Asianet Suvarna News Asianet Suvarna News

ಜನವರಿಯಲ್ಲಿ ಬೆಳಗಾವಿ ಮೇಯರ್‌ ಚುನಾವಣೆ: ಅಭಯ ಪಾಟೀಲ

ಬೆಳಗಾವಿ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತ ಸ್ಥಾಪಿಸಿದೆ. ಬಿಜೆಪಿ ಮೊದಲ ಮೇಯರ್‌, ಉಪಮೇಯರ್‌ ಆಗಲಿದ್ದಾರೆ: ಅಭಯ ಪಾಟೀಲ 

Belagavi City Corporation Mayor Election in January Says MLA Abhay Patil grg
Author
First Published Dec 10, 2022, 9:30 PM IST

ಬೆಳಗಾವಿ(ಡಿ.10):  ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಚುನಾವಣೆ ಮುಂಬರುವ ಜನವರಿ ಮೊದಲ ಇಲ್ಲವೇ ಎರಡನೇ ವಾರದಲ್ಲಿ ನಡೆಯಲಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತ ಸ್ಥಾಪಿಸಿದೆ. ಬಿಜೆಪಿ ಮೊದಲ ಮೇಯರ್‌, ಉಪಮೇಯರ್‌ ಆಗಲಿದ್ದಾರೆ. ನಮ್ಮ ಪಕ್ಷದ 35 ನಗರ ಸೇವಕರು ನಿರಾಸಕ್ತಿಯಾಗಿದ್ದರೆ ಅವರೆಲ್ಲರೂ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದರು. ಆದರೆ, ನಮ್ಮೆಲ್ಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಪಾಲಿಕೆ ಚುನಾವಣೆ ನಂತರವೂ ಈವರೆಗೂ ಮೇಯರ್‌, ಉಪಮೇಯರ್‌ ಚುನಾವಣೆ ನಡೆದಿಲ್ಲ. ಕಲಬುರ್ಗಿ ಮತ್ತು ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್‌, ಉಪಮೇಯರ್‌ ಚುನಾವಣೆ ನಡೆದಿವೆ. ಆದರೆ, ಬೆಳಗಾವಿ ಮೇಯರ್‌, ಉಪಮೇಯರ್‌ ಚುನಾವಣೆ ಇನ್ನೂ ನಡೆದಿಲ್ಲ. ಬೆಳಗಾವಿ ಮೇಯರ್‌ ಚುನಾವಣೆ ಸಂಬಂಧ ಚುನಾವಣಾ ಆಯೋಗ ಜ.6 ಇಲ್ಲವೇ 9ಕ್ಕೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆಯಿದೆ. ಎರಡು ದಿನದಲ್ಲಿ ಮತ್ತೆ ಹೊಸ ಮೀಸಲಾತಿ ಪ್ರಕಟವಾಗಲಿದೆ. ಇನ್ನು ಮುಂದೆ ಮೇಯರ್‌ ಚುನಾವಣೆ ವಿಳಂಬವಾಗುವುದಿಲ್ಲ. ಮೊದಲ ಬಿಜೆಪಿ ಮೇಯರ್‌ ಆಗುವುದು ನಿಶ್ಚಿತವಾಗಿದೆ ಎಂದು ಹೇಳಿದರು.

ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲಿಗೆ ಆಮ್‌ ಆದ್ಮಿ ಪಕ್ಷವೇ ಕಾರಣ: ಸತೀಶ ಜಾರಕಿಹೊಳಿ

ಬಿಜೆಪಿ ಸದಸ್ಯರನ್ನು ಕಾಂಗ್ರೆಸ್‌ ಸೇರ್ಪಡೆ ಆಹ್ವಾನ ನೀಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಮೊದಲು ಎಲ್ಲಿ ಅಸ್ತಿತ್ವದಲ್ಲಿದೆ ಹೇಳಿ. ಆ ಕುರಿತು ಪ್ರತಿಕ್ರಿಯೆ ನೀಡುವುದರಿಂದ ನಮ್ಮ ಸಮಯ ನಷ್ಟವಾಗುತ್ತದೆ ಎಂದು ಟೀಕಿಸಿದರು.

ಮೇಯರ್‌, ಉಪಮೇಯರ್‌ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಯಾವುದೇ ಸದಸ್ಯರೂ ಲಾಬಿ ಮಾಡಿಲ್ಲ. ನಮ್ಮ ಸದಸ್ಯರ ಬಗ್ಗೆ ನಮಗೆ ಅಭಿಮಾನವಿದೆ. ಇದೇ ಬೇರೆ ಪಕ್ಷದಲ್ಲಿದ್ದರೆ ಪರಿಸ್ಥಿತಿ ಬೇರೆಯದ್ದೇ ಆಗಿರುತ್ತಿತ್ತು. ಗುಜರಾತ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ ಎಷ್ಟುವೀಕ್‌ ಆಗಿದೆ ಎನ್ನುವುದಕ್ಕೆ 2023ರ ಮೇನಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.
 

Follow Us:
Download App:
  • android
  • ios