ಪ್ರೀತಿಸಿ ಮದುವೆಯಾದ ಕುಟುಂಬದಲ್ಲಿ ಗಂಡ ಸಾವು; ಮಗನನ್ನು ನೇಣು ಬಿಗಿದು, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!
ಬೆಂಗಳೂರಿನಲ್ಲಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಕುಟುಂಬದಲ್ಲಿ ಗಂಡ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ನಂತರ ಕುಟುಂಬ ನಿರ್ವಹಣೆ ಮಾಡಲಾಗದೇ ಪತ್ನಿ ಹಾಗೂ ಮಕ್ಕಳು ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ಜು.13): ಕಳೆದ ಕೆಲವು ವರ್ಷಗಳ ಹಿಂದೆ ಅಂತರಜಾತಿ ಪ್ರೇಮ ವಿವಾಹ ಮಾಡಿಕೊಂಡಿದ್ದ ದಂಪತಿ ದೊಡ್ಡ ಖಾಸಗಿ ಅಪಾರ್ಟ್‌ಮೆಂಟ್ ಒಂದರಲ್ಲಿ ಸುಖ ಸಂಸಾರ ನಡೆಸುತ್ತಿದ್ದರು. ಆದರೆ, ಕಳೆದ ತಿಂಗಳ ಹಿಂದೆ ಗಂಡ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಇದರಿಂದ ಆರ್ಥಿಕ ಪರಿಸ್ಥಿತಿ ನಿಭಾಯಿಸಲಾಗದೇ ತಾಯಿ ತನ್ನ ಮಗನನ್ನು ನೇಣು ಬಿಗಿದು ಕೊಲೆ ಮಾಡಿ, ಆತನ ಹೆಣವನ್ನು ಕೆಳಗಿಳಿಸಿ, ಪುನಃ ತಾನೂ ಅದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದ ಆರ್.ಎನ್.ಝೆಡ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಮೃತರನ್ನು ಪುಲಿವರ್ತ (13) ವರ್ಷ ಹಾಗೂ ರಮ್ಯಾಜಿ (40) ಎಂದು ಗುರುತಿಸಲಾಗಿದೆ. ಮನೆಯ ಫ್ಯಾನಿಗೆ ಸೀರೆಯನ್ನು ಬಿಗಿದು ಮೊದಲು 13 ವರ್ಷದ ಮಗನನ್ನು ನೇಣಿನ ಕುಣಿಕೆಗೆ ಹಾಕಿ ಕೊಲೆ ಮಾಡಿದ್ದಾಳೆ. ಮಗ ಸತ್ತ ನಂತರ ಆತನ ಹೆಣವನ್ನು ಕೆಳಗಿಳಿಸಿ, ನಂತರ ತಾನು ಅದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಜೀವ ಬಿಟ್ಟಿದ್ದಾಳೆ. ಈ ಘಟನೆಯ ಬಗ್ಗೆ ನೋಡುಗರು ಹಾಗೂ ಕೇಳುಗರಿಗೆ ಕರುಳು ಕಿವುಚುವಂತಹ ವಾತಾವರಣ ನಿರ್ಮಿಸಿದೆ.
ಅಪರ್ಣಾ ನಿಧನದ ಬೆನ್ನಲ್ಲಿಯೇ ಬೆಂಗಳೂರು ನಮ್ಮ ಮೆಟ್ರೋ ಮಾರ್ಗದಲ್ಲಿ ಹೊಸ ಮಹಿಳೆಯ ಧ್ವನಿ!
