ಬೆಳಗಾವಿ(ಆ.28): ಪ್ರವಾಹಪೀಡಿತ ತಾಲೂ​ಕಿನ ವಿವಿಧ ಗ್ರಾಮ​ಗ​ಳ ಜನ​ರಲ್ಲಿ ಈಗ ಚರ್ಮ​ರೋಗ ಬಾಧೆ ಶುರು​ವಾ​ಗಿದೆ. ಇದು ಗಂಭೀರ ಸ್ವರೂಪ ಪಡೆ​ದು​ಕೊ​ಳ್ಳುವ ಮೊದಲೇ ಆರೋಗ್ಯ ಇಲಾಖೆ ಸೇರಿ​ದಂತೆ ಸಂಬಂಧಿತ ಇತರೆ ಇಲಾಖೆ ಅಧಿ​ಕಾ​ರಿ​ಗಳು ತಕ್ಷಣ ಕ್ರಮ ಕೈಗೊ​ಳ್ಳ​ಬೇ​ಕಿದೆ. ಸ್ಪಲ್ಪ ಯಾಮಾ​ರಿ​ದರೂ ಪ್ರವಾಹ ಪೀಡಿತವಾಗಿದ್ದ ಗ್ರಾಮ​ಗಳಲ್ಲಿ ಇನ್ನು​ಮುಂದೆ ಚರ್ಮ​ರೋ​ಗ ಉಲ್ಬಣಗೊಳ್ಳುವುದರಲ್ಲಿ ಅನುಮಾನವಿಲ್ಲ.

ದೇವಾಲಯ ಶುಚಿಗೊಳಿಸಿದ ಮುಸ್ಲಿಂ ಸಮುದಾಯ : ನೆರೆ ಸಂತ್ರಸ್ತರಿಗೆ ನೆರವು

ನೆರೆ ಹಾವಳಿಯಿಂದ ಬಾಧಿ​ತ ಹೊಸ ಸವದಿ, ರಡ್ಡೇ​ರ​ಹಟ್ಟಿಹಾಗೂ ಜಿರೋ ಪಾಯಿಂಟ್‌ ನಿರಾ​ಶ್ರಿತ ಕೇಂದ್ರ ಸೇರಿ​ದಂತೆ ಮುಂತಾದ ಗ್ರಾಮ​ಗ​ಳಲ್ಲಿ ವಿಜ​ಯ​ಪು​ರದ ಬಿಎಲ್‌ಡಿಇ ಸಂಸ್ಥೆಯ ವೈದ್ಯರ ತಂಡ ಹಾಗೂ ಬೆಂಗಳೂರಿನ ಬಾಸ್‌ ತಂಡ ಪ್ರತ್ಯೇ​ಕ​ವಾಗಿ ಉಚಿ​ತ ಆರೋಗ್ಯ ತಪಾ​ಸಣೆ ಶಿಬಿರ ಹಮ್ಮಿ​ಕೊಂಡಿದ್ದ ಸಂದ​ರ್ಭ​ದಲ್ಲಿ ಇಂತಹ ಸ್ಫೋಟಕ ಮಾಹಿತಿ ತಿಳಿದು ಬಂದಿದೆ.

ಚರ್ಮ ಸಂಬಂಧ ರೋಗಗಳು:

