ಹಾಸನ (ಸೆ.09):  ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಇಲ್ಲಿನ ಶೆಟ್ಟಿಹಳ್ಳಿ ಚಚ್‌ರ್‍ ಬಳಿಯ ಸೇತುವೆ ಮೇಲೆ ಬೆಂಗಳೂರಿನ ಮೂಲದ ವ್ಯಕ್ತಿಯ ಕಾರೊಂದು ನಿಲ್ಲಿಸಲಾಗಿದ್ದು, ಅದರ ಮಾಲೀಕ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಕೆ.ಎ.53 ಒ 3777 ನಂಬರಿನ ಕಾರು ಇದಾಗಿದೆ. ಕಾರಿನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಹರೀಶ್‌ ಎಂಬುವವರ ಡಿಎಲ್ ಪತ್ತೆಯಾಗಿದೆ. ಸೋಮವಾರದಿಂದ ಕಾರು ಸೇತುವೆ ಮೇಲೆ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಾರಿನ ಮಾಲೀಕ ನಾಪತ್ತೆಯಾಗಿದ್ದು, ಅವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದೆ. 

ಡ್ರಗ್ಸ್ ಮಾಫಿಯಾ: ಇಂದ್ರಾಣಿ ಮುಖರ್ಜಿ ಇರೋ ಮುಂಬೈ ಮಹಿಳಾ ಜೈಲಿಗೆ ನಟಿ ರಿಯಾ ಶಿಫ್ಟ್..!

ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅದೇ ರೀತಿ ಇದೀಗ ಕಾರೊಂದು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.