Bellary Utsav: ₹20 ಕೋಟಿಯ ಶ್ವಾನ ಪ್ರದರ್ಶನಕ್ಕೆ ವೇದಿಕೆಯಾಗ್ತಿರೋ ಬಳ್ಳಾರಿ ಉತ್ಸವ!
ಬಳ್ಳಾರಿ/ ವಿಜಯನಗರ ಜಿಲ್ಲೆ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಜನವರಿ 21 ಮತ್ತು 22ರಂದು ಬಳ್ಳಾರಿ ಉತ್ಸವ(Ballari) ಆಯೋಜನೆ ಮಾಡಲಾಗಿದೆ. ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉತ್ಸವದ ಭಾಗವಾಗಿ ನಡೆಯುತ್ತಿರೋ ಶ್ವಾನ ಪ್ರದರ್ಶನ(Dog show)ದಲ್ಲಿ 20ಕೋಟಿ ಬೆಲೆ ಬಾಳುವ ಶ್ವಾನವೊಂದನ್ನು ಪ್ರದರ್ಶನ ಮಾಡಲಾಗುತ್ತಿದೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಜ.19) : : ಒಂದು ಶ್ವಾನದ ಬೆಲೆ ಅಂದಾಜು ಎಷ್ಟಿರಬಹುದು..? ಐದು ಲಕ್ಷ, ಹತ್ತು ಲಕ್ಷ ಅಬ್ಬಬ್ಬ ಅಂದ್ರೆ ಇಪ್ಪತ್ತು ಲಕ್ಷ ರೂ. ಇರಬಹುದು. ಆದ್ರೆ ಈ ಬಾರಿ ಬಳ್ಳಾರಿ ಉತ್ಸವದ ಅಂಗವಾಗಿ ನಡೆಯಲಿರೋ ಶ್ವಾನ ಪ್ರದರ್ಶನದಲ್ಲಿ ಬರೋಬ್ಬರಿ ಇಪ್ಪತ್ತು ಕೋಟಿ ವೆಚ್ಚದ ಶ್ವಾನವೊಂದು ಪ್ರದರ್ಶನಗೊಳ್ಳುತ್ತಿದೆ.
ಹೌದು, ಬಳ್ಳಾರಿ/ ವಿಜಯನಗರ ಜಿಲ್ಲೆ ವಿಭಜನೆ ಬಳಿಕ ಇದೇ ಮೊದಲ ಬಾರಿಗೆ ಜನವರಿ 21 ಮತ್ತು 22ರಂದು ಬಳ್ಳಾರಿ ಉತ್ಸವ(Ballari) ಆಯೋಜನೆ ಮಾಡಲಾಗಿದೆ. ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉತ್ಸವದ ಭಾಗವಾಗಿ ನಡೆಯುತ್ತಿರೋ ಶ್ವಾನ ಪ್ರದರ್ಶನ(Dog show)ದಲ್ಲಿ 20ಕೋಟಿ ಬೆಲೆ ಬಾಳುವ ಶ್ವಾನವೊಂದನ್ನು ಪ್ರದರ್ಶನ ಮಾಡಲಾಗುತ್ತಿದೆ.
ಶಿವಮೊಗ್ಗದಲ್ಲಿ ತಯಾರಾದ 23 ಅಡಿ ಎತ್ತರದ ಅಪ್ಪು ಪ್ರತಿಮೆ ಬಳ್ಳಾರಿಯಲ್ಲಿ ಜ.21ರಂದು ಅನಾವರಣ
ಇದು ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಲಿದೆ ಎನ್ನಲಾಗ್ತಿದೆ. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22 ರಂದು ವಿವಿಧ ತಳಿಯ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ವಾಡ್ಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿನಿಂದ ಬರೋ ಈ ಶ್ವಾನವೇ ಕೇಂದ್ರ ಬಿಂದು.
ರಾಜ್ಯದಲ್ಲಿ ಅತ್ಯಂತ ದುಬಾರಿ ಬೆಲೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಾಗೂ ರಾಜ್ಯ ಸೇರಿ ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದಿರುವ ಬೆಂಗಳೂರಿನ ಸತೀಶ್ ಕೆಡಬಾಮ್ಸ್(Satish Kedabams) ಅವರ ಕಕೇಶಿಯಾ ಶೆಫರ್ಡ್(Caucasian Shepherd) ಎಂಬ ವಿಶೇಷ ತಳಿಯ ಶ್ವಾನದ ಬೆಲೆಯು ಬರೋಬ್ಬರಿ ರೂ.20 ಕೋಟಿಯಂತೆ.
ಸಿಂಹದಂತೆ ಕಾಣುವ ಅಪರೂಪದ ಈ ಶ್ವಾನದ ತೂಕ 100 ಕೆಜಿ ಇದೆ. ಎತ್ತರದಲ್ಲೂ 6 ಅಡಿ ಇದ್ದು, ಉಳಿದ ಸಾಮಾನ್ಯ ನಾಯಿಗಳಿಗಿಂತ ತುಂಬಾ ದೊಡ್ಡದಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಇದು ಬಳ್ಳಾರಿ ಉತ್ಸವದ ಮೆರಗನ್ನು ಹೆಚ್ಚಿಸಲು ಜ.22ರಂದು ನಡೆಯುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ.
ಎಲ್ಲಾ ತಳಿಯ ಶ್ವಾನ ಪ್ರದರ್ಶನ :
ಬಳ್ಳಾರಿ ಜಿಲ್ಲೆಯ ಜನರು ತಮ್ಮ ತಮ್ಮ ಶ್ವಾನಗಳನ್ನು ಪ್ರದರ್ಶಿಸಲು ಈಗಾಗಲೇ ನೋಂದಣಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಪರ್ಧೆಯಲ್ಲಿ ಶ್ವಾನಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಾತಿ ಶ್ವಾನಗಳಿಗೆ ಮಾತ್ರ ಅವಕಾಶವಿರುತ್ತದೆ.
ವಿಶ್ವದ ಅತೀ ದುಬಾರಿ ಶ್ವಾನ ಖರೀದಿಸಿದ ಬೆಂಗಳೂರಿನ ವ್ಯಕ್ತಿ: ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ
ಶ್ವಾನ ಪ್ರದರ್ಶನದಲ್ಲಿ ಭಾಗವಹಿಸುವ ಮಾಲೀಕರಿಗೆ ಸೂಚನೆಗಳು: ಶ್ವಾನ ಪ್ರದರ್ಶನಕ್ಕೆ ಬರುವ ಶ್ವಾನಗಳಿಗೆ ಸರಿಯಾದ ಬೆಲ್ಟ್ ಮತ್ತು ಚೈನ್‍ನ್ನು ತೊಡಿಸಿಕೊಂಡು ಬರಬೇಕು. ಶ್ವಾನದ ಉತ್ತಮ ಗುಣಗಳನ್ನು ನಿರ್ಣಾಯಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು. ಶ್ವಾನದ ಸಂಪೂರ್ಣ ಮಾಹಿತಿ ಮಾಲೀಕರು ತಿಳಿದಿರಬೇಕು. ಶ್ವಾನ ಪ್ರದರ್ಶನದ ದಿನಾಂಕದಂದು ಸ್ನಾನ ಮಾಡಿಸಬಾರದು. ಶ್ವಾನ ಪ್ರದರ್ಶನದಂದು ನಿರ್ಣಾಯಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ಶ್ವಾನದ ದೇಹದ ಅಂಗ ರಚನೆಯ ಜೊತೆಗೆ ಕೂದಲಿನ ಕಾಂತಿ, ಹಲ್ಲುಗಳನ್ನು, ಮೂಗು, ಕಿವಿಗಳನ್ನು ಪರೀಕ್ಷಿಸುವುದರಿಂದ ಅವುಗಳನ್ನು ಶುಚಿಯಾಗಿಟ್ಟಿರಬೇಕು. ಶ್ವಾನ ಪ್ರದರ್ಶನದಂದು ತುರ್ತು ಚಿಕಿತ್ಸೆಯ ಸೌಲಭ್ಯಗಳು ಲಭ್ಯವಿರುತ್ತದೆ ಎಂದು ಅಯೋಜಕರು ತಿಳಿದಿದ್ದಾರೆ.