Asianet Suvarna News Asianet Suvarna News

ಬಿಡಿಎ ಸೈಟ್ ಖರೀದಿಸಿ ಮನೆ ಕಟ್ಟಿಲ್ವಾ?: ಹಾಗಿದ್ದರೆ ನಿಮಗಿನ್ನು 25% ದಂಡ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಖರೀದಿಸಿದ ಗ್ರಾಹಕರುಗಳಿಗೆ 3 ವರ್ಷದೊಳಗೆ ಮನೆ ಕಟ್ಟಿಕೊಳ್ಳದಿದ್ದರೆ ಶೇ.25ರಷ್ಟು ದಂಡ ಪಾವತಿಸಲೇಬೇಕಾದ ಸಿಲುಕಲಿದ್ದಾರೆ! 

Beneficiaries Of The Bda Plot Do Not Build The House Even After 3 Years Penalty Will Be Conducted gvd
Author
First Published Aug 19, 2024, 8:16 AM IST | Last Updated Aug 19, 2024, 8:16 AM IST

ಬೆಂಗಳೂರು (ಆ.19): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಖರೀದಿಸಿದ ಗ್ರಾಹಕರುಗಳಿಗೆ 3 ವರ್ಷದೊಳಗೆ ಮನೆ ಕಟ್ಟಿಕೊಳ್ಳದಿದ್ದರೆ ಶೇ.25ರಷ್ಟು ದಂಡ ಪಾವತಿಸಲೇಬೇಕಾದ ಸಿಲುಕಲಿದ್ದಾರೆ! ಸಂಕಷ್ಟಕ್ಕೆ ನಿಗದಿತ ಅವಧಿಯಲ್ಲಿ ಮನೆ ಕಟ್ಟಿಸಿಕೊಳ್ಳದವರಿಗೆ ದಂಡ ವಿಧಿಸುವ ನಿಯಮವಿದ್ದರೂ ಪಾಲನೆಯಾ ಗುತ್ತಿಲ್ಲ. ಸಾವಿರಾರು ನಿವೇಶನಗಳು ಖಾಲಿ ಬಿದ್ದಿರುವ ಹಿನ್ನೆಲೆಯಲ್ಲಿ ಬಿಡಿಎ ಈಗ ನಿಯಮ ವನ್ನು ಇನ್ನಷ್ಟು ಬಿಗಿಗೊಳಿಸಲು ಉದ್ದೇಶಿಸಿದೆ. ವಿವಿಧ ಬಡಾವಣೆಗಳಲ್ಲಿ ಬಿಡಿಎ ನಿವೇಶನ ಪಡೆದ ಗ್ರಾಹಕರು, ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಳ್ಳದೆ ನೂರಾರು ಎಕರೆಗಳಷ್ಟು ಜಾಗ ಖಾಲಿ ಬಿದ್ದಿದೆ. 

ಪ್ರಾಧಿಕಾರದ 64 ಬಡಾವಣೆಗಳಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ನಿವೇಶನಗಳಲ್ಲಿ ಮಾಲೀಕರು ಮನೆ ನಿರ್ಮಿಸಿಕೊಂಡಿಲ್ಲ. 20 ಸಾವಿರ ನಿವೇಶನಗಳ ಮಾಲೀಕತ್ವದ ವ್ಯಾಜ್ಯ ನಡೆಯುತ್ತಿದೆ. ಈ ಮೊದಲು ನಿವೇಶನ ಪಡೆದ 5 ವರ್ಷದೊಳಗೆ ಮನೆ ಕಟ್ಟಬೇಕು. ನಿಗದಿತ ಅವಧಿಯೊಳಗೆ ಮನೆ ಕಟ್ಟದಿದ್ದರೆ ಶೇ.10ರಷ್ಟು ದಂಡ ವಿಧಿಸಲಾ ಗುತ್ತಿತ್ತು. ಅದರಂತೆ 600 ಚದರ ಅಡಿ ವಿಸ್ತೀರ್ಣದ ನಿವೇಶನಕ್ಕೆ 5000 ರು.,4000 ಚದರ ಅಡಿ ಅಳತೆ ನಿವೇಶನಕ್ಕೆ 3.75 ಲಕ್ಷ ಹಾಗೂ 4000 ಚದರ ಅಡಿಗಿಂತ ಮೇಲ್ಪಟ್ಟ ನಿವೇಶನಗಳಿಗೆ 6 ಲಕ್ಷ ರು. ದಂಡದ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಈಗ ಈ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿರುವ ಬಿಡಿಎ 3 ವರ್ಷಕ್ಕೆ ಕಡಿತಗೊಳಿಸಲಿದೆ.

ಭಾರತದ ದೇಶಿ ಮಾವು ತಳಿಗಳ ಬೆಳೆದು ಭಾರತಕ್ಕೇ ಚೀನಾ ರಫ್ತು: ವಿಶ್ವ ಮಾರುಕಟ್ಟೆಯಲ್ಲಿ ಪ್ರಾಬಲ್ಯಕ್ಕೂ ಕುತ್ತು!

ನಿವೇಶನ ಪಡೆದ ಮೂರು ವರ್ಷದೊಳಗೆ ಮನೆ ಕಟ್ಟದಿದ್ದರೆ ಆಯಾ ಪ್ರದೇಶದ ಮಾರ್ಗಸೂಚಿ ದರದ ಅನ್ವಯ ಶೇ.25ರಷ್ಟು ದಂಡ ವಿಧಿಸಲು ತೀರ್ಮಾನಿಸ ಲಾಗುತ್ತಿದೆ. ಈ ಮೂಲಕ ಸಂಪನ್ಮೂಲಕ ಕ್ರೋಢಿಕರಣದ ಉದ್ದೇಶ ಪ್ರಾಧಿಕಾರದ್ದು ಎನ್ನಲಾಗಿದೆ. ಮನೆ ಕಟ್ಟದೇ ಸೈಟ್ ಮಾರಲು ಸಿದ್ಧತೆ: ಬೆಂಗಳೂರಿನಲ್ಲಿ ಬಡ ಮತ್ತು ಮಧ್ಯಮ ವರ್ಗದವರೂ ಕೂಡ ಒಂದು ಸೂರು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಬಿಡಿಎ ಬಡಾವಣೆ ಅಭಿ ವೃದ್ಧಿ ಪಡಿಸಿ, ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ಆದರೆ ಕೆಲವರು, ಹಣವನ್ನು ನಿವೇಶನಗಳ ಮೇಲೆ ಹೂಡಿಕೆ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ. ಈ ಕಾರಣಕ್ಕೆ ತಮ್ಮ ಪ್ರಭಾವ ಬಳಸಿ, ಕುಟುಂಬಸ್ಥರು, ಸಂಬಂ ಧಿಕರು, ಸ್ನೇಹಿ ತರ ಹೆಸರಿನಲ್ಲಿ ನಿವೇಶನಗಳನ್ನು ಪಡೆದುಕೊಳ್ಳುತ್ತಿದ್ದಾರೆ. 

ಈ ನಿವೇಶನಗಳಲ್ಲಿ ಮನೆಗಳನ್ನು ಕಟ್ಟದೆ, ಮಾರುಕಟ್ಟೆಯಲ್ಲಿ ನಿವೇಶನಗಳ ಬೆಲೆ ಏರಿಕೆ ಆಗುವವರೆಗೂ ಕಾಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಡಿಎಯಿಂದ ಖರೀದಿಸಿದ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು 5 ವರ್ಷ ನಿಗದಿಯಾಗಿದ್ದ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಿ 3 ವರ್ಷಕ್ಕೆ ಇಳಿಸಲು ಬಿಡಿಎ ನಿರ್ಧರಿಸಿದೆ. ಜೊತೆಗೆ ಖಾಲಿ ನಿವೇಶನಗಳು ಕಂಡ ಕೂಡಲೇ ತ್ಯಾಜ್ಯ ಸುರಿಯುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಗಿಡ-ಗಂಟಿ ಬೆಳೆದು ವಿಷಕಾರಿ ಹಾವು ಸೇರಿದಂತೆ ಜಯಗಳ ಅವಾಸಸ್ಥಾನವಾಗಿ ಪರಿವರ್ತನೆಯಾಗುತ್ತಿರುವ ಪ್ರಕರಣಗಳು ಅನೇಕ ಇವೆ. ಇದೆಲ್ಲವನ್ನು ತಡೆಯಲು ಮೂರು ವರ್ಷಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಒದ್ದರೆ ಬೀಳುವಂತಿದೆ ಬೆಂಗಳೂರಿನ ಫುಟ್‌ಬಾಲ್‌ ಸ್ಟೇಡಿಯಂ: ಭೂತದ ಬಂಗಲೆಯಂತೆ ಕಾಣುವ ಮೈದಾನ

10 ವರ್ಷಕ್ಕೆ ಮೊದಲೇ ಸೈಟ್ ಮಾರಬಹುದು: ಈ ಹಿಂದೆ ಬಿಡಿಎಯಿಂದ ನಿವೇಶನ ಖರೀದಿಸಿದ 10 ವರ್ಷಗಳ ವರಗೆ ನಿವೇಶನ ಮಾರಾಟಕ್ಕೆ ಅವಕಾಶ ಇರಲಿಲ್ಲ. ಈಗ ನಿಯಮ ಸಡಿಲಗೊಳಿಸಲಾಗಿದ್ದು, ಯಾವಾಗ ಬೇಕಾದರೂ ನಿವೇಶನ ಮಾರಾಟ ಮಾಡಬಹುದು. ಆದರೆ, ಮೂಲ ಫಲಾನುಭವಿಗಳಿಂದ ನಿವೇಶನ ಖರೀದಿ ಮಾಡುವವರು ಮಾರುಕಟ್ಟೆ ಮಾರ್ಗಸೂಚಿ ಅನ್ವಯ ಶೇ.25ರಷ್ಟು ದಂಡ ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios