ಬೆಂಗಳೂರು(ಜು.15): ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಕೊರೋನಾ ಆರೈಕೆ ಕೇಂದ್ರ ಸೇರಿದಂತೆ ವಿವಿಧ ಆರೈಕೆ ಕೇಂದ್ರಗಳಿಗೆ ಮಂಚ, ಹಾಸಿಗೆ, ದಿಂಬು, ಹೊದಿಕೆ, ಫ್ಯಾನ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಬಾಡಿಗೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನ ಹಿಂದೆಯೇ ಈ ಎಲ್ಲ ವಸ್ತುಗಳಿಗೆ ಮಾರುಕಟ್ಟೆದರ ನಿಗದಿ ಪಡಿಸಿ ಖರೀದಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಸರ್ಕಾರ ಮುಖ್ಯಕಾಯದರ್ಶಿ ವಿಜಯಭಾಸ್ಕರ್‌ ಹಾಗೂ ಕೊರೋನಾ ಆರೈಕೆ ಕೇಂದ್ರದ ಉಸ್ತುವಾರಿ ಅಧಿಕಾರಿಯಾದ ರಾಜೇಂದ್ರ ಕಠಾರಿಯಾ ಈ ಸೂಚನೆ ನೀಡಿದ್ದಾರೆ. ನಗರದ ಕೋವಿಡ್‌ ಆರೈಕೆ ಕೇಂದ್ರಕ್ಕೆ ಹಾಸಿಗೆ, ಹೊದಿಕೆ, ಮಂಚ, ಫ್ಯಾನ್‌, ಕುರ್ಚಿ ಸೇರಿದಂತೆ ಒಟ್ಟು 21 ವಿವಿಧ ಪ್ರಕಾರದ ವಸ್ತುಗಳನ್ನು ದಿನವೊಂದಕ್ಕೆ 80.8 ಲಕ್ಷ ಬಾಡಿಗೆ ನೀಡುವುದಕ್ಕೆ ಪಾಲಿಕೆಯ ಅಧಿಕಾರಿಗಳು ಒಪ್ಪಂದ ಮಾಡಿಕೊಂಡಿದ್ದರು.

ಪಾದರಾಯನಪುರ ಕಾರ್ಪೋರೇಟರ್‌ ಇಮ್ರಾನ್‌ ಪಾಷಾ ಮತ್ತು 21 ಜನರಿಗೆ ಜಾಮೀನು

ಬಾಡಿಗೆ ಪಡೆಯುವುದರಿಂದ ಸಾಕಷ್ಟುಪ್ರಮಾಣದಲ್ಲಿ ನಷ್ಟಉಂಟಾಗಲಿದೆ ಎಂಬ ಕಾರಣಕ್ಕೆ ವಸ್ತುಗಳನ್ನು ಖರೀದಿ ಮಾಡುವಂತೆ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈಗ ಅಂದಾಜಿಸಿರುವ ಪ್ರಕಾರ ಹಾಸಿಗೆ, ಮಂಚ, ದಿಂಬು, ಹೊದಿಕೆ ಸೇರಿದಂತೆ ಒಬ್ಬ ರೋಗಿಗೆ ಬೇಕಾದ ವಸ್ತು ಖರೀದಿಗೆ ಏಳು ಸಾವಿರ ರು. ಆಗಲಿದೆ. ಆ ಎಲ್ಲ ವಸ್ತುಗಳನ್ನು ಬಿಬಿಎಂಪಿ ಅಧಿಕಾರಿಗಳು ದಿನಕ್ಕೆ .350ರಿಂದ 400ಕ್ಕೆ ದಿನದ ಬಾಡಿಗೆಗೆ ಪಡೆದಿದ್ದರು. ಇನ್ನ ಶೌಚಾಲಯ, ಟಿವಿ ಸೇರಿದಂತೆ ಇತರೆ ವಸ್ತುಗಳನ್ನು ಬಾಡಿಗೆ ಪಡೆಯುವುದಕ್ಕೆ ತೀರ್ಮಾನಿಸಲಾಗಿದೆ. ಅದಕ್ಕೆ ಸುಮಾರು 4ರಿಂದ 5 ಕೋಟಿ ಬಾಡಿಗೆ ನೀಡಬೇಕಾಗಲಿದೆ ಎಂದು ವಿವರಿಸಿದ್ದಾರೆ.

ಹಳಸಿದ ಅನ್ನ ಕೊಡ್ತಾರೆ: ಸೋಂಕಿತರ ಆಕ್ರೋಶ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಹಾಸಿಗೆ, ಮಂಚ, ಫ್ಯಾನ್‌, ದಿಂಬು, ನೀರಿನ ಬಾಟಲ್‌ , ಕುರ್ಚಿ ಸೇರಿದಂತೆ ಏಳು ಅಗತ್ಯ ವಸ್ತುಗಳನ್ನು ಖಾಸಗಿ ಏಜೆನ್ಸಿಯಿಂದಲೇ ಖರೀದಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಕೋವಿಡ್‌ ಆರೈಕೆ ಕೇಂದ್ರವನ್ನು ತಕ್ಷಣಕ್ಕೆ ವ್ಯವಸ್ಥೆ ಮಾಡಬೇಕಿತ್ತು. ಹೀಗಾಗಿ, ಸವೀರ್‍ಸ್‌ ಪ್ರೊವೈಡರ್‌ ಸಂಸ್ಥೆಗಳಿಂದ ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಈಗ ಮಾರುಕಟ್ಟೆಬೆಲೆಯಲ್ಲೇ ಅವುಗಳನ್ನು ಖರೀದಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.