ಸಾಂಕ್ರಾ​ಮಿಕ ರೋಗ ಹರ​ಡುವ ಸಾಧ್ಯತೆ ಹಿನ್ನೆ​ಲೆ​ಯಲ್ಲಿ ಹಮ್ಮಿ​ಕೊಂಡಿದ್ದ ಈ ಉಚಿತ ಆರೋಗ್ಯ ಶಿಬಿ​ರ​ದಲ್ಲಿ ಪಾಲ್ಗೊಂಡ ಗ್ರಾಮ​ಸ್ಥ​ರಲ್ಲಿ ಚರ್ಮ ಸಂಬಂಧಿ ವಿವಿಧ ರೋಗ​ಗಳು ಕಾಣಿ​ಸಿ​ಕೊಂಡಿ​ವೆ. ಅಲ್ಲದೆ ಇವು​ಗಳ ಜತೆ ಅಲರ್ಜಿಯೂ ಸಹಿತ ಕಾಣಿಸ​ತೊ​ಡ​ಗಿದೆ. ಚರ್ಮ ಸಂಬಂಧಿ ರೋಗ ಕಂಡ ತಕ್ಷಣ ಚಿಕಿತ್ಸೆ ಸಿಕ್ಕರೆ ಸರಿ, ಇಲ್ಲ​ದಿ​ದ್ದರೆ ಅದು ಉಲ್ಬ​ಣ​ಗೊಂಡು ಸಂತ್ರ​ಸ್ತ​ರನ್ನು ಇಕ್ಕ​ಟ್ಟಿಗೆ ಸಿಲು​ಕಿ​ಸುವ ಸಾಧ್ಯತೆ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆರೆ ಹಾವಳಿ ಗ್ರಾಮ​ ಹಾಗೂ ಪ್ರದೇ​ಶ​ಗ​ಳಲ್ಲಿ ಈಗಾ​ಗಲೇ ಸಾಂಕ್ರಾ​ಮಿಕ ರೋಗ​ಗಳು ಹರ​ಡುವ ಎಲ್ಲ ಲಕ್ಷ​ಣ​ಗಳು ಕಾಣು​ತ್ತಿದ್ದು, ಈಗ ಈ ಚರ್ಮ ಸಂಬಂಧಿ ರೋಗ​ದಿಂದ ಸಂತ್ರ​ಸ್ತರು ಮತ್ತಷ್ಟುಚಿಂತೆ​ಗೊ​ಳ​ಗಾ​ಗು​ವಂತೆ ಮಾಡಿದೆ. ಇನ್ನು ಮುಂದಿನ ದಿನ​ಗ​ಳಲ್ಲಿ ಕಾಲರಾ, ಡೆಂಘೀ, ಚಿಕೂ​ನ್‌​ಗುನ್ಯಾ, ಟೈಫೈಡ್‌, ಕಾಮಾಲೆ, ವಾಂತಿ​ಭೇದಿ, ಹೊಟ್ಟೆ​ನೋ​ವು ಕೂಡ ಅಬ್ಬ​ರಿಸಿ ಸಂತ್ರ​ಸ್ತ​ರನ್ನು ಹೈರಾ​ಣಾ​ಗಿ​ಸ​ಬ​ಹುದಾಗಿದೆ.

ಅಸ್ತಮಾ ರೋಗಿಗಳಿಗೂ ತೊಂದರೆ:

2005ಕ್ಕಿಂತ ಈ ಬಾರಿ 7 ಅಡಿ ಅತೀ ಎತ್ತರವಾಗಿ ನೀರು ನಿಂತಿದ್ದರಿಂದ ಎಲ್ಲ ಬೆಳೆಗಳು ಕೊಳೆತು ಹೋಗಿವೆ. ಮಾತ್ರ​ವ​ಲ್ಲದೆ ಕೊಳೆತ ಈ ಬೆಳೆ​ಗ​ಳ ಕೆಟ್ಟದುರ್ವಾ​ಸನೆ ಕಿಮೀಗ​ಟ್ಟಲೆ ದೂರ​ದ​ವ​ರೆಗೆ ಹರ​ಡಿದೆ. ಇದ​ರಿಂದ ವಾತಾ​ವ​ರ​ಣ​ದ​ಲ್ಲಿನ ಗಾಳಿ ಅಶು​ದ್ಧ​ವಾಗಿ ಅಸ್ತಮಾ ರೋಗಿ​ಗಳ ಜೀವ ಕೈಯಲ್ಲಿ ಬರು​ವಂತಾ​ಗು​ತ್ತಿದೆ. ವಿವಿಧ ಕೆಲ​ಸ​ಕಾ​ರ್ಯ​ಕ್ಕೆಂದು ಹೊಲಕ್ಕೆ ಹೋಗಿ ಬಂದರೆ ಸಾಕು ಹೊಲ​ದ​ಲ್ಲಿನ ವಿವಿಧ ಸಸ್ಯ​ಗಳು ಹಾಗೂ ಕೊಳೆತ ಬೆಳೆ​ಗಳು ಮೈಕೈಗೆ ತಾಗಿ ಕೆರೆತ ಶುರು​ವಾ​ಗು​ತ್ತಿದೆ. ಅಲ್ಲದೆ ಕುಡಿ​ಯುವ ನೀರೂ ಸಹಿತ ಅಶು​ದ್ಧ​ವಾ​ಗಿದ್ದು ಸಂತ್ರ​ಸ್ತ​ರಿಗೆ ಮಾರ​ಕವಾಗಿ ಪರಿ​ಣ​ಮಿ​ಸಿದೆ.

