ಬೆಳಗಾವಿ ಮೂರು ರಾಜ್ಯಗಳ ಕೇಂದ್ರ ಸ್ಥಾನ: ಗೋವಾ ಸಿಎಂ ಸಾವಂತ

ಬೆಳಗಾವಿ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೇಂದ್ರ ಸ್ಥಾನವಾಗಿ ಹೊರಹೊಮ್ಮಿರುತ್ತದೆ. ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಮೂರು ರಾಜ್ಯಗಳು ಬೆಳಗಾವಿ ಲಾಭ ಪಡೆಯಬೇಕಿದೆ ಎಂದ ಪ್ರಮೋದ ಸಾವಂತ 

Belagavi is the Center Place of Three States Says Goa CM Pramod Sawant grg

ಬೆಳಗಾವಿ(ಅ.16):  ಬೆಳಗಾವಿ ನಗರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಈ ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು. ನಗರದ ಉದ್ಯಮಭಾಗದಲ್ಲಿರುವ ಚೇಂಬರ್‌ ಆಫ್‌ ಕಾಮರ್ಸ್‌ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳಗಾವಿ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೇಂದ್ರ ಸ್ಥಾನವಾಗಿ ಹೊರಹೊಮ್ಮಿರುತ್ತದೆ. ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಮೂರು ರಾಜ್ಯಗಳು ಬೆಳಗಾವಿ ಲಾಭ ಪಡೆಯಬೇಕಿದೆ ಎಂದರು.

ಗೋವಾ ಸಂಪರ್ಕಿಸುವ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ರಸ್ತೆಗಳು ಹದಗೆಟ್ಟುಹೋಗಿವೆ. ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು. ರಸ್ತೆಗಳು ಅಭಿವೃದ್ಧಿ ಆದರೆ ಮೂರು ರಾಜ್ಯಗಳ ಉದ್ಯಮ ವೃದ್ದಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ಗೋವಾ ಸಿಎಂ ಭೇಟಿ?: ಕಾಂಗ್ರೆಸ್‌ ಆರೋಪ

ಕಾರ್ಯಕ್ರಮದಲ್ಲಿ ನೂರಾರು ಉದ್ಯಮಿಗಳು, ಚೇಂಬರ್ಸ ಆಫ್‌ ಕಾಮರ್ಸ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಪಿಲೇಶ್ವರ ಮಂದಿರಕ್ಕೆ ಭೇಟಿ: 

ಗೋವಾ ಸಿಎಂ ಪ್ರಮೋದ ಸಾವಂತ ಅವರು ಬೆಳಗಾವಿಯ ಕಪಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಕಪಿಲನಾಥನ ದರ್ಶನ ಪಡೆದರು. ಇದೇ ವೇಳೆ ದೇವಸ್ಥಾನ ಟ್ರಸ್ಟ್‌ ವತಿಯಿಂದ ಸಾವಂತ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾವಂತ, ಗೋವಾ ಮತ್ತು ಬೆಳಗಾವಿ ಪ್ರಾಚೀನ ಕಾಲದಿಂದಲೂ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ. ಎರಡೂ ಸ್ಥಳಗಳಲ್ಲಿ ವ್ಯಾಪಾರ ಮತ್ತು ಉದ್ಯಮ ಸುಗಮವಾಗಿ ನಡೆಯಲು ಗೋವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಪೇಲೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಸುನೀಲ ಬಾಳೇಕುಂದ್ರಿ, ನಗರ ಸೇವಕ ರಾಜು ಭಾತ್ಕಾಂಡೆ, ಟ್ರಸ್ಟಿ ರಾಕೇಶ ಕಲಘಟಗಿ, ಅಭಿಜಿತ ಚವ್ಹಾಣ, ವಿವೇಕ ಪಾಟೀಲ, ಬಿಜೆಪಿ ನಾಯಕ ಕಿರಣ ಜಾಧವ ಮೊದಲಾದವರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios