ಹಸಿರು ಪಟಾಕಿ ಬಳಸುವಾಗ ಎಚ್ಚರ ವಹಿಸಿ
ಹಸಿರು ಪಟಾಕಿ ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿರುತ್ತಾರೆ.
ತುಮಕೂರು: ಹಸಿರು ಪಟಾಕಿ ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿರುತ್ತಾರೆ.
ತುಮಕೂರು ಮಹಾನಗರ ಪಾಲಿಕೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಈ ಕಾರ್ಯಪಡೆಯು ಹಸಿರು ಪಟಾಕಿ ಅಲ್ಲದೆ, ನಿಷೇಧಿತ ಪಟಾಕಿಯನ್ನು ದಾಸ್ತಾನು ಮಾಡಿದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದೆ ಎಂದು ತಿಳಿಸಿದ್ದಾರೆ.
ಪಟಾಕಿಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಪರಿಶೀಲಿಸುವುದು, ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇಲ್ಲದ ಪಟಾಕಿ ಹಸಿರು ಪಟಾಕಿಯಾಗಿರುವುದಿಲ್ಲ ಮತ್ತು ಅವುಗಳನ್ನು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
2018 ಪಟಾಕಿ ನಿಷೇಧ ದೇಶಕ್ಕೆ ಅನ್ವಯ
ಏನೆಲ್ಲಾ ನಿಷೇಧ?
- ಹೆಚ್ಚು ಬಣ್ಣ ಬರುವಂತೆ ಮಾಡುವ ಬೇರಿಯಂ ಮತ್ತು ಕೆಲವು ನಿಷೇಧಿತ ರಾಸಾಯನಿಕಗಳನ್ನು ಪಟಾಕಿಯಲ್ಲಿ ಬಳಸುವಂತಿಲ್ಲ
- ವಾಯುಮಾಲಿನ್ಯ, ಶಬ್ದಮಾಲಿನ್ಯ, ಘನತ್ಯಾಜ್ಯ ಉತ್ಪತ್ತಿ ಮಾಡುವ ಪಟಾಕಿಗಳ ಉತ್ಪಾದನೆ, ಮಾರಾಟ, ಬಳಕೆ ನಿಷಿದ್ಧ
- ಕಡಿಮೆ ರಾಸಾಯನಿಕ ಇರುವ, ಕಡಿಮೆ ಬೆಳಕು/ ಶಬ್ದ/ ಹೊಗೆ ಹೊರಸೂಸುವ ಹಸಿರು ಪಟಾಕಿ ಬಳಕೆ ಮಾಡಬಹುದು
- ಹಬ್ಬಗಳಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬೇಕು
- ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಮುನ್ನಾದಿನ ರಾತ್ರಿ 11:55 ರಿಂದ ಮತ್ತು 12:30ರ ನಡುವೆ ಪಟಾಕಿ ಸಿಡಿಸಬಹುದು
ನವದೆಹಲಿ: ಬೆಳಕಿನ ಹಬ್ಬವಾದ ದೀಪಾವಳಿ ಹತ್ತಿರ ಬರುತ್ತಿರುವುದರ ನಡುವೆಯೇ, ಈ ಹಿಂದೆ 2018ರಲ್ಲಿ ಬೇರಿಯಂ ರಾಸಾಯನಿಕ ನಿಷೇಧಿಸಿ ಹಸಿರು ಪಟಾಕಿಗೆ ಅನುಮತಿಸಿದ್ದ ಹಾಗೂ ಪಟಾಕಿ ಹಾರಿಸಲು ವಿಧಿಸಲಾಗಿದ್ದ ಸಮಯ ನಿರ್ಬಂಧದ ತನ್ನ ಆದೇಶವು ರಾಜಧಾನಿ ದೆಹಲಿಗೆ ಮಾತ್ರವಲ್ಲದೇ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್‌ನ ಈ ಸ್ಪಷ್ಟನೆ ಈ ದೀಪಾವಳಿ ಹಾಗೂ ಮುಂದಿನ ಹಬ್ಬ ಹರಿದಿನಗಳ ಮೇಲೆ ದೇಶವ್ಯಾಪಿ ಪರಿಣಾಮ ಬೀರಲಿದೆ. 2018ರಲ್ಲಿ ಹೊರಡಿಸಿದ್ದ ಪಟಾಕಿ ನಿಷೇಧ ಆದೇಶವನ್ನೂ ರಾಜಸ್ಥಾನದಲ್ಲೂ(Rajasthan) ಅನುಷ್ಠಾನಗೊಳಿಸುವಂತೆ ಕೋರಿ ಅಲ್ಲಿನ ಅರ್ಜಿದಾರರೊಬ್ಬರು ರಾಜಸ್ಥಾನ ಕೋರ್ಟ್ ಮೊರೆ ಹೋಗಿದ್ದರು. ಆಗ ಸುಪ್ರೀಂಕೋರ್ಟ್ (Supreme court) ಆದೇಶ ದೆಹಲಿಗೆ ಸೀಮಿತವಾಗಿದೆ ಎಂದು ರಾಜಸ್ಥಾನ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಅಪರೂಪದ ವಿದ್ಯಮಾನಕ್ಕೆ ಆಕಾಶವೇ ಕೆಂಪೇರಿತು: ಬಲ್ಗೇರಿಯಾ ಬಾನಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ನಾರ್ತರ್ನ್ ಲೈಟ್
ಇದಕ್ಕೆ ಸ್ಪಷ್ಟನೆ ನೀಡುವಂತೆ ರಾಜಸ್ಥಾನದ ಅದೇ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ, ಹಿಂದಿನ ಆದೇಶವನ್ನು ರಾಜಸ್ಥಾನ ರಾಜ್ಯವು ಗಮನಿಸಬೇಕು ಮತ್ತು ಅದು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಒಂದೊಂದು ರಾಜ್ಯಕ್ಕೆ ಒಂದು ನಿಯಮ ಮಾಡಲಾಗದು. ವಿಶೇಷವಾಗಿ ಹಬ್ಬದ ಸಮಯದಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ರಾಜ್ಯಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನರನ್ನು ಜಾಗೃತಗೊಳಿಸುವುದು ಮುಖ್ಯವಾಗಿದೆ. ವಾಯುಮಾಲಿನ್ಯ ತಡೆ ಕೇವಲ ಸುಪ್ರೀಂಕೋರ್ಟ್ ಕೆಲಸವಲ್ಲ’ ಎಂದಿತು.