ರೋಗಗಳನ್ನು ತಡೆಯಲು ಕ್ರಮ:

ನೆರೆ ಹಾವಳಿ ಪ್ರದೇಶ ವ್ಯಾಪ್ತಿಯಲ್ಲಿ 9 ಪ್ರಾಥಮಿಕ ಆರೋಗ್ಯ ಕಂದ್ರಗಳಿವೆ. ಒಟ್ಟು 19 ವೈದ್ಯಕೀಯ ತಂಡ ನೇಮಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿ​ಸಲು ಅನೇಕ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಚಾಲನೆಗೆ ನೀಡಿದ್ದೇವೆ. ಶುದ್ಧ ಕುಡಿಯುವ ನೀರಿನ ಬಗ್ಗೆ ಆರ್‌ಒಪ್ಲಾಟ್‌ಗಳಲ್ಲಿ ನೀರನ್ನು ತಪಾಸಣೆ ಮಾಡಲಾಗುವುದು. ಹಲೋಜಿನ್‌ ಗುಳಿಗೆಗಳನ್ನು ವಿತರಿಸ​ಲಾ​ಗಿದೆ. ಮುಂದೆ ಬೇಕಾಗುವ ಔಷ​ಧ​ಗಳ ಸಂಗ್ರಹ ಮಾಡಲಾಗಿದೆ. ಗ್ರಾಪಂಗಳು ಗಟಾರ್‌ ಮತ್ತು ಓಣಿಗಳಲ್ಲಿರುವ ಕಸವನ್ನು ಸ್ವಚ್ಛ ಮಾಡುವುದು ಡಿಡಿಟಿ ಪೌಡರ್‌ ಸಿಂಪಡಿಸಲು ಗ್ರಾಪಂಗ​ಳಿಗೆ ಸೂಚನೆ ನೀಡ​ಲಾ​ಗಿದೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ.ಎಂ.ಎಸ್‌. ಕೊಪ್ಪದ ತಿಳಿ​ಸಿ​ದ್ದಾರೆ.

ಶುದ್ಧ ಕುಡಿಯುವ ನೀರಿಲ್ಲ:

ಭೂಸೇನಾ ನಿಗಮದವರು ನಿರ್ಮಿ​ಸಿದ ಸುಮಾರು 34 ಆರ್‌ಒಪ್ಲಾಟ್‌ (ಶುದ್ಧ ನೀರಿನ ಘಟಕ) ಸ್ಥಾಪಿಸಿದಾ​ಗಿ​ನಿಂದಲೂ ಚಾಲ್ತಿಯಲ್ಲಿ ಇಲ್ಲ. ಇನ್ನೂ ರಿಪೇರಿ ಹಂತದಲ್ಲಿವೆ. ಈ ಕುರಿತು ಆರೋಗ್ಯ ಅಧಿಕಾರಿಗಳನ್ನು ಕೇಳಿದಾಗ ನಾವು ಫಾಗಿಂಗ್‌ ಯಂತ್ರ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ರಿಪೇರಿ​ಗಾಗಿ ಪತ್ರದ ಮೂಲಕ ತಾಲೂಕಾಡಳಿತಕ್ಕೆ ತಿಳಿಸಿದ್ದೇವೆ. ಅವರು ರಿಪೇರಿ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿಗಳ ಕೆಲಸಕ್ಕೆ ಕೆಲವು ಸಿಬ್ಬಂದಿ ಸಹಕಾರ ಕೊರತೆ ಆಗಿದೆ. ನದಿ- ಇಂಗಳಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವಾಹನವನ್ನು ನೆರೆ ಪೀಡಿತ ಪ್ರದೇಶದ ಸೇವೆಗೆ ತಾತ್ಕಾಲಿಕವಾಗಿ ನೀಡಲು ಕೇಳಿದರೂ ಅಲ್ಲಿನ ಆರೋಗ್ಯಾಧಿ​ಕಾರಿ ಒಪ್ಪುತ್ತಿಲ್ಲ. ಇದರಿಂದ ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಕೊರತೆ ಇದೆ.