ಈ ಬಾರಿಯ ಪ್ರೇಮಿಗಳ ದಿನದ ಪ್ರಯುಕ್ತ ಗುಲಾಬಿಗೆ ಜಾಗತಿಕವಾಗಿ ಉತ್ತಮ ಬೇಡಿಕೆ ವ್ಯಕ್ತವಾದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಿಂದ ಗುಲಾಬಿ ರಫ್ತಿನಲ್ಲಿ ದಾಖಲೆ ನಿರ್ಮಿಸಲಾಗಿದೆ. 

ಬೆಂಗಳೂರು (ಫೆ.17): ಈ ಬಾರಿಯ ಪ್ರೇಮಿಗಳ ದಿನದ ಪ್ರಯುಕ್ತ ಗುಲಾಬಿಗೆ ಜಾಗತಿಕವಾಗಿ ಉತ್ತಮ ಬೇಡಿಕೆ ವ್ಯಕ್ತವಾದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಿಂದ ಗುಲಾಬಿ ರಫ್ತಿನಲ್ಲಿ ದಾಖಲೆ ನಿರ್ಮಿಸಲಾಗಿದೆ. ಈ ಪ್ರೇಮಿಗಳ ದಿನದ ಋತುಮಾನದಲ್ಲಿ 22 ಅಂತಾರಾಷ್ಟ್ರೀಯ ಮತ್ತು 38 ದೇಶೀಯ ತಾಣಗಳಿಗೆ ಒಟ್ಟು 1,649 ಮೆಟ್ರಿಕ್ ಟನ್ (ಎಂಟಿ) ತೂಕದ 44 ಮಿಲಿಯನ್ ಗುಲಾಬಿಗಳನ್ನು ಸಾಗಣೆ ಮಾಡಲಾಗಿದೆ. ಈ ಮೂಲಕ ಗುಲಾಬಿ ಸಂಸ್ಕರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 50ರಷ್ಟು ಹೆಚ್ಚಳ ಸೂಚಿಸಿದೆ. 

ಅಷ್ಟೆಅಲ್ಲದೆ, ಸತತ ನಾಲ್ಕನೇ ವರ್ಷವೂ ಪೆರಿಷಬಲ್‌ ರಫ್ತಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ದೇಶದಲ್ಲೇ ಮೊದಲ ವಿಮಾನ ನಿಲ್ದಾಣವಾಗಿ ತನ್ನ ಸ್ಥಾವನ್ನು ಭದ್ರಪಡಿಸಿಕೊಂಡಿದೆ. ಬಿಎಲ್‌ಆರ್ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಪುನರುಚ್ಚರಿಸುತ್ತದೆ. ಅಂತಾರಾಷ್ಟ್ರೀಯ ಗುಲಾಬಿ ಸಾಗಣೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಲಾಗಿದೆ. ಪ್ರಮುಖವಾಗಿ ಸಿಂಗಾಪುರ, ಕೌಲಾಲಂಪುರ್, ಶಾರ್ಜಾ, ಕುವೈತ್, ಆಕ್ಲೆಂಡ್, ಅಮ್ಮನ್, ಮನಿಲಾ, ರಿಯಾದ್,ಕೊಲಂಬೊ, ಮತ್ತು ಅಬುಧಾಬಿ ಸೇರಿದಂತೆ ಪ್ರಮುಖ ತಾಣಗಳಿಗೆ ಶೇ.51ರಷ್ಟು ರಫ್ತಿನಲ್ಲಿ ಹೆಚ್ಚಳ ಕಂಡಿದ್ದು, ಎಸ್‌ಟಿಇಎಂ ಎಣಿಕೆಯಲ್ಲಿ ಶೇ.86ರಷ್ಟು ಏರಿಕೆಯಾಗಿದೆ.