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ್ ಪುಲಿವರ್ತ ಹಾಗೂ ರಮ್ಯಾ ಪರಸ್ಪರ ಪ್ರೀತಿಸಿ 20 ವರ್ಷಗಳ ಹಿಂದೆ ಮನೆಯವರ ವಿರೋಧದ ನಡುವೆಯೂ ಅಂತರ್ಜಾತಿ ಮದುವೆ ಮಾಡಿಕೊಂಡಿದ್ದಾರೆ. ಇದಾದ ನಂತರ ಯಾರ ಮುಲಾಜಿಗೂ ಬಗ್ಗದೇ ಮನೆಯವರ ವಿರೋಧದ ನಡುವೆಯೂ ದುಡಿದು ಸುಂದರ ಸಂಸಾರ ಕಟ್ಟಿಕೊಂಡಿದ್ದಾರೆ. ಗಂಡನ ದುಡಿಮೆಯಿಂದ ಶ್ರೀಮಂತಿಕೆಯಿಂದ ಜೀವನ ಮಾಡುತ್ತಿದ್ದ ಕುಟುಂಬ ಯಲಹಂಕದ ಆರ್‌ಎನ್‌ಝಡ್ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲ್ಯಾಟ್ ಅನ್ನು ಬಾಡಿಗೆ ಪಡೆದು ವಾಸವಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ 19 ವರ್ಷದ ಮಗಳು ಕಾಲೇಜು ಓದುತ್ತಿದ್ದರಿಂದ ಕಾಲೇಜಿನ ಸಮೀಪದ ಪಿಜಿಯಲ್ಲಿ ಇದ್ದುಕೊಂಡು ಓದುತ್ತಿದ್ದಳು. ಇನ್ನು ಮನೆಯಲ್ಲಿ ರಮ್ಯಾ ಮತ್ತು ಆಕೆಯ 13 ವರ್ಷದ ಮಗ ಭಾರ್ಗವ್ ಪುಲಿವರ್ತ ವಾಸವಾಗಿದ್ದರು.
ಸುಂದರ ಸಂಸಾರಕ್ಕೆ ಕ್ಯಾನ್ಸರ್ ಎಂಬ ಮಹಾಮಾರಿ ವಕ್ಕರಿಸಿದೆ. ಸುಂದರ ಕುಟುಂಬದ ದುಡಿಯುವ ವ್ಯಕ್ತಿ ಶ್ರೀಧರ್ ಪುಲಿವರ್ತಿಗೆ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ. ತಮ್ಮ ಜೀವನದಲ್ಲಿ ದುಡಿದು ಉಳಿತಾಯ ಮಾಡಿದ ಹಣವನ್ನೆಲ್ಲಾ ಚಿಕಿತ್ಸೆಗೆ ವೆಚ್ಚ ಮಾಡಿದ್ದಾರೆ. ಆದರೂ, ಗಂಡ ಶ್ರೀಧರ್ ಬದುಕಲೇ ಇಲ್ಲ. ಶ್ರೀಧರ್ ಸಾವಿನಿಂದಾಗಿ ಇಡೀ ಕುಟುಂಬ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳ ಶಾಲೆ, ಕಾಲೇಜು ಹಾಗೂ ಪಿಜಿ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ ಲಕ್ಷ ಹಣ ಬೇಕಿತ್ತು. ಆದರೆ, ರಮ್ಯಾಳಿಗೆ ಹಣ ಹೊಂದಿಸೋದು ಸಾಧ್ಯವಾಗದೇ ಜೀವನ ನಡೆಸಲು ತೀವ್ರ ಸಮಸ್ಯೆ ಉಂಟಾಗಿದೆ. ಇದರ ಬೆನ್ನಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ್ದ ರಮ್ಯಾ ನಾವು ಕುಟುಂಬ ಸಮೇತವಾಗಿ ಸತ್ತು ಹೋಗುವುದೊಂದೇ ದಾರಿ ಎಂದು ಅಳಲು ತೋಡಿಕೊಂಡಿದ್ದರಂತೆ. ಈಗ ಅದೇ ರೀತಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.
ತೂಕ ಇಳಿಸಿಕೊಳ್ಳಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ; ಈಕೆ ದೇಹದಲ್ಲಿ ಹುಡುಕಿದರೂ ಪಾವ್ ಕೆಜಿ ಮಾಂಸವಿಲ್ಲ!
ಕಳೆದ ಜು.9ರಂದು ಪಿಜಿಯಲ್ಲಿರುವ 19 ವರ್ಷದ ಮಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಂತರ ರಮ್ಯಾ ಹಾಗೂ ಭಾರ್ಗವ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಾದ ನಾಲ್ಕು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಸಾಯುವ ಮುನ್ನ ಡೆತ್‌ನೋಟ್ ಬರೆದಿದ್ದು, ಪೊಲೀಸರು, ವೈದ್ಯರು ಹಾಗೂ ಮಗಳಿಗೆ ಕೆಲವೊಂದು ವಿಚಾರಗಳನ್ನು ಬರೆದಿಟ್ಟಿದ್ದಾರೆ. ಈ ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ನಂತರ, ಮೃತದೇಹಗಳು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.