ಸ್ಥಗಿತಗೊಂಡಿದ್ದ ಎಲ್ಲಾ ರೈಲು ಸಂಚಾರ ಪುನರಾರಂಭ ಕ್ರಮ

  • ಎರಡು ವರ್ಷಗಳಿಂದ ಕಾಡಿದ್ದ ಕೊರೊನಾ ಲಾಕ್‌ಡೌನ್‌ದಿಂದ ನಿಲ್ಲಿಸಲಾಗಿದ್ದ ಬಂಗಾರಪೇಟೆ- ಬೆಂಗಳೂರು ಮಾರ್ಗದ ರೈಲು
  • ಬಂಗಾರಪೇಟೆ- ಬೆಂಗಳೂರು ಮಾರ್ಗದಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಎಲ್ಲ ರೈಲು ಗಾಡಿಗಳ ಸಂಚಾರ ಪುನರಾರಂಭಿಸಲು ಕ್ರಮ 
Bengaluru Bangarapete Train will Resume Soon Says MP Muniswamy snr

 ಬಂಗಾರಪೇಟೆ (ನ.08):  ಎರಡು ವರ್ಷಗಳಿಂದ ಕಾಡಿದ್ದ ಕೊರೋನಾ (Corona) ಲಾಕ್‌ಡೌನ್‌ದಿಂದ (Lockdown) ನಿಲ್ಲಿಸಲಾಗಿದ್ದ ಬಂಗಾರಪೇಟೆ- ಬೆಂಗಳೂರು (Bangarapete - Bengaluru) ಮಾರ್ಗದಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ಎಲ್ಲ ರೈಲು (Train) ಗಾಡಿಗಳ ಸಂಚಾರ ಪುನರಾರಂಭಿಸಲು ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ಈ ಮಾರ್ಗದಲ್ಲಿ ಪ್ರತಿನಿತ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ (S Muniswamy) ಹೇಳಿದರು.

ಪಟ್ಟಣದ ರೈಲ್ವೆ ಇಲಾಖೆಯ ವಿಶ್ರಾಂತಿ ಕೊಠಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನ. 15 ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ (Session) ನಡೆಯಲಿದೆ. ದೇಶದಲ್ಲಿ ಕೊರೋನಾ (Corona) ಮಹಾಮಾರಿ ಆವರಿಸಿದ್ದರಿಂದ ಎರಡು ವರ್ಷಗಳ ಕಾಲ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದರಿಂದ ಹಾಗೂ ದೇಶದಲ್ಲಿ ಲಾಕ್‌ಡೌನ್‌ (Lockdown) ಮಾಡಲಾಗಿದ್ದ ಸಂದರ್ಭದಲ್ಲಿ ಪ್ರತಿನಿತ್ಯಓಡಾಡುತ್ತಿದ್ದ ರೈಲುಗಾಡಿಗಳನ್ನು ನಿಲ್ಲಿಸಲಾಗಿತ್ತು. ಈಗ ಎಲ್ಲ ರೈಲುಗಾಡಿಗಳನ್ನು ಓಡಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಅಂಡರ್‌ಪಾಸ್‌ ಸಮಸ್ಯೆಗೆ ಪರಿಹಾರ :  ಕೋಲಾರ (Kolar) ಲೋಕಸಭಾ (Loksabha) ಕ್ಷೇತ್ರದ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯಿಂದ ಈಗಾಗಲೇ ನಿರ್ಮಾಣ ಮಾಡಿರುವ ರೈಲ್ವೆ ಅಂಡರ್‌ ಪಾಸ್‌ಗಳಲ್ಲಿ ಮಳೆ ನೀರು ಬಂದಲ್ಲಿ ನೀರು ತುಂಬಿ ಕುಂಟೆಗಳಾಗಿ ನಿರ್ಮಾಣ ಆಗುತ್ತಿರುವುದರಿಂದ ಜನಸಾಮಾನ್ಯರಿಗೆ ಓಡಾಡಲು ತೀವ್ರ ಕಷ್ಠಕರವಾಗಿರುವ ಬಗ್ಗೆ ಸಾರ್ವಜನಿಕವಾಗಿ ದೂರುಗಳು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಈಗಾಗಲೇ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಐದಾರು ತಿಂಗಳಲ್ಲಿ ಎಲ್ಲಾ ಅಂಡರ್‌ ಪಾಸ್‌ಗಳಲ್ಲಿ ಸಮಸ್ಯೆ ಬಗಹರಿಸಲಾಗುವುದು ಎಂದರು.

ಮುಖ್ಯ ರೈಲ್ವೆ ಎಂಜಿನಿಯರ್‌ (Engineer) ವಿಜಯ ಕುಮಾರ್‌ ಮೌರ‍್ಯ, ಉಪ ರೈಲ್ವೆ ಎಂಜಿನಿಯರ್‌ ಭರತ್‌ ತಿವಾರಿ, ಡಿವಿಷನಲ್‌ ರೈಲ್ವೆ ಮ್ಯಾನೇಜರ್‌ ಕೃಷ್ಣಾರೆಡ್ಡಿ, ಮಂದೀಪ್‌ ಸಿಂಗ್‌, ಬಂಗಾರಪೇಟೆ ಜಂಕ್ಷನ್‌ ಉಪ ಡಿವಿಷನಲ್‌ ಇಂಜಿನಿಯರ್‌ ರವೀಂದ್ರ, ತಹಸೀಲ್ದಾರ್‌ ಎಂ.ದಯಾನಂದ್‌, ಇನ್ಸ್‌ಪೆಕ್ಟರ್‌ ಬಿ.ಸುನೀಲ್‌ ಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಯಶವಂತ್‌, ಕಂದಾಯ ನಿರೀಕ್ಷಕ ಅಜಯ ಕುಮಾರ್‌, ಗ್ರಾಮ ಲೆಕ್ಕಿಗ ಪವನ್‌ ಮುಂತಾದವರು ಹಾಜರಿದ್ದರು.

ರೈಲ್ವೆ ಪ್ಯಾಕೇಜ್ : ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪರೇಷನ್(IRCTC) ಇತ್ತೀಚೆಗೆ ಪ್ರವಾಸಿಗರಿಗೆ ಜಮ್ಮು ಕತ್ರಾ, ವೈಷ್ಣೋ ದೇವಿ(Vaishno Devi) ಪ್ರವಾಸ ಪ್ಯಾಕೇಜ್ ಲಾಂಚ್ ಮಾಡಿದೆ. IRCTC ದೇಶಾದ್ಯಂತ ಇರುವ ಪ್ರೇಕ್ಷಣೀಯ ಹಾಗೂ ತೀರ್ಥಯಾತ್ರಾ ಸ್ಥಳಗಳಿಗೆ ಆಕರ್ಷಕ ಪ್ರಯಾಣ ಪ್ಯಾಕೆಜ್‌ಗಳನ್ನು ಘೋಷಿಸುತ್ತದೆ. ಇಂಡಿಯನ್ ರೈಲ್ವೇ ಸಬ್ಸಿಡಿಯಡಿ ಈಗ ಮಾತಾ ವೈಷ್ಣೋ ದೇವಿ ಮಂದಿರಕ್ಕೆ ಪ್ಯಾಕೇಜ್ ಕೂಡಾ ಸೇರಿದೆ.

ಐಆರ್‌ಸಿಟಿಸಿ ಮಾತಾ ವೈಷ್ಣೋ ಪ್ಯಾಕೇಜ್‌ನಲ್ಲಿ, ಪ್ರವಾಸಿಗರು ವೈಷ್ಣೋ ದೇವಿಯ ಜನಪ್ರಿಯ ದೇಗುಲಕ್ಕೆ ಪ್ರಯಾಣಿಸಬಹುದು. ದೇಗುಲದ ಬೋರ್ಡ್ ಜಮ್ಮುವಿನ ಕತ್ರಾದಿಂದ ಸುಮಾರು 12 ಕಿಮೀ ದೂರದಲ್ಲಿದೆ.

