Asianet Suvarna News Asianet Suvarna News

ರೈತರೇ ರಸಗೊಬ್ಬರ ಖರೀದಿಸುವ ಮುನ್ನ ಎಚ್ಚರ, ಬೆಳಗಾವಿಯಲ್ಲಿ ಸಿಕ್ತು ಮಣ್ಣು!

 ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರಸಗೊಬ್ಬರ ಖರೀದಿ ಮಾಡಿದ ರೈತನಿಗೆ ಶಾಕ್ , ಗದ್ದೆಗೆ ಬಂದು ರಸಗೊಬ್ಬರದ ಪ್ಯಾಕ್ ಒಪನ್ ಮಾಡಿದ್ರೆ ಕಂಡಿದ್ದು ಕಲ್ಲು ಮಣ್ಣು!

Belagavi Farmers soil found  in fertilizer bag gow
Author
Bengaluru, First Published Aug 19, 2022, 9:58 PM IST

ಬೆಳಗಾವಿ (ಆ.19): ರಾಜ್ಯದಲ್ಲಿ ಆಗಾಗ ಕಳೆಪೆ ಗೊಬ್ಬರದ ವಿಚಾರ ಸದ್ದು ಮಾಡ್ತಿರುತ್ತೆ. ಕೆಲ ಕಡೆ ರಸಗೊಬ್ಬರಕ್ಕಾಗಿ ಸರತಿ ಸಾಲು ಕಂಡು ಬಂದ್ರೆ ಇನ್ನೂ ಕೆಲವು ಕಡೆ ರಸಗೊಬ್ಬರ ಅಭಾವವೂ ಕಾಡುತ್ತೆ. ಬಹುಷಹ ಇಂತಹ ಪ್ರಕರಣಗಳನ್ನೆ ಟಾರ್ಗೆಟ್ ಮಾಡಿರುವ ವ್ಯವಸ್ಥಿತ ಜಾಲ ಈಗ ರಸಗೊಬ್ಬರವನ್ನೂ ಕಳಪೆ ಮಾಡಲು ಮುಂದಾಯ್ತಾ ಎನ್ನುವ ಪ್ರಶ್ನೆಗಳು ಕಾಡತೊಡಗುತ್ತಿವೆ ಯಾಕೆ ಅಂತೀರಾ ಈ ಸ್ಟೋರಿ ನೋಡಿ‌‌. ಕೈಲಿ ಕಲ್ಲು ಮಣ್ಣು ಮಿಶ್ರಿತ ರಸಗೊಬ್ಬರ ಹಿಡಿದು ಆಕ್ರೋಶ ವ್ಯಕ್ತಡಿಸ್ತಿರೋ ರೈತರು. ಕಳಪೆ ಮಟ್ಟದ ರಸಗೊಬ್ಬರ ತಂದು ಹೈರಾಣದಾ ರೈತ ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಅಥಣಿ ತಾಲೂಕಿನಲ್ಲಿ ರಸಗೊಬ್ಬರದ ಅಭಾವ ಕಾಡತೊಡಗಿದ್ದರಿಂದ ಸುಟ್ಟಟ್ಟಿ ಗ್ರಾಮದ ರೈತ ದಾನಪ್ಪ ಮಲಾಬಾದ್  ಎಂಬ ರೈತ ಪಕ್ಕದ ಜಿಲ್ಲೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಪಿಕೆಪಿಎಸ್ ಒಂದರಿಂದ 600 ರೂಪಾಯಿ ಪ್ರತಿ ೫೦ ಕೆಜಿ ಪ್ಯಾಕ್ ನಂತೆ ಎರಡು ಪ್ಯಾಕ್ ರಸಗೊಬ್ಬರ ತಂದಿದ್ದರು. ಅಲ್ಲಿಂದ ರಸಗೊಬ್ಬರವನ್ನು ಬೆಳಗ್ಗೆ ಗದ್ದೆಗೆ ತಂದ ದಾನಪ್ಪನಿಗೆ ದೊಡ್ಡ ಶಾಕ್ ಕಾದಿತ್ತು. ರಸಗೊಬ್ಬರದ ಪ್ಯಾಕ್ ತೆಗೆಯುತ್ತಿದ್ದಂತೆ ಚೀಲದ ತುಂಬ ಕಲ್ಲು ‌ಮಣ್ಣು ಮಿಶ್ರಿತವಾದ ರಸಗೊಬ್ಬರ ಸಿಕ್ಕಿತ್ತು. 

ಈ ಹಿಂದೆ ಕೃಷಿ ಸಚಿವ ಬಿ ಸಿ ಪಾಟೀಲ್ ರಾಜ್ಯದಲ್ಲಿ ಕಳಪೆ ಮಟ್ಟದ ರಸಗೊಬ್ಬರ ಪೂರೈಕೆ ವಿಷಯ ಗಮನದಲ್ಲಿದ್ದು ಅದರ ವಿರುದ್ದ ಕ್ರಮ ಕೈಗೊಳ್ಳುತ್ತೆನೆ ಅಂತ ಅಥಣಿಗೆ ಆಗಮಿಸಿದ ಒಂದು ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.ಆದರೆ ರಾಜ್ಯದಲ್ಲಿ ಇನ್ನೂ ಸಹ  ನಕಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎನ್ನುವುದಕ್ಕೆ ಸುಟ್ಟಟ್ಟಿ ಗ್ರಾಮದಲ್ಲಿ ದೊರೆತಿರುವ ಕಳಪೆ ರಸಗೊಬ್ಬರದ ಚೀಲಗಳೆ ಸಾಕ್ಷಿಯಾಗಿವೆ. ಹೀಗಾಗಿ ಸರ್ಕಾರ ಮತ್ತು ಕೃಷಿ ಸಚಿವರು ಇದರ ವಿರುದ್ದ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ರೈತ ಸಮಯದಾಯ ಆಗ್ರಹ ಮಾಡುತ್ತಿದೆ. ಇಡೀ ಘಟನೆಯ ಕುರಿತು ರೈತರ ದಾನಪ್ಪ ಹೇಳುವುದು ಹೀಗೆ. 

ಕೃಷಿ ಸಚಿವ ಬಿ ಸಿ ಪಾಟೀಲ್ ಉಸ್ತುವಾರಿ ಜಿಲ್ಲೆಯಲ್ಲಿ ನಕಲಿ‌ ಗೊಬ್ಬರ, ಅನ್ನದಾತರಿಗೆ ವಂಚನೆ..!

ರೈತನೇ ದೇಶದ ಬೆನ್ನೆಲುಬು ಎಂಬ ಸರ್ಕಾರದ ಘೋಷಣೆ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಯ್ತೆ ಎನ್ನುವ ಪ್ರಶ್ನೆಗಳು ಇಂತಹ ಪ್ರಕರಣಗಳು ನಡೆದಾಗ ಅನಿಸೋದು ಸಮಾನ್ಯವಾಗಿಬಿಟ್ಟಿದೆ. ಹೀಗಾಗಿ ಈ ನಕಲಿ ರಸಗೊಬ್ಬರದ ತಯಾರಿಸುವ ಮತ್ತು ಮಾರಾಟ ಮಾಡುವ ವ್ಯವಸ್ಥಿತ ಕಾಲದ  ವಿರುದ್ದ ಸರ್ಕಾರ ಮತ್ತು ಕೃಷಿ ಸಚಿವರ ಕ್ರಮಕ್ಕೆ ಮುಂದಾಗಬೇಕಿದೆ.

Follow Us:
Download App:
  • android
  • ios