಪತ್ರಿಕೆಯೊಂದರ ಪತ್ರಕರ್ತನೋರ್ವ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  
 
ಬೆಂಗಳೂರಿನ ಹಲಸೂರು ಕೆರೆ ಸರ್ಕಲ್ ಬಳಿಯಲ್ಲಿ ರಾಷ್ಟ್ರೀಯ ಪತ್ರಿಕೆ ಸಬ್ ಎಡಿಟರ್ ಆಗಿರುವ ವ್ಯಕ್ತಿಯು, ರವಿರಾಜ್ ಎಂಬ ಯುವಕನ ಬೈಕಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಗಲಾಟೆ ಮಾಡಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರವಿರಾಜ್ ಎದೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ. ಖಾಸಗಿ ಅಸ್ಪತ್ರೆಯಲ್ಲಿ ರವಿರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಘಟನೆ ಹಿನ್ನೆಲೆಯಲ್ಲಿ ಆಂಗ್ಲ ದಿನಪತ್ರಿಕೆಯ ಸಬ್ ಎಡಿಟರ್‌ನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ಬೆಂಗಳೂರಿನಲ್ಲಿ ಮದ್ಯ ನಿಷೇಧ : ಪೊಲೀಸ್ ಕಮಿಷನರ್ ಆದೇಶ...

ಬುಧವಾರ ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.