ಚಿಂಚೋಳಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಅನುಕೂಲ: ಸಚಿವ ಮುನೇನಕೊಪ್ಪ
ರಾಜ್ಯ ಸರ್ಕಾರ ಕಬ್ಬು ನುರಿಸುವುದಕ್ಕಾಗಿ 13 ಸಾವಿರ ಕೋಟಿ ರು.ಗಳಿಂದ 19,634 ಕೋಟಿ ರು. ಖರ್ಚು ಮಾಡುತ್ತಿದ್ದು, ಬಿಜೆಪಿ ಸರ್ಕಾರ ರೈತರ ಪರವಾಗಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಕ್ಕಾಗಿ 41 ಅರ್ಜಿಗಳು ಬಂದಿವೆ. ಕಬ್ಬಿನ ಬೆಳೆ ವಾಣಿಜ್ಯ ಬೆಳೆಯಾಗಿರುವುದರಿಂದ ಕಬ್ಬು ಬೆಳೆದ ರೈತರಿಗೆ ಯಾವುದೇ ನಷ್ಟ ಆಗುವುದಿಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಚಿಂಚೋಳಿ(ಜ.19): ದೇಶದಲ್ಲಿ ಮತ್ತು ರಾಜ್ಯದಲ್ಲಿಯೇ ಪ್ರಥಮವಾಗಿ ಚಿಂಚೋಳಿ ತಾಲೂಕಿನಲ್ಲಿ 4.23 ಲಕ್ಷ ಲೀಟರ್ ಇಥೆನಾಲ್ ಉತ್ಪಾದಿಸಲಾಗುತ್ತಿದೆ. ಇದೊಂದು ಅತ್ಯಂತ ದೊಡ್ಡ ಕಾರ್ಖಾನೆ ಆಗಿರುವುದರಿಂದ ಕಬ್ಬು ಬೆಳೆಯುವ ರೈತರಿಗೆ ತುಂಬಾ ಅನುಕೂಲವಾಗಲಿದೆ. ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಪ್ರಧಾನ ಮಂತ್ರಿಗಳು ನೆರವು ನೀಡಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಪಟ್ಟಣದ ಹೊರವಲಯದಲ್ಲಿ ಸಿದ್ದಸಿರಿ ಇಥೆನಾಲ್ ಹಾಗೂ ಪವರ್ ವಿಭಾಗ ವತಿಯಿಂದ ಕಬ್ಬು ನುರಿಸುವ ಪ್ರಾಯೋಗಿಕ ಹಂಗಾಮಿನ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಕಬ್ಬು ನುರಿಸುವುದಕ್ಕಾಗಿ 13 ಸಾವಿರ ಕೋಟಿ ರು.ಗಳಿಂದ 19,634 ಕೋಟಿ ರು. ಖರ್ಚು ಮಾಡುತ್ತಿದ್ದು, ಬಿಜೆಪಿ ಸರ್ಕಾರ ರೈತರ ಪರವಾಗಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಕ್ಕಾಗಿ 41 ಅರ್ಜಿಗಳು ಬಂದಿವೆ. ಕಬ್ಬಿನ ಬೆಳೆ ವಾಣಿಜ್ಯ ಬೆಳೆಯಾಗಿರುವುದರಿಂದ ಕಬ್ಬು ಬೆಳೆದ ರೈತರಿಗೆ ಯಾವುದೇ ನಷ್ಟ ಆಗುವುದಿಲ್ಲ. ಸಿದ್ಧಸಿರಿ ಸೌಹಾರ್ದ ಸಹಕಾರ ವತಿಯಿಂದ ನೇರವಾಗಿ ರೈತರ ಖಾತೆಗೆ ಹಣ ಜಮೆ ಆಗಲಿದೆ ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆಯುವುದಿಲ್ಲ. ಸಕ್ಕರೆ ಕಾರ್ಖಾನೆ ಪ್ರಾರಂಭದಿಂದಾಗಿ ರೈತರಿಗೆ ತುಂಬಾ ಅನುಕೂಲವಾಗಲಿದೆ. ಇಡೀ ದೇಶದಲ್ಲಿಯೇ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ ಎಂದರು.
RECORD: ವರ್ಲ್ಡ್ ರೆಕಾರ್ಡ್ ಸೇರಿದ ಪ್ರಧಾನಿ ಮೋದಿ ಹಕ್ಕು ಪತ್ರ ವಿತರಣೆ: ಸರ್ಕಾರಕ್ಕೆ ಪ್ರಮಾಣಪತ್ರ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭದಿಂದಾಗಿ ಹಿಂದುಳಿದ ಜನರ ಭವಿಷ್ಯ ಮುಂದಿನ ದಿನಗಳಲ್ಲಿ ಬದಲಾವಣೆ ಆಗಲಿದೆ. ನಮ್ಮ ಸಕ್ಕರೆ ಕಾರ್ಖಾನೆಯಲ್ಲಿ 5 ಸಾವಿರ ಟನ್ ಕಬ್ಬು ನುರಿಸಲಾಗುತ್ತಿದೆ. 1500 ಟನ್ ಮೆಕ್ಕೆಜೋಳ ಉಪಯೋಗ ಮಾಡಿಕೊಳ್ಳಲಾಗುತ್ತಿರುವುದರಿಂದ 4.23 ಲಕ್ಷ ಕೆಎಲ್‌ಪಿಡಿ ಇಥೆನಾಲ್, 30 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ, 10ಟನ್ ಸಿಎನ್‌ಜಿ ಉತ್ಪಾದನೆ ದೇಶದಲ್ಲಿಯೇ ಮೊದಲನೆದಾಗಿ ಇಥೆನಾಲ್ ಉತ್ಪಾದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 10 ಲಕ್ಷ ಲೀಟರ್ ಇಥೆನಾಲ್ ತಯಾರು ಮಾಡಲಾಗುವುದು ಎಂದರು.
ಇಥೆನಾಲ್ ಉತ್ಪಾದಿಸಲು ನಮ್ಮ ಸಹಕಾರ ಸಂಘದಿಂದ ಒಟ್ಟು 650 ಕೋಟಿ ರು. ಬಂಡವಾಳ ಹೂಡಿಕೆ ಮಾಡಲಾಗಿದೆ. ಕೇಂದ್ರ ಸಚಿವ ನಿತೀನ್ ಗಡ್ಕರಿ ಪ್ರೇರಣೆಯಿಂದ ದೊಡ್ಡ ಕಾರ್ಖಾನೆಯಾಗಿ ಮುಂದೆ ದೊಡ್ಡ ಅಭಿವೃದ್ಧಿ ಆಗಲಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉದ್ಘಾಟನೆಗೆ ಬರಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದರು.
ಸಂಸದ ಡಾ. ಉಮೇಶ ಜಾಧವ್, ಕೇಂದ್ರ ಸಚಿವ ಭಗವಂತ ಖುಬಾ, ಮಾಜಿ ಸಚಿವ ರೇವುನಾಯಕ, ಬಿ.ಜಿ. ಪಾಟೀಲ ಮಾತನಾಡಿದರು. ಡಾ.ಚೆನ್ನವೀರ ಶಿವಾಚಾರ್ಯರ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ರಾಮನಗೌಡ ಪಾಟೀಲ ಯತ್ನಾಳ, ಆದರ್ಶಗೌಡ ಪಾಟೀಲ ಯತ್ನಾಳ, ತೇಲ್ಕೂರ, ಬಿ.ಜಿ.ಪಾಟೀಲ, ಶಾಸಕ ಡಾ.ಅವಿನಾಶ ಜಾಧವ್, ಶೈಲಜಾ ಪಾಟೀಲ, ಜಗದೀಶ ಕ್ಷತ್ರಿ, ಸಂಗನಬಸಪ್ಪ ಸಜ್ಜನ ಸೇರಿ ಹಲವರಿದ್ದರು.