ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ₹32.72 ಕೋಟಿ ಮೌಲ್ಯದ 10 ಎಕರೆ 0.37 ಗುಂಟೆ ಒತ್ತುವರಿ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲಾಗಿದೆ. ವಿವಿಧ ತಾಲ್ಲೂಕುಗಳಲ್ಲಿ ಗೋಮಾಳ, ಸ್ಮಶಾನ, ಕೆರೆ, ಕುಂಟೆ ಮುಂತಾದ ಒತ್ತುವರಿಗಳನ್ನು ತೆರವು ಕಾರ್ಯಾಚರಣೆ ಮೂಲಕ ತಹಶೀಲ್ದಾರ್‌ಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಮೇ 03):  ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ.32.72 ಕೋಟಿ ಅಂದಾಜು ಮೌಲ್ಯದ ಒಟ್ಟು 10 ಎಕರೆ 0.37 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.

ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಸ್ಮಶಾನ, ಕರೆ, ಚೌಳಕುಂಟೆ, ಗುಂಡುತೋಪು, ಕುಂಟೆ, ಸರ್ಕಾರಿ ಸ್ಮಶಾನ, ಸರ್ಕಾರಿ ಕೊರಕಲು ಮತ್ತು ಖರಾಬು ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು. ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಟ್ಟೊಗೊಲ್ಲಹಳ್ಳಿ ಗ್ರಾಮದ ಸ.ನಂ 48ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.31 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.15 ಕೋಟಿಗಳಾಗಿರುತ್ತದೆ. ವರ್ತೂರು ಹೋಬಳಿಯ ಕೈಕೊಂಡ್ರಹಳ್ಳಿ ಗ್ರಾಮದ ಸ.ನಂ: 7ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.01 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.10 ಕೋಟಿಗಳಾಗಿರುತ್ತದೆ.

ಆನೇಕಲ್ ತಾಲ್ಲೂಕಿನ ಕಸಬಾ-1 ಹೋಬಳಿಯ ಸಿಡಿಹೊಸಕೋಟೆ ಗ್ರಾಮದ ಸ.ನಂ. 38ರ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.15 ಕೋಟಿಗಳಾಗಿರುತ್ತದೆ. ಕಸಬಾ-2 ಹೋಬಳಿಯ ಬೆಸ್ತಮಾನಹಳ್ಳಿ ಗ್ರಾಮದ ಸ.ನಂ. 9ರ ಚೌಳಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.09 ಕೋಟಿಗಳಾಗಿರುತ್ತದೆ. ಜಿಗಣಿ-1 ಹೋಬಳಿಯ ಬುಕ್ಕಸಾಗರ ಗ್ರಾಮದ ಸ.ನಂ 11 ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.04 ಕೋಟಿಗಳಾಗಿರುತ್ತದೆ. 

  • ಜಿಗಣಿ-2 ಹೋಬಳಿಯ ಹುಲಿಮಂಗಲ ಗ್ರಾಮದ ಸ.ನಂ 156 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.06 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.15 ಕೋಟಿಗಳಾಗಿರುತ್ತದೆ. 
  • ಸರ್ಜಾಪುರ-1 ಹೋಬಳಿಯ ಕೂಗೂರು ಗ್ರಾಮದ ಸ.ನಂ 183ರ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.02ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.07ಕೋಟಿಗಳಾಗಿರುತ್ತದೆ. 
  • ಸರ್ಜಾಪುರ-2 ಹೋಬಳಿಯ ಮುತ್ತನಲ್ಲೂರು ಗ್ರಾಮದ ಸ.ನಂ 142ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.08 ಕೋಟಿಗಳಾಗಿರುತ್ತದೆ.
  • ಸರ್ಜಾಪುರ-3 ಹೋಬಳಿಯ ಕೊಮ್ಮಸಂದ್ರ ಗ್ರಾಮದ ಸ.ನಂ 25ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.25 ಕೋಟಿಗಳಾಗಿರುತ್ತದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದ ಸ.ನಂ 216ರ ಸರ್ಕಾರಿ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.02ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.10 ಕೋಟಿಗಳಾಗಿರುತ್ತದೆ. 
ತಾವರೆಕೆರೆ ಹೋಬಳಿಯ ದೊಡ್ಡೇರಿ ಗ್ರಾಮದ ಸ.ನಂ 29ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 1ಎಕರೆ 0.32 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 3.75 ಕೋಟಿಗಳಾಗಿರುತ್ತದೆ. 
ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 12ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.00 ಕೋಟಿಗಳಾಗಿರುತ್ತದೆ. 
ಕೆಂಗೇರಿ ಹೋಬಳಿಯ ಸೋಂಪುರ ಗ್ರಾಮದ ಸ.ನಂ 12ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.22 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 2.00 ಕೋಟಿಗಳಾಗಿರುತ್ತದೆ.

  • ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಮಲ್ಲಸಂದ್ರ ಗ್ರಾಮದ ಸ.ನಂ 52ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.07 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.35 ಕೋಟಿಗಳಾಗಿರುತ್ತದೆ. 
  • ದಾಸನಪುರ ಹೋಬಳಿಯ ಹಾರೋಕ್ಯಾತನಹಳ್ಳಿ ಗ್ರಾಮದ ಸ.ನಂ 34ರ ಸರ್ಕಾರಿ ಕೊರಕಲು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.28 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.80 ಕೋಟಿಗಳಾಗಿರುತ್ತದೆ. 
  • ದಾಸನಪುರ ಹೋಬಳಿಯ ಹಾರೋಕ್ಯಾತನಹಳ್ಳಿ ಗ್ರಾಮದ ಸ.ನಂ 42ರ ಸರ್ಕಾರಿ ಕೊರಕಲು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.09 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.50 ಕೋಟಿಗಳಾಗಿರುತ್ತದೆ. 
  • ದಾಸನಪುರ ಹೋಬಳಿಯ ಹಾರೋಕ್ಯಾತನಹಳ್ಳಿ ಗ್ರಾಮದ ಸ.ನಂ 44 ರ ಸರ್ಕಾರಿ ಕೊರಕಲು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.20 ಕೋಟಿಗಳಾಗಿರುತ್ತದೆ. 
  • ದಾಸನಪುರ ಹೋಬಳಿಯ ಹಾರೋಕ್ಯಾತನಹಳ್ಳಿ ಗ್ರಾಮದ ಸ.ನಂ 27 ಮತ್ತು 28ರ ನಂಬರು ಕಾಣದ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.19 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.50 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಹುಲ್ಲೇಗೌಡನಹಳ್ಳಿ ಗ್ರಾಮದ ಸ.ನಂ 182ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.16 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.90 ಕೋಟಿಗಳಾಗಿರುತ್ತದೆ.
  • ದಾಸನಪುರ ಹೋಬಳಿಯ ತೋರನಾಗಸಂದ್ರ ಗ್ರಾಮದ ಸ.ನಂ 38ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 1 ಎಕರೆ 0.37ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.54 ಕೋಟಿಗಳಾಗಿರುತ್ತದೆ.

ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಗ್ರಾಮದ ಸಂ.ನಂ 76ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 2 ಎಕರೆಗಳಾಗಿದ್ದು ಅಂದಾಜು ಮೌಲ್ಯ 14.00ಕೋಟಿಗಳಾಗಿರುತ್ತದೆ. ಜಾಲ ಹೋಬಳಿಯ ನೆಲ್ಲಕುಂಟೆ ಗ್ರಾಮದ ಸಂ.ನಂ 45ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.10ಗುಂಟೆಗಳಾಗಿದ್ದು ಅಂದಾಜು ಮೌಲ್ಯ 2.00ಕೋಟಿಗಳಾಗಿರುತ್ತದೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶೀಲ್ದಾರ್ ರವರು ಉಪಸ್ಥಿತರಿದ್ದರು.