ಬೆಳಗಾವಿಯಲ್ಲಿ ಮತ್ತೊಬ್ಬ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ; ಅಮಾನವೀಯ ಘಟನೆಗೆ ಕೊನೆಯೇ ಇಲ್ವಾ?
ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿ ವಿಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ಬೆಳಗಾವಿ (ಫೆ.29): ರಾಜ್ಯದ ಗಡಿಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿ ವಿಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕಾಗವಾಡ ತಾಲೂಕಿನ ತಹಶೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ರಾಯಪ್ಪ ಭೀಮಪ್ಪ ನಾಗನೂರು ಅವರಿಗೆ 1991ರಲ್ಲಿ ಸರ್ಕಾರದಿಂದ 3 ಎಕರೆ ಜಮೀನು ಕೊಡಲಾಗಿತ್ತು. ಅದರಲ್ಲಿ 20 ಗುಂಟೆ ಜಮೀನು ಒತ್ತುವರಿ ಆಗಿದ್ದು, ಅದನ್ನು ಪ್ರಶ್ನೆ ಮಾಸಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ದೂರು ಕೊಟ್ಟು ಸರ್ವೇ ಮಾಡಿಸಿ ಜಮೀನು ಒತ್ತುವರಿ ತೆರವು ಮಾಡಿದರೂ ಪುನಃ ಅದನ್ನು ಒತ್ತುವರಿ ಮಾಡಲಾಗಿತ್ತು. ಪುನಃ ಒತ್ತುವರಿ ಮಾಡಿಕೊಂಡವರಿಗೆ ಸರ್ಕಾರದಿಂದ ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ಮಹಿಳೆಯರ ಕುಟುಂಬದವರ ಮೇಲೆ ಪುನಃ ಹಲ್ಲೆ ಮಾಡಲಾಗಿದೆ. ಕಳೆದ 6 ತಿಂಗಳಲ್ಲಿ ಗ್ರಾಮದ ಕೆಲವು ಪ್ರಭಾವಿಗಳು ಸೇರಿಕೊಂಡು ಹಲವು ಬಾರಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ರಾತ್ರಿ ಮಲಗುವಾಗ ಮಗು ಅಳುತ್ತೆ ಅನ್ನೋ ಕಾರಣಕ್ಕೆ ಹೆಣ್ಣುಮಗುವನ್ನು ಗೋಡೆಗೆ ಎಸೆದ ಪಾಪಿ ತಂದೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹಿಳೆಯರ ಕುಟುಂಬಕ್ಕೆ ತೊಂದರೆ ಕೊಡದಂತೆ ಹಾಗೂ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡದ್ದರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಹೀಗಾಗಿ, ಕಾಗವಾಡ ತಹಶೀಲ್ದಾರ್ ಸಂಜಯ ಇಂಗಳೆ ಅವರು ಘಟನೆ ನಡೆದ ಐನಾಪುರ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಜಮೀನು ಅತಿಕ್ರಮಣ ಮಾಡಿದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಪ್ರಭಾವಿ ಭೂಗಳ ದೌರ್ಜನ್ಯ ಇನ್ನೂ ನಿಂತಿಲ್ಲ. ತಹಶೀಲ್ದಾರರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದರೂ, ಇದನ್ನು ತಡೆಯಲು ಪ್ರಭಾವಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ.
2024-25ನೇ ಸಾಲಿನ ಬಿಬಿಎಂಪಿ ಬಜೆಟ್ ಗಾತ್ರ 12,369 ಕೋಟಿ ರೂ.; ಬೆಂಗಳೂರಿಗೆ ಮತ್ತೆ ಬರಲಿದೆ ಜಾಹೀರಾತು ಹಾವಳಿ
ಮುಖ್ಯಮಂತ್ರಿಗೆ ದೂರು ಕೊಟ್ಟರೂ ಬಡ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಡ ಕುಟುಂಬದ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದ್ದರು. ಆದರೆ, ಈ ಬಗ್ಗೆ ಪರಿಶೀಲನೆ ಮಾಡಬೇಕಿದ್ದ ಅಧಿಕಾರಿಗಳು ಸ್ಥಳೀಯ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಸೈಲೆಂಟ್ ಆಗಿದ್ದಾರೆ. ಇನ್ನು ಸುವರ್ಣ ನ್ಯೂಸ್‌ನಲ್ಲಿ ಸತತವಾಗಿ ಸುದ್ದಿ ಬಿತ್ತರ ಆಗುತ್ತಿದ್ದಂತೆ ತಹಶೀಲ್ದಾರರು ಆಗಮಿಸಿದ್ದಾರೆ. ಈಗಲೂ ಸಮಸ್ಯೆ ಪರಿಹಾರ ಆಗುವ ಸೂಚನೆಯೇ ಕಂಡುಬರುತ್ತಿಲ್ಲ. ಇದಕ್ಕೆ ಕಾರಣ ಸ್ಥಳೀಯ ಪ್ರಭಾವಿಗಳು ರಾಯಪ್ಪ ಅವರಿಗೆ ಸರ್ಕಾರ ನೀಡಿದ್ದ ಜಮೀನನ್ನು ಒತ್ತುವರಿ ಮಾಡುತ್ತೇವೆ ಎಂಬ ಬೆದರಿಕೆ ಹಾಕುತ್ತಿರುವ ಘಟನೆ ನಡೆಯುತ್ತಿದೆ.