Asianet Suvarna News Asianet Suvarna News

ಸಿಬಿಐ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ; ಗಾಲಿ ಜನಾರ್ದನ್ ರೆಡ್ಡಿ ಆರೋಪ

ಬಳ್ಳಾರಿ ಸಿಬಿಐ ಅಧಿಕಾರಿಗಳು ಕಿರುಕುಳು ನೀಡುತ್ತಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಸಿಬಿಐ  ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

Bellary CBI officers are harassing Gali Janardhan Reddy accused
Author
First Published Oct 3, 2022, 1:28 PM IST

ಬಳ್ಳಾರಿ (ಅ.3) : ಬಳ್ಳಾರಿ ಸಿಬಿಐ ಅಧಿಕಾರಿಗಳು ಕಿರುಕುಳು ನೀಡುತ್ತಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಸಿಬಿಐ  ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಜಂತಕಲ್ ಮೈನಿಂಗ್ ಪ್ರಕರಣ: ದಾಖಲೆಗಳ ಸಮೇತ ಎಸ್ಐಟಿ ಮುಂದೆ ಹಾಜರಾದ ಜನಾರ್ದನ್ ರೆಡ್ಡಿ

ಕನಕದುರ್ಗಮ್ಮ ದೇವಸ್ಥಾನ(Kanakadurgamma Temple) ದ ಭೇಟಿ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gali Janardan Reddy), "ಸಿಬಿಐ ಅಧಿಕಾರಿಗಳು ಒಂದು ತಪ್ಪು ಕೇಸ್‌ನ್ನು ನನ್ನ ಮೇಲೆ ಹಾಕಿದ್ದಾರೆ. ಹೀಗಾಗಿ ಕೇಸನಲ್ಲಿ ಸೋಲುವ ಭಯಕ್ಕೆ  ಕೇಸ್ ನಡೆಸೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆರೋಪಿಸಿದ್ದಾರೆ.

ಸುಪ್ರೀಂಕೊರ್ಟ್‌(Suprim Court)ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ದುರ್ಗಮ್ಮ ತಾಯಿಗೆ ಬೇಡಿಕೊಂಡಿದ್ದೇ \ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸೋದಾಗಿ ಬೇಡಿಕೊಂಡಿದ್ದೇ ಹೀಗಾಗಿ ಇಂದು ನಾನು ದೇವಸ್ಥಾನಕ್ಕೆ ಬಂದಿದ್ದೇನೆ. ಇಡೀ ದೇಶಕ್ಕೆ ಒಳ್ಳೆದಾಗಲೆಂದು ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ನನ್ನ ಮೇಲೆ ಕೇಸ್‌ ದಾಖಲಿಸಿ 13 ವರ್ಷಗಳು ಕಳೆದಿವೆ. ಆದರೆ ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ಸರಿಯಾಗಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ರೆಡ್ಡಿ,. ನಾನು ಬಳ್ಳಾರಿಯಲ್ಲಿ ನೆಲೆಸುವುದಕ್ಕೆ ಸಿಬಿಐ(CBI) ಅಧಿಕಾರಿಗಳು ಪದೇಪದೆ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡುತಿದ್ದಾರೆ. ಹೀಗಾಗಿ ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೊರ್ಟ್ ಗೆ ಕೇಳಿದ್ದೇನೆ. ಕೇಸ್ ಮೂರ್ನಾಲ್ಕು ತಿಂಗಳಲ್ಲೇ ಇತ್ಯರ್ಥ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಕೊನೆಯುಸಿರು ಇರೋವರೆಗೆ ಬಳ್ಳಾರಿಯಲ್ಲಿ ಇರಬೇಕು: ಕೇಸ್ ವಿಚಾರವಾಗಿ ಕಳೆದ ಹದಿನಾಲ್ಕು ವರ್ಷಗಳಿಂದ ಮನೆ, ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ನನಗೆ ಸುಪ್ರಿಂಕೊರ್ಟ್ ಸಂಪೂರ್ಣವಾಗಿ ಬಳ್ಳಾರಿಯಲ್ಲಿರಲು ಅನುಮತಿ‌ ಕೊಟ್ಟಿದೆ. ಹೀಗಾಗಿ ಕಳೆದ ಹದಿನಾಲ್ಕು ತಿಂಗಳಿಂದ ನಾನು ಬಳ್ಳಾರಿಯಲ್ಲೇ ಇದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಾನು ಬಳ್ಳಾರಿಯಲ್ಲಿರಬೇಕು. ಆದರೆ ಕೋರ್ಟ್ ನಲ್ಲಿ ವಾದ ಮಾಡುವ ಸಂದರ್ಭದಲ್ಲಿ ನಾನು ಇಲ್ಲಿರೋದನ್ನು ಸಿಬಿಐ ಅಧಿಕಾರಿಗಳು ಆಕ್ಷೇಪ ಮಾಡುವ ಮೂಲಕ ನನಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ. ಆದರೆ ನಮ್ಮ ಲಾಯರ್‌ಗಳು ವಾದ ಮಂಡಿಸಿ ರೆಡ್ಡಿ ಮಗಳಿಗೆ ಹೆರಿಗೆ ಆಗಿದೆ. ಈ ಸಂದರ್ಭದಲ್ಲಿ ಆಕ್ಷೇಪ ಮಾಡೋದು ತಪ್ಪು ಅಂತಾ ತಿಳಿಸಿ\ದರು.

ಕೇಸ್ ಮುಗಿಯುವರೆಗೆ ರೆಡ್ಡಿ ಬಳ್ಳಾರಿ(Ballari)ಯಲ್ಲಿ ಇರಬಾರದು ಎಂದು ಸಿಬಿಐ ಆಕ್ಷೇಪ ಮಾಡ್ತಾ ಇದ್ದಾರೆ. ಹದಿನಾಲ್ಕು ವರ್ಷಗಳಿಂದ ಸರಿಯಾಗಿ ಕೇಸ್ ನಡೆಯುತ್ತಿಲ್ಲ. ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ. ಆದರೆ ನ್ಯಾಯ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನನಗೆ ಗೆಲುವು ಇದೆ ಹೀಗಾಗಿ ನಾನು ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದು ಜನಾರ್ದನ್ ರೆಡ್ಡಿ ಕೇಸ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಆ ತಾಯಿ ಯಾವ ದಾರಿ ತೋರಿಸ್ತಾಳೋ ಹಾಗೇ ಮಾಡುವೆ:

ಬಳ್ಳಾರಿ ರಾಜಕಾರಣಕ್ಕೆ ಮತ್ತೆ ಕಂಬ್ಯಾಕ್ ವಿಚಾರ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಜನಾರ್ದನ್ ರೆಡ್ಡಿ,, ಮಗಳ ಮದುವೆ ಆಯ್ತು, ಇಬ್ಬರು ಮೊಮ್ಮಕಳಾದ್ರು, ಮಗ ಡಿಗ್ರಿ ಮುಗಿಸಿಕೊಂಡಿದ್ದಾನೆ. ಅವನಿಗೆ ಚಿತ್ರರಂಗದಲ್ಲಿ ಆಸಕ್ತಿ ಇದೆ, ಅದರಲ್ಲಿ ಬದುಕು ಕಂಡುಕೊಂಡಿದ್ದಾನೆ. ನನ್ನ ವಿಚಾರದಲ್ಲಿ ಹೇಳೋದಾದ್ರೆ ಆ ತಾಯಿ ದುರ್ಗಾ ಮಾತೆ ಒಳ್ಳೆ ದಾರಿ ತೋರಿಸ್ತಾಳೆ. ನನಗೆ ರಾಜಕೀಯ ಮಾಡಲು ಇಷ್ಟವಿಲ್ಲ. ಆ ತಾಯಿ ಯಾವ ದಾರಿ ತೋರಿಸ್ತಾಳೋ ಹಾಗೇ ಮಾಡುವೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ

ಸಾರ್ವಜನಿಕವಾಗಿ ನಾವು ಬದುಕಬೇಕಂದ್ರೆ ನಾವು ಎರಡು ಮಾರ್ಗದಲ್ಲಿ ಬದುಕಬೇಕು. ನಾನು ಕೋರ್ಟ್‌ನಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡಲ್ಲ. ಸದ್ಯಕ್ಕೆ ನಾನು ಬಳ್ಳಾರಿಯಲ್ಲೇ ಇದ್ದೇನೆ. ನಿಮಗೆ ಕಾಣಿಸ್ತಾ ಇಲ್ಲ. ಸಮಯ ಬಂದಾಗ ನಾನು ಹೊರಗಡೆ ಬರ್ತೇನೆ ಎಂದ ಜನಾರ್ದನ್ ರೆಡ್ಡಿ. ಮತ್ತೆ ರಾಜಕೀಯ ಬರುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ರಾ?

Follow Us:
Download App:
  • android
  • ios