Asianet Suvarna News Asianet Suvarna News

Belagavi: ಅರಣ್ಯ ಇಲಾಖೆ ಸಿಬ್ಬಂದಿ ಚಳ್ಳೆಹಣ್ಣು ತಿನಿಸುತ್ತಿರುವ ಚಾಣಾಕ್ಷ ಚಿರತೆ

ಬೆಳಗಾವಿಯಲ್ಲಿ 21 ದಿನ ಕಳೆದರೂ ಸಿಗದ ಚಿರತೆ, 22 ಶಾಲೆಗಳ ರಜೆ ಮುಂದುವರಿಕೆ. ರಾತ್ರಿ 10.22ಕ್ಕೆ ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಚಿತ್ರ ಸೆರೆ. ಮಧ್ಯಾಹ್ನ 3 ಗಂಟೆಗೆ ಪ್ರತ್ಯಕ್ಷವಾಗಿ ಮಿಂಚಂತೆ ಮರೆಯಾದ ಚಿರತೆ.

Belagavi forest department difficult to catch leopard gow
Author
Bengaluru, First Published Aug 25, 2022, 6:24 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಆ.25): ಕಳೆದ 21 ದಿನಗಳಿಂದ ಕುಂದಾನಗರಿ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ನಿನ್ನೆ ರಾತ್ರಿ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರದಂದು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣೆಯಾಗಿದ್ದ ಚಿರತೆ ಇಂದು ಮಧ್ಯಾಹ್ನ 3 ಗಂಟೆಗೆ ಪ್ರತ್ಯಕ್ಷವಾಗಿ ಮತ್ತೆ ಮರೆಯಾಗಿದೆ. ಕಳೆದ 21 ದಿನಗಳಿಂದ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಅರಣ್ಯ ಇಲಾಖೆ ಅಧಿಕಾದುರೇ ಬೆಳಗಾವಿ ಹಿಂಡಲಗಾ ಮಧ್ಯೆ ಇರುವ ಕ್ಲಬ್ ರಸ್ತೆಯಿಂದ ಗಾಲ್ಫ್ ಮೈದಾನಕ್ಕೆ ನುಗ್ಗಿತ್ತು‌. ನಿನ್ನೆ ರಾತ್ರಿ ಗಾಲ್ಫ್‌ ಮೈದಾನದಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆರಿಗಳಿಗೂ ಚಳ್ಳೆ ಹಣ್ಣು ತಿನಿಸುತ್ತಿದೆ. ಗಾಲ್ಫ್ ಮೈದಾನದಲ್ಲಿ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ನಿನ್ನೆ ರಾತ್ರಿ 10.22 ಕ್ಕೆ ಚಿರತೆ ಸೆರೆಯಾಗಿತ್ತು. ಚಿರತೆ ಪೋಟೋ ಆಧರಿಸಿ ಅದೇ ಭಾಗದಲ್ಲಿ ಇಂದು ಕಾರ್ಯಾಚರಣೆ ಆರಂಭಿಸಲಾಯಿತು. ಇದಕ್ಕೂ ‌ಮುನ್ನ ಗಾಲ್ಪ್ ಮೈದಾನದ ಸುತ್ತ ಬೆಳೆದ ಗಿಡಗಂಟಿಗಳನ್ನು ಐದು ಜೆಸಿಬಿಗಳ ಸಹಾಯದಿಂದ ತೆರವು ಮಾಡಲಾಯಿತು. ಬಳಿಕ ಗಜಪಡೆ ಜೊತೆಗೆ ಬಲೆ ಸಮೇತ ಹಂದಿ ಹಿಡಿಯುವ ತಂಡ, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಳಗಾವಿಯ ಡಿಫೆನ್ಸ್ ಕ್ವಾರ್ಟರ್ಸ್ ಬಳಿ ಚಿರತೆ ಪ್ರತ್ಯಕ್ಷವಾಗಿತ್ತು. ಹಿಂಡಲಗಾ ಗಣಪತಿ ದೇಗುಲದ ಹಿಂಬದಿಯಲ್ಲಿರುವ ಡಿಫೆನ್ಸ್ ಕ್ವಾರ್ಟರ್ಸ್ ಬಳಿ ಮಧ್ಯಾಹ್ನ 3ಕ್ಕೆ ಕಾಣಿಸಿಕೊಂಡಿತು. ಜನರ ಕೂಗಾಟಕ್ಕೆ ಚಿರತೆ ಡಿಫೆನ್ಸ್ ಕ್ವಾರ್ಟರ್ಸ್‌ನಿಂದ ಮರಳಿ ಗಾಲ್ಫ್ ಮೈದಾನ ಬಳಿಯ ರಕ್ಷಣಾ ಇಲಾಖೆಯ ಪ್ರದೇಶಕ್ಕೆ ಚಿರತೆ ನುಗ್ಗಿತು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಿಂಡಲಗಾ ಗಣಪತಿ ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದರು. ಚಿರತೆ ಪ್ರತ್ಯಕ್ಷವಾದ ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳ ದೌಡಾಯಿಸಿ ಸಿಬ್ಬಂದಿ ಬಳಿ ಮಾಹಿತಿ ಪಡೆದರು. 

'ನಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ, ಯಾವುದೇ ನಿಯಮ ಉಲ್ಲಂಘಿಸಿಲ್ಲ'
ಇನ್ನು ಇಂದಿನ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಸಿಸಿಎಫ್ ಮಂಜುನಾಥ ಚೌಹ್ವಾನ್,'ಸಕ್ರೆಬೈಲಿನಿಂದ ಆಗಮಿಸಿದ ಎರಡು ಆನೆಗಳನ್ನು ಬಳಸಿ ಇಂದು ಶೋಧಕಾರ್ಯ ನಡೆಸಲಾಗುತ್ತಿದೆ‌. ಎರಡು ಆನೆಗಳ ಮೇಲೆ ಮಾವುತರ ಜೊತೆ ಅರವಳಿಕೆ ತಜ್ಞರು ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿನ್ನೆ ಚಿರತೆ ಬೇಟೆಯಾಡಿದ ಹಂದಿಯ ಮೃತದೇಹ ಹಾಗೂ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಟ್ರ್ಯಾಪ್ ಕ್ಯಾಮರಾದಲ್ಲಿ ನಿನ್ನೆ ರಾತ್ರಿ ಚಿರತೆಯ ಚಿತ್ರವೂ ಸೆರೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ.. ಎರಡಲ್ಲ.. ಮೂರು ಚಿರತೆ ಪ್ರತ್ಯಕ್ಷ..!

ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ ಕಾರ್ಯಾಚರಣೆ ನಡೆಯುತ್ತಿದೆ. ಆದ್ರೆ ವಿಶಾಲವಾದ ಪ್ರದೇಶ ಇರುವುದರಿಂದ ಚಿರತೆ ಶೋಧ ಕಾರ್ಯ ಕಷ್ಟವಾಗುತ್ತಿದೆ. ಸಕ್ರೆಬೈಲು ಅರಣ್ಯ ಶಿಬಿರದಿಂದ ಎರಡು ಆನೆಗಳನ್ನು ತರಿಸಲಾಗಿದೆ. ನಮ್ಮ ಜವಾಬ್ದಾರಿ ನಾವು ನಿಭಾಯಿಸುತ್ತೇವೆ. ಯಾವುದೇ ನಿಯಮ ಉಲ್ಲಂಘಿಸುತ್ತಿಲ್ಲ' ಎಂದಿದ್ದಾರೆ‌. ಇನ್ನು ಆನೆಗಳಿಗಾಗಿ ಮುತಗಾ ಗ್ರಾಮದ ರೈತ ರಾಜು ಕಣಬರಕರ್‌ಗೆ ಸೇರಿದ ಎರಡು ಗುಂಟೆ ಕಬ್ಬು ಹೇಳದೇ ಕಟಾವು ಮಾಡಿ ಬಂದ ವಿಚಾರ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಅಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ‌. ಅಲ್ಲದೇ ರೈತನಿಗೂ ಸೂಕ್ತ ಪರಿಹಾರ ನೀಡೋದಾಗಿ ತಿಳಿಸಿದ್ದಾರೆ‌‌.

ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ

ಮಧ್ಯಾಹ್ನ ಮತ್ತೆ ಪ್ರತ್ಯಕ್ಷವಾಗಿ ಮಿಂಚಂತೆ ಮರೆಯಾದ ಚಿರತೆ
ಇನ್ನು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಿಂಡಲಗಾ ಗಣಪತಿ ದೇವಸ್ಥಾನ ಹಿಂಬದಿಯ ರಕ್ಷಣಾ ಇಲಾಖೆಗೆ ಸೇರಿದ ವಸತಿ ಗೃಹದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿತ್ತು. ಗಾಲ್ಫ್ ಮೈದಾನದಿಂದ ಹೊರಗೆ ಹೋಗಲು ಚಿರತೆ ಯತ್ನಿಸಿದ್ದು ಈ ವೇಳೆ ಜನರ ಕೂಗಾಟಕ್ಕೆ ಹೆದರಿ ವಾಪಸ್ ಗಾಲ್ಫ್ ಮೈದಾನ ಸೇರಿದೆ. ಬಳಿಕ ಅದೇ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿಗಳು ಹಾಗೂ ಹಂದಿ ಹಿಡಿಯುವ ತಂಡದ ಜೊತೆ ತೀವ್ರ ಶೋಧ ನಡೆಸಿದರೂ ಅದು ಫಲಿಸಿಲ್ಲ‌. ಚಿರತೆ ಶೋಧಕ್ಕೆ ಶಿವಮೊಗ್ಗದ ಗಜಪಡೆ ಎರಡನೇ ದಿನವೂ ಕಾರ್ಯಾಚರಣೆಗೆ ಇಳಿದಿದೆ. ಹನುಮಾನ ನಗರದ ಡಬಲ್ ರಸ್ತೆ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ ಮತ್ತೆ ಗಾಲ್ಫ್ ಮೈದಾನ ಸೇರಿದೆ. ಚಿರತೆ ಅರಣ್ಯ ಇಲಾಖೆಗೆ ತಲೆ ನೋವು ತರಿಸಿದ್ರೆ, ಜನ ಮಾತ್ರ ಆತಂಕದಲ್ಲೇ ಕಾಲ ಕಳೆಯುವಂತೆ ಮಾಡಿದೆ.

Follow Us:
Download App:
  • android
  • ios