ಗೃಹ ಜ್ಯೋತಿ ಯೋಜನೆಯಿಂದ ಫಲಾನುಭವಿಗಳು ವಂಚಿತ

ಅನೇಕ ಗ್ರಾಹಕರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿ ಸೌಲಭ್ಯ ದೊರಕುತ್ತಿಲ್ಲ. ಹೆಸ್ಕಾಂ ಇಲಾಖೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. 

Beneficiaries Deprived of Gruha Jyothi Yojana at Atnani in Belagavi grg

ಅಥಣಿ(ಆ.19):  ಹೆಸ್ಕಾಂ ಅಧಿಕಾರಿಗಳ ಎಡವಟ್ಟಿನಿಂದ ಗುತ್ತಿಗೆದಾರರ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಗ್ರಾಹಕರಿಗೆ ಸಿಗಬೇಕಾದ ವಿದ್ಯುತ್‌ ಸೌಲಭ್ಯ ದೊರಕದೆ ಇತ್ತೀಚಿಗೆ ಸರ್ಕಾರ ಜಾರಿಗೊಳಿಸಿದ ಗೃಹಜೋತಿ ಯೋಜನೆಯ ಲಾಭದಿಂದ ನೂರಾರು ಗ್ರಾಹಕರು ವಂಚಿತರಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗುತ್ತಿಗೆದಾರರು ಮತ್ತು ಗ್ರಾಹಕರು ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದರು.

ಈ ವೇಳೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಜಗದೀಶ ಅವಟಿ ಮಾತನಾಡಿ, ಕಳೆದ ಮೇ ತಿಂಗಳಿಂದ ಗುತ್ತಿಗೆದಾರರ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಹೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ರೋಷನ ಅವರ ಗಮನಕ್ಕೆ ತರದೇ ಇಲ್ಲಿನ ಅಧಿಕಾರಿಗಳು ಮಾಹಿತಿ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬೆಳಗಾವಿ ಪಾಲಿಕೆಯಲ್ಲಿ ಮತ್ತೆ ಎಂಇಎಸ್‌ ಖ್ಯಾತೆ: ಮರಾಠಿ ಭಾಷೆಯಲ್ಲೇ ಸಭೆ ನಡಾವಳಿ ಪತ್ರ ನೀಡುವಂತೆ ಮೊಂಡುತನ!

ಕಳೆದ 6 ತಿಂಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಇಂದು ನಾವು ಪ್ರತಿಭಟನೆಗೆ ಇಳಿಯಬೇಕಾಗಿದೆ. ಕೂಡಲೇ ಸ್ಥಗಿತಗೊಂಡ ಕಾಮಗಾರಿಗಳು ಆರಂಭವಾಗಬೇಕು. ಗ್ರಾಹಕರಿಗೆ ಒದಗಿಸಬೇಕಾದ ಲೈಟಿಂಗ್‌ ಶೀಘ್ರ ಸಂಪರ್ಕ, ತಾತ್ಕಾಲಿಕ ಸಂಪರ್ಕ, ವಾಣಿಜ್ಯ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ ವಿದ್ಯುತ್‌ ಸಂಪರ್ಕ ಕಾಮಗಾರಿಗಳಿಗೆ ಹೆಸ್ಕಾಂ ಇಲಾಖೆಯಿಂದ ಮೀಟರ್‌ಗಳನ್ನು ಅಳವಡಿಸಿ ಗ್ರಾಹಕರಿಗೆ ಬಿಲ್‌ ನೀಡುತ್ತಿಲ್ಲ. ಇದರಿಂದ ನೂರಾರು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಅನೇಕ ಗ್ರಾಹಕರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿ ಸೌಲಭ್ಯ ದೊರಕುತ್ತಿಲ್ಲ. ಹೆಸ್ಕಾಂ ಇಲಾಖೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಯತ್ನಾಳ್‌ ಹೇಳಿಕೆ ಬರಿ ಊಹಾಪೋಹ: ಸಂಸದ ಜೊಲ್ಲೆ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಜಿ.ಜೆ.ಅವಟಿ ಪ್ರತಿಭಟನಾ ಗುತ್ತಿಗೆದಾರರನ್ನು ಮತ್ತು ಗ್ರಾಹಕರ ಮನವೊಲಿಸುವ ಪ್ರಯತ್ನ ಮಾಡಿದರು. ಕಳೆದ ಕೆಲವು ತಿಂಗಳಿಂದ ಅನೇಕ ಫೈಲ್‌ಗಳು ಬಾಕಿ ಉಳಿದಿರುವುದು ನಿಜ. ನಾನು ಕೂಡ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಬರುವ ಒಂದು ವಾರದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದಾಗ ಪ್ರತಿಭಟನಾಕಾರರು ಒಂದು ವಾರದವರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.

ಈ ವೇಳೆ ವಿದ್ಯುತ್‌ ಗುತ್ತಿಗೆದಾರರ ಅಥಣಿ ತಾಲೂಕು ಅಧ್ಯಕ್ಷ ಜಗನ್ನಾಥ ಅವಟಿ, ಉಪಾಧ್ಯಕ್ಷ ಅನಿಲ ಒಡೆಯರ, ಭೀಮನಗೌಡ ಪಾಟೀಲ, ಅನಿಲ ಹವಾಲ್ದಾರ, ಕೃಷ್ಣ ಲಂಗೋಟಿ, ಶ್ರೀಶೈಲ ನಾಗರಾಳ ಇನೂ ಹಲವರು ಗುತ್ತಿಗೆದಾರರು ಮತ್ತು ಅನೇಕ ಗ್ರಾಹಕರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios