ಬೆಳಗಾವಿ(ಜು. 15]  ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 50 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಬೆಳಗಾವಿ ಸಮೀಪದ ವಂಟಮೂರಿಯ ಸರ್ಕಾರಿ ಶಾಲೆಯಲ್ಲಿ ದುರ್ಘಟನೆ ನಡೆದ ವರದಿಯಾಗಿದೆ. ಆದರೆ ವೈದ್ಯಾಧಿಕಾರಿಗಳು ಮಕ್ಕಳು ಹಲ್ಲಿ ಬಿದ್ದ ಆಹಾರ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅಸ್ವಸ್ಥ ಮಕ್ಕಳು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 100 ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸಿದ ಬಳಿಕ ಪಕ್ಕದ ಪಾತ್ರೆಯಲ್ಲಿ ಸತ್ತ ಹಲ್ಲಿ ಕಂಡಿದೆ. ಇದಾದ ಕೆಲವೆ ಕ್ಷಣದಲ್ಲಿ 30 ಕ್ಕೂ ಹೆಚ್ಚು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಅಲ್ಲಿಂದ ನೇರವಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ!

ಮಕ್ಕಳು ಹಲ್ಲಿ ಬಿದ್ದ ವಿಷ ಬಿಸಿಯೂಟವನ್ನ ಮಾಡಿಲ್ಲ. ಪಕ್ಕದ ಪಾತ್ರೆಯಲ್ಲಿ ಹಲ್ಲಿ ಬಿದ್ದದ್ದನ್ನ ಗಮನಿಸಿ ವಾಂತಿ ಮಾಡಿಕೊಂಡಿದ್ದಾರೆ. ಮಕ್ಕಳ ಮನಸ್ಸಿನ ಮೇಲೆ ಮಾನಸಿಕ ಪರಿಣಾಮ ಬೀರಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ ಎಂದು ಬೆಳಗಾವಿ ಡಿ.ಎಚ್.ಓ ಮುನ್ನ್ಯಾಳ ತಿಳಿಸಿದ್ದಾರೆ.ಹೇಳಿಕೆ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ಆಹಾರವನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.