IRCTC ವೈಷ್ಣೋ ದೇವಿ ಪ್ಯಾಕೇಜ್ ಬೆಲೆ

ಪವಿತ್ರ ಮಾತಾ ವೈಷ್ಣೋವನ್ನು ಭೇಟಿ ಮಾಡಲು ಯೋಜಿಸುವ ಪ್ರವಾಸಿಗರು ಅದರ ಅಧಿಕೃತ ವೆಬ್‌ಸೈಟ್‌ನಿಂದ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಪ್ಯಾಕೇಜ್ ಪ್ರತಿ ವ್ಯಕ್ತಿಗೆ 5,795 ರೂ. ಐಆರ್‌ಸಿಟಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ವೈಷ್ಣೋ ದೇವಿ ಪ್ಯಾಕೇಜ್ ಅನ್ನು ಘೋಷಿಸಿದೆ.

ವೈಷ್ಣೋ ದೇವಿ ಪ್ಯಾಕೇಜ್ ಪ್ರವಾಸ

ಪ್ರವಾಸದ ಮೊದಲ ದಿನ, ಪ್ರಯಾಣಿಕರು ಹೊಸದಿಲ್ಲಿಯ ರೈಲ್ವೇ ನಿಲ್ದಾಣಕ್ಕೆ ಆಗಮಿಸಬೇಕಾಗುತ್ತದೆ. ಇದು ಧಾರ್ಮಿಕ ಪ್ರವಾಸದ ಆರಂಭದ ಹಂತವಾಗಿದೆ. ದೆಹಲಿಯಿಂದ ಪ್ರಯಾಣಿಕರು ಎಸಿ 3 ಹಂತದ ರೈಲು ಮೂಲಕ ಜಮ್ಮುವಿಗೆ ಪ್ರಯಾಣಿಸುತ್ತಾರೆ.

ಎರಡನೇ ದಿನ, ಪ್ರವಾಸಿಗರನ್ನು ಜಮ್ಮು ನಿಲ್ದಾಣದಿಂದ ಕತ್ರಾಗೆ ಎಸಿ ರಹಿತ ವಾಹನದ ಮೂಲಕ ಕರೆದೊಯ್ಯಲಾಗುತ್ತದೆ. ವಾಹನದಲ್ಲಿರುವ ಒಟ್ಟು ಪ್ರಯಾಣಿಕರ ಸಂಖ್ಯೆ ಸಂಪೂರ್ಣವಾಗಿ ಗುಂಪಿನ ಗಾತ್ರವನ್ನು ಅವಲಂಬಿಸಿರುತ್ತದೆ.

ವೈಷ್ಣೋದೇವಿ ದರ್ಶನಕ್ಕೆ 2200 ಕಿಮೀ ಸೈಕಲ್ ಸವಾರಿ ಮಾಡಿದ 82 ರ ವೃದ್ದೆ..!

ಕತ್ರಾಕ್ಕೆ ಬಂದ ನಂತರ, ಪ್ರಯಾಣಿಕರು ಮಾತಾ ವೈಷ್ಣೋ ದೇವಿ ಯಾತ್ರೆಯ ನೋಂದಣಿ ಚೀಟಿಯನ್ನು ಸಂಗ್ರಹಿಸಲು ಸರಸ್ವತಿ ಧಾಮದಲ್ಲಿ ನಿಲ್ಲುತ್ತಾರೆ. ಅಲ್ಲಿಂದ ಅವರನ್ನು ಹೋಟೆಲ್‌ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅವರು ಉಪಹಾರವನ್ನು ಪಡೆಯುತ್ತಾರೆ.

ಅಂತಿಮವಾಗಿ, ಮೂರನೇ ದಿನ, ಪ್ರಯಾಣಿಕರು ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳಲಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಪ್ರಯಾಣಿಕರನ್ನು ರಾತ್ರಿ ತಂಗಲು ಹೋಟೆಲ್‌ಗೆ ಹಿಂತಿರುಗಿ ಕರೆತರಲಾಗುತ್ತದೆ. ಮರುದಿನ, ಪ್ರಯಾಣಿಕರನ್ನು ಜಮ್ಮು ರೈಲು ನಿಲ್ದಾಣಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿಂದ ಅವರು ರೈಲಿನಲ್ಲಿ ನವದೆಹಲಿಗೆ ತೆರಳುತ್ತಾರೆ.

Latest Videos
Follow Us:
Download App:
  • android
  • ios