ದೇಶೀಯವಾಗಿ 1,344 ಮೆಟ್ರಿಕ್‌ ಟನ್ ಗುಲಾಬಿಗಳನ್ನು ಸಾಗಿಸಲಾಗಿದ್ದು, ಶೇ.32ರಷ್ಟು ಹೆಚ್ಚಳ ಕಂಡಿದೆ, ದೇಶಿಯವಾಗಿ ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಬಾಗ್‌ಡೋಗ್ರಾ, ಉದಯಪುರ, ಅಹಮದಾಬಾದ್, ಅಗರ್ತಲಾ, ಮತ್ತು ಚಂಡೀಗಡ್‌ ರಾಜ್ಯಗಳಿಗೆ ಹೆಚ್ಚಾಗಿ ರಫ್ತು ಮಾಡಲಾಗಿದೆ. ಈ ವರ್ಷ, ಬೆಂಗಳೂರು ವಿಮಾನ ನಿಲ್ದಾಣವು ಹೂವಿನ ಸಾಗಣೆಯಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಿದ್ದು, ಅಬುಧಾಬಿ, ಜೆಡ್ಡಾ, ಬೈರುತ್, ಟೋಕಿಯೊ, ಬಹ್ರೇನ್ ಮತ್ತು ದಮ್ಮಮ್‌ನಂತಹ ಹೊಸ ತಾಣಗಳನ್ನು ಸೇರ್ಪಡೆ ಮಾಡಿಕೊಂಡಿದೆ. 

ವಾಹನಗಳ ಸುಗಮ ಸಂಚಾರಕ್ಕೆ 450 ಕಿ.ಮೀ. ರಸ್ತೆ ವೈಟ್‌ಟಾಪಿಂಗ್‌: ಡಿ.ಕೆ.ಶಿವಕುಮಾರ್‌

ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ತಾಜಾತನ, ವೇಗ ಮತ್ತು ತಾಪಮಾನದ ನಿಖರತೆಯೊಂದಿಗೆ ಅತ್ಯಗತ್ಯ ರಿಯಲ್‌ ಟೈಮ್‌ ಟ್ರ್ಯಾಕಿಂಗ್ ಮತ್ತು ಸುಧಾರಿತ ಕೋಲ್ಡ್ ಚೈನ್ ತಂತ್ರಜ್ಞಾನವನ್ನು ಹೊಂದಿರುವ ಅತ್ಯಾಧುನಿಕ ಕೂಲ್‌ಪೋರ್ಟ್ ಸೌಲಭ್ಯವು ಪ್ರತಿ ಸಾಗಣೆಯನ್ನು ಕಾಪಾಡುತ್ತದೆ. ತಡೆರಹಿತ ಸಂಗ್ರಹಣೆ, ನಿರ್ವಹಣೆ ಮತ್ತು ಸಾರಿಗೆಗಾಗಿ ತಾಪಮಾನದ ಏರಿಳಿತಗಳನ್ನು ಪೂರ್ವಭಾವಿಯಾಗಿ ನಿರ್ವಹಿಸಲಾಗುತ್ತದೆ. ಬೆಂಗಳೂರು ವಿಮಾನ ನಿಲ್ದಾಣವು ಗುಲಾಬಿಯ ತಾಜಾತನದೊಂದಿಗೆ ಸಮಯವನ್ನು ಸರಿದೂಗಿಸಿಕೊಂಡು ಗರಿಷ್ಠ ತಾಪಮಾನದಲ್ಲಿಯೂ ಹೂವಿನ ತಾಜಾನಕ್ಕೆ ದಕ್ಕೆಯಾಗದಂತೆ ರಫ್ತು ಮಾಡಲಾಗುತ್ತಿದೆ. ಪ್ರತಿ ಪ್ರೇಮಿಗಳ ದಿನದಂದು ಪ್ರೀತಿಯ ಮನೋಭಾವವನ್ನು ಜಗತ್ತಿನಾದ್ಯಂತ ಹಂಚಲು, ಗುಲಾಬಿಯ ರಫ್ತನ್ನು ಜೋಪಾನವಾಗಿ ಮಾಡಲಾಗುತ್ತಿದೆ.