ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ಸಿಡಿದೆದ್ದ ಬೇಡ ಜಂಗಮ ಸಮುದಾಯ

* ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ಭುಗಿಲೆದ್ದ ಆಕ್ರೋಶ
* ಪಿ.ರಾಜೀವ್ ವಿರುದ್ಧ ಬೇಡ ಜಂಗಮ ಪ್ರತಿಬಟನೆ
* ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಬಾರದು ಎಂದಿದ್ದ ರಾಜೀವ್

beda jangam community protest against kudachi BJP mla p rajeev In Yadgir rbj

ಯಾದಗಿರಿ, (ಡಿ.22): ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಬಾರದು ಎಂದು ಹೇಳಿರುವ ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್(P Rajeev) ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಯಾದಗಿರಿ(Yadgir) ನಗರದಲ್ಲಿ ಇಂದು (ಬುಧವಾರ) ಜಿಲ್ಲಾ ಬೇಡ ಜಂಗಮ ಸಮಾಜ (Beda Jangam Community) ಬೃಹತ್ ಪ್ರತಿಭಟನೆ(Protest) ಮಾಡಿದ್ದು,  ಪಿ.ರಾಜೀವ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.  ಅಲ್ಲದೇ ಜಂಗಮ ಸಮಾಜಕ್ಕೆ ಅವಮಾನ ಮಾಡಿದ  ಪಿ.ರಾಜೀವ್ ಅವರನ್ನ ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದರು. 

Karnataka Bandh : ಡಿ.31 ಕರ್ನಾಟಕ ಬಂದ್‌- ಕನ್ನಡಿಗರೇ ಬೆಂಬಲಿಸಿ

ನಗರದ ಗಾಂಧಿ ವೃತ್ತ,ಸುಭಾಷ್ ವೃತ್ತದಲ್ಲಿ ಶಾಸಕ ಪಿ.ರಾಜೀವ್ ಪ್ರತಿಕೃತಿ ದಹಿಸಿದರು. ನಂತರ ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ಮಾಡಿದರು.

ವೀರಶೈವ ಧರ್ಮಾಚರಣೆ ಮಾಡುವ ಜಂಗಮ ಸಮಾಜದವರಿಗೆ ಸಂವಿಧಾನ, ಸರ್ವೋಚ್ಛ ನ್ಯಾಯಲಯವು ಬೇಡ ಜಂಗಮರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡಲು ಸೂಚಿಸಿದೆ.  ಆದರೆ, ಕುಡಚಿ ಶಾಸಕ ಪಿ ರಾಜೀವ್‌ ಅವರು ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಬಾರದು ಎಂದು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿದ್ದಾರೆ. ಇದು ಬೇಡ ಜಂಗಮ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ಅವರ ವಿರುದ್ದ ಹಕ್ಕುಚ್ಯುತಿ ಮಂಡಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊಪ್ಪಳದಲ್ಲೂ ಪ್ರತಿಭಟನೆ
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನೂರಾರು ಬೇಡ ಜಂಗಮ ಸಮಾಜದವರು ಹಾಗೂ 15ಕ್ಕೂ ಹೆಚ್ಚು ಮಠಾಧೀಶರು ನಿನ್ನೆ(ಡಿ.21) ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಚಳಗೇರೆ ಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿಂದಿನಿಂದಲೂ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಆದರೆ, ಇತ್ತೀಚಿಗೆ ಕೆಲವು ರಾಜಕಾರಣಿಗಳು ಕುತಂತ್ರದಿಂದ ಪ್ರಮಾಣ ಪತ್ರ ನೀಡುವುದನ್ನು ತಡೆಯುತ್ತಿದ್ದಾರೆ. ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡುವುದನ್ನು ಸಚಿವ ಗೋವಿಂದ ಕಾರಜೋಳ. ದುರ್ಯೋಧನ  ಸೇರಿದಂತೆ ಹಲವರು ವಿರೋಧಿಸಿ ಸಮಾಜಕ್ಕೆ ಅವಮಾನವಾಗುವಂತೆ ಮಾತನಾಡುತ್ತಿದ್ದಾರೆ, ಅಲ್ಲದೆ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ದಲಿತ ಸಮುದಾಯಗಳು ವಿರೋಧ
ಹೌದು...ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಲು ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ವೀರಶೈವ ಜಂಗಮರು ಪಂಚಪೀಠಗಳಾದ ಕಾಶಿ, ರಂಭಾಪುರಿ, ಶ್ರೀಶೈಲ, ಉಜ್ಜಿಯಿನಿ, ಕೇದಾರ ಪೀಠಗಳಿಗೆ ಸೇರಿದವರಾಗಿದ್ದಾರೆ. ಈ ಸಮುದಾಯದವರು ಅಸ್ಪೃಶ್ಯರಲ್ಲ. ಅಲ್ಲದೇ ಈ ಸಮುದಾಯದವರನ್ನು ಸಮಾಜದಲ್ಲಿ ಗೌರವದಿಂದ ಕಾಣಲಾಗುತ್ತಿದೆ. ಹಾಗಾಗಿ ಇವರಿಗೆ ಎಸ್ಸಿ ಪ್ರಮಾಣ ಪತ್ರ ನೀಡಬಾರದು.  ಈಗಾಗಲೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದ ಚಿಕ್ಕಮಠ ಕುಟುಂಬದವರು ತಮ್ಮ ಮಗನ ಶಾಲಾ ದಾಖಲಾತಿ ತಿದ್ದುಪಡಿ ಮಾಡಿಕೊಂಡು ಬೈಲಹೊಂಗಲ ತಹಸೀಲ್ದಾರರಿಂದ 3 ವರ್ಷದ ಹಿಂದೆ 2018 ರಲ್ಲಿ ಬೇಡ ಜಂಗಮ ಅಂತಾ ಪ್ರಮಾಣ ಪತ್ರ ಪಡೆದುಕೊಂಡಿರುತ್ತಾರೆ. ಇದನ್ನು ಬೈಲಹೊಂಗಲ ಸರ್ವ ದಲಿತ ಸಂಘಟನೆಗಳು ವಿರೋಧ ಮಾಡಿದ್ದವು.

Latest Videos
Follow Us:
Download App:
  • android
  • ios