ಬೆಂಗಳೂರಿನ ಹೊರ ವಲಯದಲ್ಲಿ ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪ್ರವೇಶ ಶುಲ್ಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. 

ಬೆಂಗಳೂರು [ಡಿ.02]: ಬೆಂಗಳೂರಿನ ಪ್ರಸಿದ್ಧ ಉದ್ಯಾನವನ ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಪ್ರವೇಶ ಶಿಲ್ಕವನ್ನು ಏರಿಕೆ ಮಾಡಲಾಗಿದೆ. ನೂತನ ದರ ಜಾರಿ ಮಾಡಲಾಗಿದೆ. ನಗರದ ಹೊರ ವಲಯದ ಜೈವಿಕ ಉದ್ಯಾನದ ಟಿಕೆಟ್‌ ದರ ಪರಿಷ್ಕರಣೆಯನ್ನು ಬುಧವಾರದಿಂದ ಜಾರಿ ಮಾಡಲಾಗಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ನಿರ್ಣಯದಂತೆ 2020ರ ಜ.1ರಿಂದ ಹೊಸ ಪ್ರವೇಶ ಶುಲ್ಕವು ಜಾರಿ ಮಾಡಲಾಗುತ್ತಿದೆ ಎಂದು ಬನ್ನೇರುಘಟ್ಟಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೂತನ ದರದ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ಇದೆ. 

ಪಾರ್ಕ್ ಹಳೆಯ ದರ ಪರಿಷ್ಕೃತ ದರ

ಮೃಗಾಲಯ 80 -100 ರು.

ಚಿಟ್ಟೆಪಾರ್ಕ್ 30 - 50 ರು.

ಸಫಾರಿ ಮತ್ತು ಮೃಗಾಲಯ(ಸೋಮವಾರ- ಶುಕ್ರವಾರ) 260 300

ಸಫಾರಿ ಮತ್ತು ಮೃಗಾಲಯ (ಶನಿವಾರ- ಭಾನುವಾರ) 280 - 350