ಮುನವಳ್ಳಿ(ಜ.17): ಆಸ್ಸಾಂ ರೈಫಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಬನೂರ ಗ್ರಾಮದ ಯೋಧರೊಬ್ಬರು ಮಣಿಪುರದಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮಬನೂರ ಗ್ರಾಮದ ಸತ್ಯಪ್ಪ ಶಿದ್ಲಿಂಗಪ್ಪ ನರಿ (29) ಹೃದಯಾ ಘಾತದಿಂದ ಮೃತಪಟ್ಟಿರುವ ಯೋಧ. 

ಹೃದಯಾಘಾತಕ್ಕೆ ಒಳಗಾದ ಸತ್ಯಪ್ಪ ಅವರನ್ನು ಕೋಲ್ಕತಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು. ಮೃತ ಯೋಧಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ತಂದೆ ತಾಯಿ, ಸಹೋದರ, ಸಹೋದರಿ ಇದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತರ ಪಾರ್ಥಿವ ಶರೀರ ಶುಕ್ರವಾರ ಬೆಳಗ್ಗೆ ಮಬನೂರ ಗ್ರಾಮ ತಲುಪಲಿದ್ದು, ಇಂದು ಮಧ್ಯಾಹ್ನ ಮಬನೂರ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.