ಜೇಡರಹಳ್ಳಿ ಕೃಷ್ಣಪ್ಪನನ್ನು ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು; ನಕಲಿ ಭೂ ದಾಖಲೆ ಸೃಷ್ಟಿ ಆರೋಪ
ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಜೀವ ಬೆದರಿಕೆ ಹಾಕಿ ಭೂಮಿಯನ್ನು ಕಸಿದುಕೊಂಡು ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದಡಿ ಜೇಡರಹಳ್ಳಿ ಕೃಷ್ಣಪ್ಪನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರು (ಫೆ.06): ಬೆಂಗಳೂರಿನಲ್ಲಿ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಜೀವ ಬೆದರಿಕೆ ಹಾಕಿ ಭೂಮಿಯನ್ನು ಕಸಿದುಕೊಂಡು ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪದಡಿ ಜೇಡರಹಳ್ಳಿ ಕೃಷ್ಣಪ್ಪನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆಗಮಿಸಿ ಜೇಡರಹಳ್ಳಿ ಕೃಷ್ಣಪ್ಪನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಜೇಡರಹಳ್ಳಿ ಕೃಷ್ಣಪ್ಪ ವಿರುದ್ದ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ ಪ್ರಕರಣ ದಾಖಲಾಗಿತ್ತು. ಕೃಷ್ಣಪ್ಪ ಸೇರಿ ಒಟ್ಟು 8 ಜನರ ವಿರುದ್ಧ ಎಫ್ಐಆರ್ ದಾಖಲು ಆಗಿತ್ತು. ಶಂಕ್ರಪ್ಪ ಎಂಬಾತ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದನು. ಇವರ ದೂರನ್ನು ಆಧರಿಸಿ 506, 341, 34, 504, 406, 420, 465, 468, 471, 323 ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು.
ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!
ಬೆಂಗಳೂರು ಉತ್ತರ ತಾಲೂಕಿನ ಹೇರೋಹಳ್ಳಿ ಗ್ರಾಮದಲ್ಲಿ ಶಂಕ್ರಪ್ಪ ಒಟ್ಟು 16 ಎಕರೆ 37 ಗುಂಟೆ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದನು. ತಮ್ಮ ತಂದೆಯಿಂದ ಬಂದಿದ್ದ ಆಸ್ತಿಯನ್ನು ಶಂಕರಪ್ಪ ಇತ್ತೀಚೆಗೆ ಅಭಿವೃದ್ಧಿ ಮಾಡಲು ಮುಂದಾಗಿದ್ದನು. ತಮಗೆ ಸೇರಿದ 17 ಎಕರೆ ಜಮೀನಿನಲ್ಲಿ 4 ಎಕರೆ 13 ಗುಂಟೆ ಜಾಗವನ್ನು ಅಭಿವೃದ್ಧಿ ಮಾಡಿ ಲೇಔಟ್ ನಿರ್ಮಿಸಿ, ನಿವೇಶನ ಮಾಡುವುದಕ್ಕೆ ಮುಂದಾಗಿದ್ದನು. ಈ ನಡುವೆ ಅಲ್ಲಿಗೆ ಬಂದಿದ್ದ ಕೃಷ್ಣಮೂರ್ತಿ, ಗೋವಿಂದರಾಜು ಹಾಗೂ ಇತರರಿಂದ ಜೀವ ಬೆದರಿಕೆ ಹಾಕಲಾಗಿದೆ ಎಂದು ಜಮೀನು ಮಾಲೀಕ ಶಂಕ್ರಪ್ಪ ಆರೋಪ ಮಾಡಿದ್ದಾರೆ.
ಬಡ ಜನರಿಗೆ ಕೇಂದ್ರದ ಬಂಪರ್ ಕೊಡುಗೆ: ಭಾರತ್ ಬ್ರಾಂಡ್ ಅಕ್ಕಿ ಕೆಜಿಗೆ 29ರೂ. ತೊಗರಿಬೇಳೆ 60ರೂ.ಗೆ ಮಾರಾಟ!
ಶಂಕ್ರಪ್ಪನ ಜಮೀನಿಗೆ ಬಂದ ಇವರು, ಈ ಜಮೀನು ನಮ್ಮ ಹೆಸರಿನಲ್ಲಿದೆ. ನೀನು ಅಭಿವೃದ್ಧಿ ಕೆಲಸ ನಿಲ್ಲಿಸಿ, ಈಗಲೇ ಈ ಜಾಗದಿಂದಲ ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾರಂತೆ. ಇದರಿಂದ ಭಯಭೀತರಾಗಿರೋ ಶಂಕ್ರಪ್ಪರಿಂದ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಜೇಡರಹಳ್ಳಿ ಕೃಷ್ಣಪ್ಪನನ್ನ ಬಂಧಿಸಿದ ಬ್ಯಾಡರಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.