ಬೆಳಗಾವಿ(ಆ.02): ಕಳೆದ ಜೂನ್‌ ತಿಂಗಳಲ್ಲಿ ರಾಜ್ಯದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಎರಡನೇ ಅತೀ ಹೆಚ್ಚು ಪ್ರಯಾಣಿಕರು ಸಂಚರಿಸಿದ ಕೀರ್ತಿಗೆ ಭಾಜನವಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜೂನ್‌ ತಿಂಗಳ ಈ ಕುರಿತಾದ ದತ್ತಾಂಶವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಒಟ್ಟು 391 ವಿಮಾನಗಳು ಹಾರಾಟ ನಡೆಸಿದ್ದು, 10,224 ಜನರು ಪ್ರಯಾಣಿಕರು ಪ್ರಯಾಣಿಸಿದ್ದಾರೆ. 

ವಿಜಯಪುರ: ವರ್ಷ​ದಲ್ಲಿ ವಿಮಾನ ಹಾರಾಟಕ್ಕೆ ಸಂಕ​ಲ್ಪ, ಡಿಸಿಎಂ ಕಾರಜೋಳ

ಮೂಲಕ ಬೆಳಗಾವಿಗೆ 2ನೇ ಸ್ಥಾನಕ್ಕೇರಿದೆ. ಬೆಂಗಳೂರಿನ ನಂತರದ ಸ್ಥಾನ ಬೆಳಗಾವಿಗೆ ಬಂದಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5021 ವಿಮಾನ ಸಂಚಾರ ನಡೆಸಿದ್ದು, 3,80,406 ಜನರು ಪ್ರಯಾಣಿಸಿದ್ದಾರೆ. ಮೂರನೇ ಸ್ಥಾನ ಪಡೆದುಕೊಂಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 198 ವಿಮಾನ ಹಾರಾಡಿದ್ದು, 8608 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣವು 4ನೇ ಸ್ಥಾನ ಹಾಗೂ ಮೈಸೂರು ನಿಲ್ದಾಣ್ಕ 5ನೇ ಸ್ಥಾನ ಪಡೆದಿದೆ. ಕಲಬುರಗಿ ವಿಮಾನ ನಿಲ್ದಾಣದಿಂದ 120 ವಿಮಾನ ಹಾರಾಡಿದ್ದು, 3606 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮೈಸೂರಿನಿಂದ 330 ವಿಮಾನ ಹಾರಾಟ ನಡೆಸಿದ್ದು, 3158 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಹುಬ್ಬಳ್ಳಿಯಿಂದ 14 ವಿಮಾನ ಸಂಚರಿಸಿವೆ. ಕೇವಲ 55 ಜನರು ಪ್ರಯಾಣಿಸಿದ್ದಾರೆ.